Home Posts tagged #puttur (Page 2)

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶ

ಪುತ್ತೂರು: ಭಾರತವನ್ನು ಜಗತ್ತಿಗೇ ನಾಯಕತ್ವ ಸ್ಥಾನದಲ್ಲಿ ನಿಲ್ಲಿಸಿರುವ ನರೇಂದ್ರ ಮೋದಿಯವರ ವಿಚಾರದಲ್ಲಿ ಮೈಮರೆವು ಬೇಡ. ನಮ್ಮ ಗುರಿ, ಉದ್ದೇಶ, ಸಂಕಲ್ಪ, ಶ್ರಮ ಮೋದಿಯವರನ್ನು ಮತ್ತಷ್ಟು ವರ್ಷಗಳ ಕಾಲ ಪ್ರಧಾನಿಯಾಗಿಸುವುದೇ ಆಗಿರಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದ್ದಾರೆ. ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ

ಪುತ್ತೂರಿನ ಹರ್ಷ ಶೋರೂಂನ ಗೋದಾಮಿನಲ್ಲಿ ಅಗ್ನಿ ಅವಘಡ

ಪುತ್ತೂರು: ಪುತ್ತೂರು ದರ್ಬೆ ಸಂತೃಪ್ತಿ ಹೋಟೆಲ್ ಹಿಂಬದಿ ಹರ್ಷ ಶೋರೂಮ್ ಗೋದಾಮ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೋಟ್ಯಾಂತರ ಮೌಲ್ಯದ ಸೊತ್ತುಗಳು ಹಾನಿಗೊಂಡಿವೆ. ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಪುತ್ತೂರು ನಗರ ಪೊಲೀಸರು ಸಹಕರಿಸುತ್ತಿದ್ದಾರೆ.

ಗೊಳಿತೊಟ್ಟು: ದ್ವಿಚಕ್ರ ವಾಹನಗಳ ಅಪಘಾತ: ಮೂವರಿಗೆ  ಗಂಭೀರ ಗಾಯ

 ರಾಷ್ಟ್ರೀಯ ಹೆದ್ದಾರಿ 75  ಬೆಂಗಳೂರು ಮಂಗಳೂರು ಮಧ್ಯೆ ಗೊಳಿತೊಟ್ಟು ಸಮೀಪದ ಶಿರಾಡಿ ಗುಡ್ಡೆ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ  ಅಪಘಾತ ಸಂಭವಿಸಿ  ಮೂರು ಮಂದಿ ಗಂಭೀರ  ಗಾಯಗೊಂಡ ಘಟನೆ ಮಾ.30ರ ರಾತ್ರಿ ಸಂಭವಿಸಿದೆ.  ಗಾಯಗೊಂಡವರನ್ನು ಕೊಕ್ಕಡದ ರಜನೀಶ್, ಗಗನ್  ಹಾಗೂ ಗೊಳಿತೊಟ್ಟು ನ ವಿನಯ್ ಎಂದು ಗುರುತಿಸಲಾಗಿದೆ. ವಿನಯ್ ಎಂಬವರು  ಸಣ್ಣಂಪಾಡಿಯಿಂದ ಗೊಳಿತೊಟ್ಟು ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಕೊಕ್ಕಡದಿಂದ  ಉಪ್ಪಿನಂಗಡಿಯಲ್ಲಿ

ನೆಲ್ಯಾಡಿ: ಜಿಲ್ಲಾ ಪ್ರಚಾರ ಸಮಿತಿಯ ಸದಸ್ಯರಾಗಿ ಉಷಾ ಅಂಚನ್ ನೇಮಕ

ನೆಲ್ಯಾಡಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿ ನೆಲ್ಯಾಡಿಯ ಉಷಾ ಅಂಚನ್ ಅವರನ್ನು ನೇಮಕ ಮಾಡಲಾಗಿದೆ. ಉಷಾ ಅಂಚನ್ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರೂ ದ.ಕ. ಚುನಾವಣಾ ಪ್ರಚಾರ ಉಸ್ತುವಾರಿಯೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಚಾರ ಸಮಿತಿಗೆ ನೇಮಿಸಿದ್ದಾರೆ.  ತಾಲೂಕು ಪಂಚಾಯತ್ ಮಾಜಿ ಸದಸ್ಯೆಯಾಗಿ, ರಾಜ್ಯ ಕಾಂಗ್ರೆಸ್ ಓಬಿಸಿ ಘಟಕದ ಕಾರ್ಯದರ್ಶಿಯಾಗಿ, ಕಡಬ ಬ್ಲಾಕ್ ಮಹಿಳಾ

ಕಪಿಲಾ ನದಿಯಲ್ಲಿ ನಿಂತ ನೀರಿನ ಹರಿವು: ದೇವರ ಮೀನುಗಳಿಗೆ ತೊಂದರೆಯ ಆತಂಕ

 ಬೆಳ್ತಂಗಡಿ. ಶಿಶಿಲ ದೇವಸ್ಥಾನದಲ್ಲಿ ದೇವರ ಮೀನುಗಳಿಗೆ ಕಪಿಲಾ ನದಿಯಲ್ಲಿ ನೀರಿನ ಒಳ ಹರಿವು ಕಡಿಮೆ ಆಗಿರುವುದರಿಂದ   ದಿನ ನಿತ್ಯ ಊರ ಪರವೂರ ಭಕ್ತಾದಿಗಳು ಆಗಮಿಸುತ್ತಾರೆ. ಶಿಶಿಲ ದೇವಾಲಯದಲ್ಲಿ ಸ್ವಾಮಿಯ ದರ್ಶನದಂತೆ ಮೀನುಗಳಿಗೂ ಹರಕೆ ಇಲ್ಲಿ ವಿಶೇಷ. ಇತ್ತೀಚೆಗೆ ಇಲ್ಲಿ ಹರಿಯುತ್ತಿರುವ ಕಪಿಲಾ ನದಿಯಲ್ಲಿ ನಿತ್ಯ ಹರಿವು ನಿಂತಿದೆ. ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿಯ ಮೀನುಗಳಿಗೆ ಅತಿಯಾದ ಆಹಾರ ಹಾಕುವುದರಿಂದ ನೀರು ಕಲುಷಿತವಾಗಿ ದೇವರ

ಕಡಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ

ಪ್ರಮುಖ ಸ್ಥಾನಮಾನಗಳನ್ನು ನೀಡುವ ವೇಳೆ ಮುಸ್ಲಿಂ ಸಮುದಾಯವನ್ನು ಅವಗಣಿಸಲಾಗಿದೆ ಎಂದು ಮುಸ್ಲಿಂ ಮುಖಂಡರು ಶನಿವಾರ ಜರಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪಕ್ಷದಲ್ಲಿ ತಮ್ಮ ಸಮುದಾಯದ ಮುಖಂಡರನ್ನು ಅವಗಣಿಸಲಾಗಿದೆ ಎಂದು ಸಭೆ ಆರಂಭವಾಗುವ ಮುನ್ನ ಜಿಲ್ಲಾ ಮುಖಂಡರ ಜತೆ ಮುಸ್ಲಿಂ ಕಾರ್ಯಕರ್ತರು ವಾಗ್ವಾದಕ್ಕಿಳಿದರು. ಆ ವೇಳೆ ಸಭಾಂಗಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಕಡಬ: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ  ದನ ಸಾಗಾಟದ ಕಾರು ಡಿಕ್ಕಿ, ವ್ಯಕ್ತಿ ಮೃತ್ಯು-ಆಸ್ಪತ್ರೆಯ ಎದುರು ಪ್ರತಿಭಟನೆ-ಇಬ್ಬರು ಪೊಲೀಸ್ ವಶಕ್ಕೆ

ಕಡಬ: ಅಕ್ರಮ ದನ ಸಾಗಾಟದ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗೆ ಕಾರಣವಾದ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂಬವರು ಶನಿವಾರ ರಾತ್ರಿ ವೇಳೆಗೆ ತನ್ನ ಕಾರನ್ನು ಮರ್ಧಾಳದಲ್ಲಿ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಕಡಬ ಕಡೆಗೆ ಅಕ್ರಮ ದನ ಸಾಗಾಟ ಮಾಡುತ್ತಿದ್ದ ಮಾರುತಿ 800 ಕಾರೊಂದು ಢಿಕ್ಕಿ

ಕಡಬ ತಾ.ಪಂ.ಗೆ ಲೋಕಾಯುಕ್ತ ಪೊಲೀಸ್ ದಾಳಿ

ಕಡಬ ತಾಲೂಕು ಪಂಚಾಯತ್‌ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕಡಬ ತಾಲೂಕು ಪಂಚಾಯತ್ ನ ನೂತನ ಕಾರ್ಯ ನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರು ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯತ್‌ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅಲ್ಲಿಗೆ ಸಂಬಂಧಿಸಿದ ಅಕ್ರಮ ಅಸ್ತಿ ಪ್ರಕರಣದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಸೋಮವಾರಪೇಟೆಯಲ್ಲಿ ಜಯಣ್ಣ ಅವರಿಗೆ ಸೇರಿದ ಮನೆಯ ಮೇಲೆಯೂ ದಾಳಿ ನಡೆದಿದೆ. ಜಯಣ್ಣ

ಮಾರ್ಚ್ 25ರಿಂದ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಒಟ್ಟು 2,750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ. ಹೀಗಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ

ರಾಜಕೀಯ ಶುದ್ಧೀಕರಣಕ್ಕೆ ಬರುವುದಾದರೆ ಎಲ್ಲರಿಗೂ ಸ್ವಾಗತ: ಡಿವಿಎಸ್

ರಾಜಕೀಯ ಶುದ್ಧೀಕರಣದ ಬಗ್ಗೆ ಸ್ವಂತ ತೀರ್ಮಾನ ತೆಗೆದುಕೊಳ್ಳಲು ನನ್ನಿಂದ ಸಾಧ್ಯ, ಆದರೆ, ಸಮಾನ ಮನಸ್ಕರಾಗಿ ನನ್ನೊಂದಿಗೆ ಕೈಜೋಡಿಸಲು ಯಾರಾದರೂ ಬರುವುದಾದರೆ ಎಲ್ಲರಿಗೂ ಸ್ವಾಗತ ಎಂದು ಸಂಸದ, ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಹೇಳಿದರು. ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುಂಪುಗಾರಿಕೆಗಳಿದ್ದವು. ದೆಹಲಿ ಬಣ ಹಾಗೂ ಕರ್ನಾಟಕ