Home Posts tagged #pilikula

ಪಿಲಿಕುಳ‌ : ಇರುವೆಗಳಿಂದ ಹಾನಿಗೊಳಗಾಗಿದ್ದ ಹಾವು ಸುರಕ್ಷಿತ

ಮಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲೊಂದಾದ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಹಾವೊಂದಕ್ಕೆ ಇರುವೆಗಳ ಹಿಂಡು ಕಾಟ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಸ್ವತಃ ಪಿಲಿಕುಳದ ನಿರ್ದೇಶಕರೇ ಸ್ಪಷ್ಟನೆ ನೀಡಿದ್ದು, ‘ಇರುವೆಯ ಕಿರುಕುಳಕ್ಕೊಳಗಾಗಿದ್ದ ಹಾವು ಸುರಕ್ಷಿತವಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಪಿಲಿಕುಳ‌

ಪಿಲಿಕುಳ ನಿಸರ್ಗಧಾಮದಲ್ಲಿ ಸಸಿನೆಟ್ಟ ಸಚಿವ ಅರವಿಂದ ಲಿಂಬಾವಳಿ

ಮಂಗಳೂರಿನ ಪಿಲಿಕುಳದ ನಿಸರ್ಗಧಾಮಕ್ಕೆ ರಾಜ್ಯ ಅರಣ್ಯ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿಯವರು ಭೇಟಿ ನೀಡಿದರು. ಬಳಿಕ ಪಿಲಿಕುಳ ನಿಸರ್ಗಧಾಮವನ್ನು ವೀಕ್ಷಿಸಿದರು. ಇದೇ ವೇಳೆ ಗಿಡ ನೆಟ್ಟು ನೀರುಣಿಸಿ ವನಮಹೋತ್ಸವದ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಅರಣ್ಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.