Home Posts tagged #police station

ವಿಟ್ಲ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ: ಇಬ್ಬರ ಬಂಧನ

ವಿಟ್ಲ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಹಳೀರಾದಲ್ಲಿ ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ 20ರಿಂದ 30 ಜನರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸೂರಿಕುಮೇರಿ ನಿವಾಸಿ ಮಹಮ್ಮದ್ ಹನೀಫ್ (43), ಹಳಿರಾ ನಿವಾಸಿ ಜಗದೀಶ್ (25) ಬಂಧಿತರು.

ಅಕ್ರಮವಾಗಿ ಜಾನುವಾರುಗಳ ಸಾಗಾಟ: ಪಡುಬಿದ್ರಿ ಪೊಲೀಸರ ಕಾರ್ಯಾಚರಣೆ

ಎಚ್.ಆರ್.ನೋಂದಾಣಿ ಸಂಖ್ಯೆಯ ಲಾರಿಯೊಂದರಲ್ಲಿ ಹತ್ತಾರು ಕೋಣ, ಎತ್ತು, ಎಮ್ಮೆಗಳನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಬರುತ್ತಿದ್ದ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಪೊಲೀಸರು ಹೆಜಮಾಡಿ ಟೋಲ್ ಪಕ್ಕ ಅಡ್ಡ ಹಾಕಿ ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಕೇರಳಕ್ಕೆ ಇದನ್ನು ಸಾಗಿಸಲಾಗುತ್ತಿದೆ ಎಂಬುದಾಗಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು, ಹುಬ್ಬಳ್ಳಿ ಮೂಲದ ಚಾಲಕ ಹಾಗೂ ಕೇರಳ ಮೂಲದ ಲಾರಿ ಕ್ಲಿನರ್ ಪೊಲೀಸ್ ವಶದಲ್ಲಿದ್ದಾರೆ. ಲಾರಿಯಲ್ಲಿ ಅಡ್ಡಾದಿಡ್ಡಿಯಾಗಿ