Home Posts tagged #padubidre accident

ಪಡುಬಿದ್ರಿ : ಅಪಘಾತವಾದ ಕಾರನ್ನುಕಿಲೋ ಮೀಟರ್ ದೂರಕ್ಕೆ ಎಳೆದುಕೊಂಡು ಹೋದ ಟಿಪ್ಪರ್

ಟಿಪ್ಪರೊಂದರ ಹಿಂಭಾಗಕ್ಕೆ ಡಿಕ್ಕಿಯಾಗಿ ಸಿಲುಕಿಕೊಂಡ ಕಾರನ್ನು ಸುಮಾರು ಒಂದು ಕೀ.ಮೀ. ದೂರಕ್ಕೆ ಎಳೆದುಕೊಂಡೋದ ಘಟನೆ ಹೆಜಮಾಡಿ ಕನ್ನಾಂಗಾರಿನಲ್ಲಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ. ತಲೆ, ಕೈ, ಕಾಲು, ಮೂಗು ಸಹಿತ ದೇಹದ ಕೆಲ ಭಾಗಗಳಿಗೆ ಗಾಯಗೊಂಡ ಸಾಗರ ಮೂಲದ ಜಾಫರ್ ಖಾನ್, ಶಹೀನಾ ಹಾಗೂ ಯಾಸೀರ್ ಖಾನ್. ಇವರು ಸ್ಯಾಂಡ್ರೋ ಕಾರಿನಲ್ಲಿ ಸಾಗರದಿಂದ ಮಂಗಳೂರಿಗೆ

ಕಾಪುವಿನಲ್ಲಿ ಮೋರಿಗೆ ಢಿಕ್ಕಿಯಾದ ಕಾರು: ಒರ್ವನ ಸ್ಥಿತಿ ಗಂಭೀರ

ಕಾಪುವಿನ ಕೊಪ್ಪಲಂಗಡಿಯಲ್ಲಿ ಕಳೆದ ತಡರಾತ್ರಿ ನಡೆದ ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದ್ದು ಒರ್ವನ ಸ್ಥಿತಿ ಗಂಭೀರ ವಾಗಿದೆ ಎನ್ನಲಾಗಿದೆ. ಬೆಂಗಳೂರು ನೋಂದಾಣಿ ಸಂಖ್ಯೆಯ ಮಾರುತಿ ಕಾರಿನಲ್ಲಿ ಉಡುಪಿ ಮೂಲದವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದು, ಕೊಪ್ಪಲಂಗಡಿಯಲ್ಲಿ ಕಾರು ಮೋರಿಯೊಂದರ ತಡೆಗೋಡೆಗೆ ಡಿಕ್ಕಿಯಾಗಿ ಮೋರಿಗೆ ಬಿದ್ದ ಕಾರು

ಉಚ್ಚಿಲದ ಪಣಿಯೂರಿನಲ್ಲಿ ಕಾರಿಗೆ ಕಂಟೈನರ್ ಢಿಕ್ಕಿ: ಕಾರು ಚಾಲಕ ಪಾರು

ಕಾರಿಗೆ ಕಂಟೇನರ್ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ಪಣಿಯೂರು ಕ್ರಾಸ್ ಬಳಿ ಸಂಭವಿಸಿದೆ. ಉಡುಪಿ ಕಡೆಯಿಂದ ಬಂದ ಕಾರು ಉಚ್ಚಿಲ ಹೆದ್ದಾರಿ ಕ್ರಾಸ್ ಬಳಿ ಯುಟರ್ನ್ ಮಾಡುವ ವೇಳೆ ಹಿಂಬದಿಯಿಂದ ಬಂದ ಕಂಟೇನರ್ ಡಿಕ್ಕಿಯಾಗಿದೆ. ಘಟನೆಯಿಂದ ಕಾರಿನ ಹಿಂಭಾಗ ಜಖಂಗೊಂಡಿದೆ. ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ.  

ರಾಷ್ಟ್ರಪಕ್ಷಿಗೆ ಸ್ಕೂಟರ್ ಢಿಕ್ಕಿ: ದ್ವಿಚಕ್ರ ಸವಾರ ಮೃತ್ಯು

ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಿಲೊಂದಕ್ಕೆ ಡಿಕ್ಕಿಯಾಗಿ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಸವಾರ ರಸ್ತೆಯಂಚಿನ ಬಾಂಡ್ ಕಲ್ಲೊಂದಕ್ಕೆ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತ ಯುವಕ ಬೆಳಪು ನಿವಾಸಿ ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಅಬ್ದುಲ್ (25) ಎಂದು ಗುರುತಿಸಲಾಗಿದೆ. ಪಡುಬಿದ್ರಿ ಕಡೆಯಿಂದ ತನ್ನ ಸ್ಕೂಟರಲ್ಲಿ ಬರುತ್ತಿದ್ದ ಯುವಕನಿಗೆ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ.