Home Posts tagged #malpe

ಮಲ್ಪೆ-ಮೊಳಕಾಲ್ಮೂರು ಹೆದ್ದಾರಿ ಅವ್ಯವಸ್ಥೆಯಿಂದಾಗಿ ಕೃತಕ ನೆರೆ

ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಮೊಳಕಾಲ್ಮೂರು ಬಳಿ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಉಂಟಾಗಿದೆ. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಉಂಟಾದ ನೆರೆಯಿಂದ ಆತ್ರಾಡಿಯ ಭಾಗದ ನಿವಾಸಿಗಳ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸದ ಹಿನ್ನೆಲೆಯಲ್ಲಿ ಮನೆಗೆ ಚರಂಡಿ ನೀರು

ವ್ಯಾಪ್ತಿ ಮೀರಿದ ಮೀನುಗಾರಿಕೆ ಜಗಳ, ತಕರಾರು || V4NEWS

ಇತ್ತೀಚೆಗೆ ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೋದ ಬೋಟನ್ನು ಮೀನು ಸಹಿತ ಭಟ್ಕಳದ ಮೀನುಗಾರರು ವಶಪಡಿಸಿಕೊಂಡ ಪ್ರಕರಣ ನಡೆದಿದೆ. ಅದು ಪೆÇೀಲೀಸು ಠಾಣೆ ಹತ್ತಿದೆ. ಕಳೆದ ತಿಂಗಳು ಗೋವಾ ಕರಾವಳಿಯಲ್ಲಿ ಎರಡು ಬಾರಿ ಕನ್ನಡ ಕಡಲ ಮೀನು ಬೋಟುಗಳನ್ನು ಅಲ್ಲಿನವರು ದರೋಡೆ ಮಾಡಿದರು ಎಂಬ ದೂರು ದಾಖಲಾಗಿತ್ತು. ಕಡಲ್ಗಳ್ಳರು ಎನ್ನುವುದು ಸಮುದ್ರ ಇತಿಹಾಸದ ಒಂದು ಭಾಗ. ಪೈರೇಟ್ಸ್‍ಗಳ ನಾನಾ ಸಿನಿಮಾ, ಕಾದಂಬರಿ, ಪುಸ್ತಕಗಳೆಲ್ಲ ಬಂದಿವೆ. ಅರಬ್ಬೀ ಸಮುದ್ರದಲ್ಲಿ ಕಡಲ್ಗಳ್ಳರು

ನೀರಿಗೆ ಬಿದ್ದ ಐಫೋನ್ ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ!

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‍ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‍ಗೆ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ. ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ-ಫೆÇೀನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್ನ ನೀರಿಗೆ

ಮಲ್ಪೆಯಲ್ಲೊಬ್ಬ ಮಾನವೀಯತೆಯ ಮಹಾರಾಜ : ನಾಯಿಗೆ ನೆರವಾದ ಆಪ್ತರಕ್ಷಕ

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬಂದರು ಮತ್ತು ಸಮುದ್ರದಲ್ಲಿ ಅವಘಡಗಳು ಸಂಭವಿಸಿದಾಗ ತಮ್ಮ ಜೀವವನ್ನೇ ಪಣಕ್ಕಿಟ್ಟು ಸದಾ ನೆರವಿಗೆ ಧಾವಿಸುವ ಮಾನವೀಯತೆಯ ಸರದಾರ ಈಶ್ವರ್ ಮಲ್ಪೆ, ಈ ಬಾರಿ ಎರಡು ನಾಯಿಗಳನ್ನು ರಕ್ಷಣೆ ಮಾಡಿದ್ದಾರೆ. ನೀವು ನಂಬಲಿಕ್ಕಿಲ್ಲ, ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ನಾಯಿಗಳು ಮಲ್ಪೆ ಬಂದರಿನ ಧಕ್ಕೆಯೊಳಗೆ ಹೊರ ಬರಲಾಗದೆ ಅಕ್ಷರಶಃ ಬಂಧಿಯಾಗಿದ್ದವು. ಎಲ್ಲ ಕಡೆ ನೀರಿನಿಂದ ಆವೃತವಾಗಿರುವುದರಿಂದ ನಾಯಿಗಳು ಒಳಗೇ ಬಂಧಿಯಾಗಿದ್ದವು.

ಬೆಂಗಳೂರಿನಲ್ಲಿ ನಾಪತ್ತೆಯಾದ ಬಾಲಕ : ಮಗನನ್ನು ಹುಡುಕುತ್ತ ಕಡಲತೀರಕ್ಕೆ ಬಂದ ಹೆತ್ತವರು

ಬೆಂಗಳೂರಿನ ಯಲಹಂಕದ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಆದಿತ್ಯ ಟಿ. (15), ಒಂದು ವಾರದ ಹಿಂದೆ ನಾಪತ್ತೆಯಾಗಿದ್ದಾನೆ. ಮೇ 29, 2023ರ ಸೋಮವಾರದಂದು ತನ್ನ ಪೋಷಕರಾದ ತಂದೆ ತಿಮ್ಮ ರಾಯಪ್ಪ ಮತ್ತು ತಾಯಿ ಅನಿತಾರಲ್ಲಿ ಕೂದಲು ಕಟ್ಟಿಂಗ್ ಮಾಡಿಸಿಕೊಂಡು ಬರುತ್ತೇನೆಂದು ಮಧ್ಯಾಹ್ನದ ಹೊತ್ತಿಗೆ ಹೋದವನು ಮರಳಿ ಮನೆಗೆ ಬಂದಿಲ್ಲ. ಈ ಬಗ್ಗೆ ಹೆತ್ತವರು ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ನಂತರ

ಮಲ್ಪೆ ಬೀಚ್ ಬಳಿ ಉದ್ಘಾಟನೆಗೊಂಡ ರುದ್ರಭೂಮಿ : ಮಾಜಿ ಶಾಸಕ ಕೆ. ರಘುಪತಿ ಭಟ್ ಭಾಗಿ

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿಯಿರುವ ರುದ್ರಭೂಮಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು ಮೇ 29, 2023 ರ ಸೋಮವಾರದಂದು ರುದ್ರಭೂಮಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು. ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಮತ್ತು ಮಾಜಿ ಶಾಸಕರಾದ ಕೆ. ರಘುಪತಿ ಭಟ್ ರವರು ಉದ್ಘಾಟಿಸಿದರು. ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಅವಧಿಯಲ್ಲಿ ಅವರ ಶಿಫಾರಸ್ಸಿನ ಮೇರೆಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ರೂಪಾಯಿ ಅನುದಾನ ರುದ್ರಭೂಮಿ ಅಭಿವೃದ್ಧಿ

ಮಲ್ಪೆಯಲ್ಲಿ ಯಕ್ಷಗಾನ ಕಲಾರಂಗದವರಿಂದ ತಾಳಮದ್ದಲೆ ಸಪ್ತಾಹ

ಇಂದು ಉಡುಪಿ ಜಿಲ್ಲೆಯ ಮಲ್ಪೆಯ ಬಾಲಕರ ಶ್ರೀ ರಾಮ ಭಜನಾ ಮಂದಿರದಲ್ಲಿ ಯಕ್ಷಗಾನ ಕಲಾರಂಗ ಆಯೋಜಿಸಿದ ತಾಳಮದ್ದಲೆ ಸಪ್ತಾಹದ ಆರನೇ ದಿನದ ತಾಳಮದ್ದಲೆ ಕಚದೇವಯಾನಿ ಸುಂದರವಾಗಿ ಪ್ರಸ್ತುತಗೊಂಡಿತು. ಈ ಸಂದರ್ಭದಲ್ಲಿ ಭಜನಾ ಮಂಡಳಿಯ ವತಿಯಿಂದ ಸಂಸ್ಥೆಯ ಅಧ್ಯಕ್ಷರನ್ನು ಗೌರವಿಸಲಾಯಿತು.

ಮಲ್ಪೆ : ಮೀನುಗಾರ ಮಹಿಳೆಯರ ಕಷ್ಟಗಳನ್ನು ಆಲಿಸಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್

ಉಡುಪಿಯ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು ಮಲ್ಪೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಇದೇ ವೇಳೆ ಮಲ್ಪೆಯ ಮೀನುಗಾರ ಮಹಿಳೆಯರ ಕಷ್ಟಗಳನ್ನು ಆಲಿಸಿದರು.ಈ ವೇಳೆ ಮಾತನಾಡಿದ ಅವರು ಬಿಜೆಪಿ ಪಕ್ಷವು ಸುಳ್ಳು ಭರವಸೆಯನ್ನು ನೀಡಿ ಮತ ಪಡೆದು ಯಾವ ಕೆಲಸವನ್ನು ಮಾಡದೆ ಮೋಸ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ನಾನು ಶಾಸಕನಾದರೆ ಮೀನುಗಾರರ ಸಮಸ್ಯೆಗಳಾದ ಪಾರ್ಕಿಂಗ್ ವ್ಯವಸ್ಥೆ , ಶೌಚಾಲಯ, ಮೀನು ಮಾರಾಟಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲಾಗುವುದು

ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತದಿಂದ ಅವಕಾಶ

ಮಲ್ಪೆ : ಮಲ್ಪೆ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಜಿಲ್ಲಾಡಳಿತವು ಅವಕಾಶ ಕಲ್ಪಿಸಿದ್ದು, ಅದರಂತೆ ರವಿವಾರ ಜಲಸಾಹಸಗಳು ಆರಂಭಗೊಳ್ಳುವ ಮೂಲಕ ಮಲ್ಪೆ ಬೀಚ್‌ನಲ್ಲಿ ಚಟುವಟಿಕೆ ಗರಿಗೆದರಿವೆ. ಮಳೆಗಾಲದ ಹಿನ್ನೆಲೆಯಲ್ಲಿ 5 ತಿಂಗಳಿಂದ ಬೀಚ್‌ನಲ್ಲಿ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿದ್ದವು. ಸೆ. 15ಕ್ಕೆ ನಿಷೇಧದ ಅವಧಿ ಮುಗಿದರೂ ಪ್ರತಿಕೂಲ ಹವಾಮಾನದ ಕಾರಣ ಅವಕಾಶ ನೀಡಿರಲಿಲ್ಲ. ಇದೀಗ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಕಳೆ ಬಂದಂತಾಗಿದೆ. ರವಿವಾರ

ಮಾತಾಡು ಕನ್ನಡ : ಸಾಮೂಹಿಕ ಕನ್ನಡ ಗೀತೆ ಗಾಯನ

ಮಲ್ಪೆ : 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಸರಕಾರದ ಆಶಯದಂತೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಗ್ರಾಮಪಂಚಾಯತ್ ತೆಂಕನಿಡಿಯೂರು ಇವರ ಸಂಯುಕ್ತ ಆಶ್ರಯದಲ್ಲಿ ಮಾತನಾಡು ಕನ್ನಡ ಕಾರ್ಯಕ್ರಮದಲ್ಲಿ ಸಾಮೂಹಿಕ ಗೀತ ಗಾಯನ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿರುವ ಐದು ದಿನಗಳ ಕಾರ್ಯಕ್ರಮವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ಶ್ರೀಮತಿ ಗೀತಾ