Home Posts tagged #pm narendra modi

ಮಂಗಳೂರಿಗೆ ಮೋದಿ: ತರಾತುರಿಯಲ್ಲಿ ರಸ್ತೆಗೆ ತೇಪೆ ಕಾರ್ಯ

2024 ಲೋಕಸಭಾ ಚುನಾವಣೆ ನಿಮ್ಮಿತ್ತ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮತಯಾಚನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ ೧೪ರಂದು ಮಂಗಳೂರಿಗೆ ಆಗಮಿಸಲ್ಲಿದ್ದು, ಮಂಗಳೂರು ನಗರವನ್ನು ಸ್ವಚ್ಚ ಹಾಗೂ ಸುಂದರಗೊಳಿಸುವ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಏಪ್ರಿಲ್ 14ರಂದು ನಗರಕ್ಕೆ

ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ : ಪೂರ್ವಭಾವಿ ಸಭೆ

ಮಂಗಳೂರು: ವಿಶ್ವ ನಾಯಕ, ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದೀಯವರು ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ಇದೇ ಏಪ್ರಿಲ್ 14 ರಂದು ಮಂಗಳೂರಿಗೆ ಆಗಮಿಸಿ ಬೃಹತ್ ರೋಡ್ ಶೋ ನಲ್ಲಿ ಭಾಗವಹಿಸಲಿರುವ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆಯನ್ನು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಇಡೀ ದೇಶವೇ ಈಗ ಲೋಕಸಭಾ ಚುನಾವಣೆಗೆ ಸಜ್ಜಾಗಿದ್ದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಚಟುವಟಿಕೆಗಳು ಭರದಿಂದ

ಮಂಗಳೂರು: ಮಹಾಶಕ್ತಿ ಕೇಂದ್ರದ ಬಿಜೆಪಿಯ ಪ್ರಮುಖರ ಸಭೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪಶ್ಚಿಮ ಮಹಾಶಕ್ತಿ ಕೇಂದ್ರದ ಬಿಜೆಪಿಯ ಪ್ರಮುಖರ ಪೂರ್ವಭಾವಿ ಸಭೆಯು ಮಂಗಳಾದೇವಿ ದೇವಸ್ಥಾನದ ಬಳಿಯ ಶ್ರೀದೇವಿ ನಿಲಯದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ದೇಶ ಮೊದಲು ಎನ್ನುವ ಸಿದ್ಧಾಂತಕ್ಕೆ ತಕ್ಕಂತೆ ಸೈನ್ಯದಲ್ಲಿ ಸೇವೆ ಸಲ್ಲಿಸಿ, ಇದೀಗ ಜನಸೇವೆಗೆ ಬಂದಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ನಮ್ಮ ಜಿಲ್ಲೆಯಿಂದ ನರೇಂದ್ರ ಮೋದಿಯಂತಹ ವಿಶ್ವ

ಮಂಗಳೂರು-ತಿರುವನಂತಪುರಂ ವಿಸ್ತರಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್- ತಿರುವನಂತಪುರ ವಿಸ್ತರಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುಜರಾತ್ ನ ಅಹಮ್ಮದಾಬಾದ್ ನಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಿದರು. ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ವಂದೇ ಭಾರತ್ ರೈಲು ಇನ್ನು ಮುಂದೆ ಮಂಗಳೂರು ತಿರುವನಂತಪುರ ನಡುವೆ ಸಂಚರಿಸಲಿದೆ. ಮಂಗಳೂರಿನಿಂದ ಬೆಳಿಗ್ಗೆ 6.15ಕ್ಕೆ ಹೊರಟು ಅಪರಾಹ್ನ 3.5ಕ್ಕೆ ತಿರುವನಂತಪುರ

ಕಾವೂರು: ಪ್ರಧಾನಿಗೆ ಪೋಸ್ಟ್ ಕಾರ್ಡ್ ಮೂಲಕ ಅಭಿನಂದನೆ ಸಲ್ಲಿಸುವ ಅಭಿಯಾನ

ಕಾವೂರು: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ವೈಭವವನ್ನು ಮರು ಸೃಷ್ಟಿಸಿ ಶ್ರೀ ಬಾಲರಾಮನ ಪ್ರತಿಷ್ಟೆಯನ್ನು ಮಾಡಿ ಕೋಟಿ ಕೋಟಿ ಜನರ ಆಶಯ ಈಡೇರಿಸಿದ್ದು, ಇದಕ್ಕಾಗಿ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಪ್ರಧಾನಿಗೆ ಸಾವಿರಾರು ಪೋಸ್ಟ್ ಕಾರ್ಡ್ ಮೂಲಕ ಅಭಿನಂದನೆ ಸಲ್ಲಿಸುವ ಅಭಿಯಾನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು, ಸಂತನಂತೆ ಬದುಕು ನಡೆಸುತ್ತಾ ಸನಾತನ ಧರ್ಮದ ಅಸ್ಮಿತೆಯ ಪ್ರತೀಕವಾದ ಶ್ರೀರಾಮನ ಮಂದಿರವನ್ನು

ಕೇಂದ್ರ ಬಜೆಟ್ : 2047ಕ್ಕೆ ಅರಳಲಿದೆ ವಿಕಸಿತ್ ಭಾರತ್ ಆಶ್ವಾಸನೆ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಮೂಲಕ ಬಿಜೆಪಿ ಒಕ್ಕೂಟ ಸರಕಾರದ ಜನಪರ ಯೋಜನೆಗಳು ದೇಶದ ಮೂಲೆ ಮೂಲೆಗೆ ತಲುಪಿದೆ ಎಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೇಳುವುದರ ಮೂಲಕ ಚುನಾವಣಾ ಪೂರ್ವ ತಾತ್ಕಾಲಿಕ ಬಜೆಟ್ ಮಂಡಿಸಿದರು. 2047ಕ್ಕೆ ವಿಕಸಿತ ಭಾರತ್ ಅರಳಲು ತಮ್ಮ ಬಜೆಟ್ ಸಹಾಯಕ ಎಂದು ಅವರು ಹೇಳಿದರು.ತಾತ್ಕಾಲಿಕ ಬಜೆಟ್ಟಿನ ಕೆಲವು ಮುಖ್ಯಾಂಶಗಳು ಮುಂದಿನಂತಿವೆ. ದೇಶದ ಜನರು ನಮಗೆ ಬಹುಮತ ನೀಡಿ ಗೆಲ್ಲಿಸಿದ್ದಾರೆ. ಕಳೆದ ಹತ್ತು ವರುಷಗಳಿಂದ ಭಾರತದ

ನವದೆಹಲಿ : ಹೊಸ ವರುಷದ ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ದೇಶದ ಜನರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ‘ಸಮೃದ್ಧ ರಾಷ್ಟ್ರ ನಿರ್ಮಾಣದ ಸಂಕಲ್ಪ ಕೈಗೊಳ್ಳಿ. ಹೊಸ ಗುರಿ ಮತ್ತು ಉದ್ದೇಶಗಳೊಂದಿಗೆ ಮುನ್ನಡೆಯಲು ಹೊಸವರ್ಷ ಬರುತ್ತಿದೆ’ ಎಂದು ದ್ರೌಪದಿ ಮುರ್ಮು ತಿಳಿಸಿದ್ದಾರೆ. ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಎಲ್ಲರಿಗೂ ಸಮೃದ್ಧಿ, ಶಾಂತಿ ಮತ್ತು ಉತ್ತಮ ಆರೋಗ್ಯ ದೊರೆಯಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್

*ಮಂಗಳೂರು: ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲಿಗೆ ಚಾಲನೆ

ಮಂಗಳೂರು- ಮಡಗಾಂವ್ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ವೀಡಿಯೊ ಕಾನ್ಫರೆನ್ಸ್  ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ಮಾಡಿದರು. ಪ್ರಧಾನ ನಗರಗಳನ್ನು ಜೋಡಿಸುವ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಡಗಾಂವ್‌ಗೆ ಶನಿವಾರ 12.13 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಪ್ರಥಮ ಪ್ರಯಾಣ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು – ಮಡಗಾಂವ್ ಸೇರಿ 6 ವಂದೇ ಭಾರತ್ ಹಾಗೂ 2

ಪ್ರಧಾನಿ ನರೇಂದ್ರ ಮೋದಿಯಿಂದ ನೂತನ ಸಂಸತ್ ಭವನ ಲೋಕಾರ್ಪಣೆ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೂತನ ಸಂಸತ್ ಭವನವನ್ನು ಲೋಕಾರ್ಪಣೆಗೊಳಿಸಿದರು. ಉದ್ಘಾಟನೆಗೂ ಮುನ್ನ ಅವರು ಹೋಮ, ಪೂಜೆಗಳನ್ನು ನೆರವೇರಿಸಿದರು. ಅಧೀನಂ ಸ್ವಾಮೀಜಿಗಳಿಂದ ‘ಸೆಂಗೋಲ್’ ಸ್ವೀಕರಿಸಿದ ಮೋದಿ, ಅದನ್ನು ಸಂಸತ್ ಭವನದ ಒಳಗೆ ಪ್ರತಿಷ್ಠಾಪಿಸಿದರು. ಬಳಿಕ ಸರ್ವ ಧರ್ಮ ಪ್ರಾರ್ಥನ ಸಮಾರಂಭದಲ್ಲಿ ಅವರು ಭಾಗಿಯಾದರು. ಎಲ್ಲ ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ನರೇಂದ್ರ ಮೋದಿ ಅವರು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಸಂಸತ್ ಭವನವನ್ನು

ಕೊನೆಯ ಚುನಾವಣೆ, ರಾಜಕೀಯ ನಿವೃತ್ತಿ ಎಂದು ಹೇಳುವ ಕಾಂಗ್ರೆಸ್ ನಾಯಕರನ್ನು ತಿರಸ್ಕರಿಸಿ: ಪ್ರಧಾನಿ ಮೋದಿ

ಇದು ನಮ್ಮ ಕೊನೆಯ ಚುನಾವಣೆ, ರಾಜಕೀಯ ನಿವೃತ್ತಿ ಎಂದು ಜನರ ಬಳಿಕ ಕಾಂಗ್ರೆಸ್ ತೆರಳಿ ಮತಯಾಚನೆ ಮಾಡುತ್ತಿದೆ. ಆಂತಹ ಕಾಂಗ್ರೆಸ್ ನಾಯಕರನ್ನು ತಿರಸ್ಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿ ಗುಡುಗಿದ್ದಾರೆ. ಅವರು ಮೂಲ್ಕಿಯ ಕೊಳ್ನಾಡುವಿನಲ್ಲಿ ನಡೆದ ಬಿಜೆಪಿಯ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ನಾಯಕ ನಿವೃತ್ತಿಯಾಗುತ್ತಿದ್ದಾನೆ. ಅದಕ್ಕಾಗಿ ವೋಟ್ ಕೊಡಿ ಎಂದು ಕಾಂಗ್ರೆಸ್ ಕೇಳುತ್ತಿದೆ.