ಮಂಗಳೂರಿನ ಕೂಳೂರು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ನೂತನವಾಗಿ ನಿರ್ಮಿಸಿದ ಇಂಟರ್ಲಾಕ್ ಸುಸಜ್ಜಿತ ಪಾರ್ಕಿಂಗ್ ಜಾಗದ ಮೊದಲನೆಯ ಹಂತದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.ಮಂಗಳೂರು ರಾಮಕೃಷ್ಣ ಮಠದ ಏಕಗಮ್ಯಾನಂದ ಮಹಾರಾಜ್ ಸ್ವಾಮೀಜಿ , ಕುಳೂರು ಚರ್ಚ್‍ನ ಧರ್ಮಗುರುಗಳಾದ ರೆವರೆಂಡ್ ಫಾದರ್ ವಿನ್ಸೆಂಟ್ ಡಿಸೋಜಾ
ಕೂಳೂರಿನ ನದಿ ತೀರದಲ್ಲಿ ಶೇಖರಣೆಗೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಲ್ಗುಣಿ ನದಿ ತೀರದಲ್ಲಿ ರಾಶಿ ಬಿದ್ದಿದ್ದ ಪ್ಲಾಸ್ಟಿಕ್, ನದಿಯಲ್ಲಿ ತೇಲಿ ಬಂದ ಟನ್‍ಗಟ್ಟಲೆ ತ್ಯಾಜ್ಯವನ್ನು ಸಂಘ ಸಂಸ್ಥೆ ಸ್ವಯಂ ಸೇವಕರು ಸ್ವಚ್ಚತಾ ಕಾರ್ಯ ನಡೆಸಿದರು. ಎಲ್ಲಾ ತ್ಯಾಜ್ಯಗಳನ್ನು ಸ್ವಯಂ ಸೇವಕರು ಹೆಕ್ಕಿ ಸ್ವಚ್ಛಗೊಳಿಸಿದರು. ಮಂಗಳೂರಿನ ರೇಂಜ್ ಅರಣ್ಯ ಇಲಾಖೆ, ಸಿಒಡಿಪಿ, ಎನ್‍ಇಸಿಎಫ್ ಮೊದಲಾದ ಸಂಘಟನೆಗಳುವರು ಸಹಕಾರ ನೀಡಿದ್ದಾರೆ.
ಮಂಗಳೂರು: ನಗರದ ಕೂಳೂರು ವಿ ಆರ್ ಎಲ್ ಬಳಿ ಇರುವ ನಾಗನ ಕಟ್ಟೆಯನ್ನು ಕಿಡಿಗೇಡಿಗಳು ದ್ವಂಸ ಮಾಡಿರುವ ಘಟನೆ ನಡೆದಿದೆ.ಹಲವಾರು ವರುಷಗಳಿಂದ ನಾಗನ ಕಟ್ಟೆ ಈ ಸ್ಥಳದಲ್ಲಿದ್ದು ಪೂಜೆ ಕೈಂಕರ್ಯ ನಡೆಯುತ್ತಿತ್ತು. ಆದರೆ ಯಾರೋ ಕಿಡಿಗೇಡಿಗಳು ಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕೃತ್ಯದ ಹಿಂದಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.