ವಿ4 ಸ್ಟ್ರೀಮ್ ಓಟಿಟಿಯು ಕನ್ನಡ ಚಲನಚಿತ್ರವನ್ನು ತುಳು ಭಾಷೆಗೆ ಡಬ್ಬಿಂಗ್ ಮಾಡುವ ಮೂಲಕ ಸಿನಿ ಪ್ರೇಕ್ಷರನ್ನು ಮನರಂಜಿಸಿದೆ. ಇದೀಗ ಮೊಟ್ಟ ಮೊದಲ ಬಾರಿಗೆ ಕೊಂಕಣಿ ಭಾಷೆಯ `ನಶೀಬಾಚೊ ಖೆಳ್’ ಎನ್ನುವ ಸಿನಿಮಾವನ್ನು `ನಸೀಬ್ ಏರೆಗುಂಡು ಏರೆಗಿಜ್ಜಿ’ ಹೆಸರಲ್ಲಿ ಡಬ್ ಮಾಡಲಾಗಿದ್ದು, ಮೋಂತಿ ಫೆಸ್ಟ್‍ನ ದಿನದಂದು ವಿ4 ಸ್ಟ್ರೀಮ್‍ನಲ್ಲಿ ತೆರೆ ಕಂಡಿದೆ.
ಮಂಗಳೂರು ಕ್ಯಾಮ್ ಫಿಲ್ಮ್ ಅರ್ಪಿಸುವ ಪ್ರೆಸ್ಟನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ತಯಾರಾದ ಹೆನ್ರಿ ಡಿಸಿಲ್ವ ನಿರ್ಮಿಸಿದ ಹ್ಯಾರಿ ಫೆರ್ನಾಂಡಿಸ್ ನಿರ್ದೇಶಿಸಿದ ನಶೀಬಾಚೊ ಖೆಳ್ ಕೊಂಕಣಿ ಚಲನಚಿತ್ರವು ಈಗ ನಸೀಬ್ ಏರೆಗುಂಡ ಏರೆಗಿಜ್ಜಿ ಹೆಸರಿನಲ್ಲಿ ತುಳು ಸಿನಿಮಾ ಆಗಿ ಡಬ್ಬಿಂಗ್ ಆಗಿದೆ. ಈ ತುಳು ಸಿನಿಮಾ ಸೆಪ್ಟಂಬರ್ 8ರಂದು ವಿ4 ಸ್ಟ್ರೀಮ್ ಬಿಡುಗಡೆಗೊಳ್ಳಲಿದೆ. ಸುಮಾರು 35 ವರ್ಷಗಳ ಹಿಂದೆ ಹೆನ್ರಿ ಡಿ ಸಿಲ್ವರವರು ರಚಿಸಿದ ಕಾಜಾರಾಚೆ ಉತಾರ್ ಎಂಬ ನಾಟಕದ ಮೂಲ