ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ಚಿನ್ನದ ಪದಕವನ್ನು ಜಯಿಸಿದರು. ಶನಿವಾರ ನಡೆದ ಫೈನಲ್ ನಲ್ಲಿ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17 ಗೇಮ್ ಗಳಿಂದ ಸೋಲಿಸಿದರು. 33ರ ಹರೆಯದ ಪ್ರಮೋದ್ ವಿಶ್ವದ ನಂ.1 ಆಟಗಾರನಾಗಿದ್ದು,
ಶೂಟರ್ ಮನೀಶ್ ನರ್ವಾಲ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಇನ್ನೋರ್ವ ಶೂಟರ್ ಸಿಂಗ್ ರಾಜ್ ಅಧಾನ ಅವರು ಬೆಳ್ಳಿ ಪದಕ ಗೆದ್ದುಕೊಂಡರು. ಈ ಇಬ್ಬರು ಶನಿವಾರ ನಡೆದ ಪಿ4 ಮಿಕ್ಸೆಡ್ 50 ಮೀ. ಪಿಸ್ತೂಲ್ ಎಸ್ಎಚ್ 1 ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.19ರ ರ ಹರೆಯದ ನರ್ವಾಲ್ ಒಟ್ಟು 218.2 ಅಂಕ ಗಳಿಸಿ ಒಲಿಂಪಿಕ್ಸ್ ದಾಖಲೆ ನಿರ್ಮಿಸಿ ಚಿನ್ನ ಜಯಿಸಿದರು. ಮಂಗಳವಾರ ಕಂಚು ಗೆದ್ದಿದ್ದ ಅಧಾನ 216.7 ಅಂಕ ಗಳಿಸಿ