Home Posts tagged #modi in mangalore

ಬಂದರು ಮೂಲಕ ರಫ್ತು ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ : ಪ್ರಧಾನಿ ಮೋದಿ

ಬಂದರು ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಸಾಗರ ಪ್ರವಾಸೋದ್ಯಮಕ್ಕೆ ಮಂಗಳೂರು ಬಂದರು ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿದೆ. ಕಳೆದ ವರ್ಷದಲ್ಲಿ 15 ಸಾವಿರ ವಿದೇಶಿ ಪ್ರವಾಸಿಗರು ಮಂಗಳೂರು ಬಂದರು ಮೂಲಕ ಬಂದಿರುತ್ತಾರೆ. ಸಾಗರ ಪ್ರವಾಸೋದ್ಯಮದ ಪ್ರಯೋಜನ ಹಾಗೂ ಲಾಭವನ್ನು ಟ್ಯಾಕ್ಸಿ, ಆಟೋ ಚಾಲಕರು ಸಣ್ಣ ವ್ಯಾಪಾರಿಗಳು

ಪ್ರಧಾನಿ ಮೋದಿ ಅವರಿಂದ 8 ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ

ಕಂಟೇನರ್‍ಗಳು ಹಾಗೂ ಇತರೆ ಸರಕು ನಿರ್ವಹಣೆಗಾಗಿ ಬರ್ತ್ ಸಂಖ್ಯೆ 14ರ ಯಾಂತ್ರೀಕರಣ, ಬಿಎಸ್ 6 ಶ್ರೇಣಿ ಇಂಧನಗಳ ಉತ್ಪಾದನೆ, ಪರಿಸರ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಸಮುದ್ರ ಲವಣ ನೀರು ಶುದ್ಧೀಕರಣ ಘಟಕ. ಶುದ್ಧ ನೀರಿನ ಸಂರಕ್ಷಣೆ, 30 ಎಂಎಲ್‍ಡಿ ಲವಣ ನೀರು ಶುದ್ಧೀಕರಣ ಸಾಮಥ್ರ್ಯದೊಂದಿಗೆ ಸುಸ್ಥಿರತೆಗೆ ಉತ್ತೇಜನ. ಎನ್‍ಎಂಪಿಯಲ್ಲಿ ಸಮಗ್ರ ಎಲ್‍ಪಿಜಿ ಹಾಗೂ ಬೃಹತ್ ಪಿಒಎಲ್ ಸೌಲಭ್ಯ ಸ್ಥಾಪನೆ. 2,200 ಜನರಿಗೆ ಉದ್ಯೋಗವಕಾಶಗಳು,

ರೈತರಿಗೆ ಮತ್ತು ಮೀನುಗಾರರಿಗೆ ಸೌಲಭ್ಯ ವಿತರಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಹಾಗೂ ಮತ್ಸ್ಯಾ ಸಂಪಾದನಾ ಯೋಜನೆಯ ಆಳ ಸಮುದ್ರ ಮೀನುಗಾರಿಕೆಯ ಬೋಟ್ ಫಲಾನುಭವಿಗಳಿಗೆ ಆದೇಶ ಪತ್ರವನ್ನು ವೇದಿಕೆಯಲ್ಲಿ ವಿತರಿಸಿದರು.

ಮಂಗಳೂರು ಮಲ್ಲಿಗೆ, ಪರಶುರಾಮನ ಸ್ಮರಣಿಕೆಯೊಂದಿಗೆ ಸ್ವಾಗತ

ಬಂಗ್ರಕೂಳೂರಿನಲ್ಲಿ ಕಾಯ್ದಿರಿಸಲಾದ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೊನೊವಾಲ್ ಅವರು ಮೈಸೂರು ಪೇಟ ಹಾಗೂ ರತ್ನ ಮಾಲೆ ಮತ್ತು ಉಡುಪಿ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸ್ವಾಗತಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರು ಮಲ್ಲಿಗೆ ಮಾಲಾರ್ಪಣೆ ಮಾಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅವರು ಪರಶುರಾಮನ ಸ್ಮರಣಿಕೆಯನ್ನು ನೀಡಿ

ಮಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ : ನವಮಂಗಳೂರು ಬಂದರಿನಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ

ಪ್ರಧಾನಿ ನರೇಂದ್ರ ಮೋದಿ ಅವರು, ನವಮಂಗಳೂರಿನ ಬಂದರಿನಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಬಂದರು ಇಲಾಖೆ ಸಚಿವ ಸರ್ಬಾನಂದ್ ಸೋನೊವಾಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹರ್ದಿಪ್ ಸಿಂಗ್ ಪುರಿ, ಶ್ರೀಪಾದ್ ಯಶೋನಾಯಕ್, ಸಂತುನು ಠಾಕೂರ್

ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ

ಕೂಳೂರಿನ ಗೋಲ್ಡ್ ಪಂಚ್ ಸಿಟಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಗೋಲ್ಡ್ ಪಿಂಚ್ ಸಿಟಿಯತ್ತ ಜನಸಾಗರ ಹರಿಯಲಾರಂಭಿಸಿದೆ. ಬಿಜೆಪಿ ಕಾರ್ಯಕರ್ತರು, ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಂಡೋಪತಂಡವಾಗಿ ಗೋಲ್ಡ್ ಪಿಂಚ್ ಸಿಟಿಯತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಬೆಳಗ್ಗೆ 11ರಿಂದ ಗೋಲ್ಡ್ ಪಂಚ್ ಸಿಟಿ ಮೈದಾನದತ್ತ ಜನರು ಮುಖ ಮಾಡಿದ್ದಾರೆ. ಮಂಗಳೂರಿನ ಪ್ರತಿ ವಾರ್ಡ್ ನಿಂದ ಜನರನ್ನು ಕಾರ್ಯಕ್ರಮಕ್ಕೆ