Home Posts tagged #rain

ಮಳೆಹನಿಗಳು ಬಾಲ್ಯದ ಮಾಯೆಯನ್ನು ನಾಳೆಗಾಗಿ ಉಳಿಸಬಹುದೇ?

ಮುಂಗಾರಿನ ಮೊದಲ ಮಳೆಹನಿಯು ಭೂಮಿಯನ್ನು ಮುಟ್ಟುತ್ತಿದ್ದಂತೆಯೇ ನೆನಪುಗಳ ಪ್ರವಾಹ ನಮ್ಮನ್ನು ಆವರಿಸಿಕೊಳ್ಳುತ್ತದೆ. ನಮ್ಮಲ್ಲಿ ಅನೇಕರಿಗೆ ಮುಂಗಾರು ಮಳೆಯು ಶಾಲೆಯ ಮೊದಲ ದಿನವನ್ನು ನೆನಪಿಸುತ್ತದೆ, ಒದ್ದೆಯಾದ ಮಣ್ಣಿನ ಸಿಹಿ ಸುಗಂಧ, ಎಲ್ಲವೂ ಒಟ್ಟಾಗಿ ಹೊಸ ಆರಂಭದ ಉತ್ಸಾಹ. ಈ ವಾರ್ಷಿಕ ಆಚರಣೆಯು ನಮ್ಮನ್ನು ಬಾಲ್ಯಕ್ಕೆ ಸಂಪರ್ಕಿಸುವುದು ಮಾತ್ರವಲ್ಲದೆ ನಮ್ಮನ್ನು

ಮೀನುಗಾರಿಕೆಗೆಂದು ಹಾಕಿದ್ದ ಬಲೆಗೆ ಹಾನಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಗಾಳಿ ಮಳೆಗೆ ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ದೊಡ್ಡ ದೊಡ್ಡ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದ್ದು, ಮೊಗವೀರಪಟ್ಟಣದಲ್ಲಿ ಮೀನುಗಾರಿಕೆಗೆಂದು ಹಾಕಿದ್ದ ಬಲೆ ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಕಲ್ಲಿಗೆ ಸಿಲುಕಿ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿತ್ತು. ಈ ನಡುವೆ ಸ್ಥಳೀಯ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಲಿದ್ದ ಕೆಲವು ದೋನಿಗಳು ಸಮುದ್ರದ ಅಲೆಗಳ ಕಾರಣದಿಂದ ಸಮುದ್ರದದ ದಡಕ್ಕೆ

ಕಾಪುವಿನಲ್ಲಿ ಕೆರೆಯಂತಾದ ಹೆದ್ದಾರಿ

ಕಾಪು ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಬಳಿಯ ಹೆದ್ದಾರಿ ಕೆರೆಯಾಗಿ ರೂಪುಗೊಂಡಿದ್ದು, ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಫಲವಾಗಿ ಇಲ್ಲಿ ನಿರಂತರ ಸಮಸ್ಯೆ ಅನುಭವಿಸುವಂತ್ತಾಗಿದ್ದು, ಸಣ್ಣ ಮಳೆಗೂ ರಸ್ತೆಯ ಈ ಭಾಗ ಜಲಾವೃತವಾಗುತ್ತಿದ್ದು, ಪಕ್ಕದ ಬಸ್ ತಂಗುದಾಣದಲ್ಲಿ ಬಸ್ ಕಾಯಲು ನಿಂತ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಮೇಲೆ ಮಳೆಯ ಕೆಸರು ಮಿಶ್ರಿತ ನೀರು ಎರಚಿ ನಿರಂತರ ಸಮಸ್ಯೆ ಅನುಭವಿಸುತ್ತಿದ್ದಾರೆ.

ಜೂನ್ 1ರಿಂದ ಜುಲೈ 31ರ ವರೆಗೆ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ

ದ.ಕ.ಜಿಲ್ಲೆಯ ಕರಾವಳಿಯಲ್ಲಿ ಜೂನ್ 1 ರಿಂದ ಜುಲೈ 31ರವರೆಗೆ ಒಟ್ಟು 61 ದಿನ ಮೀನುಗಾರಿಕೆ ನಿಷೇಧಿಸಿ ಮೀನುಗಾರಿಕೆ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಆಳಸಮುದ್ರ ಮೀನುಗಾರಿಕೆ ಸಂಪೂರ್ಣ ನಿಷೇಧಿಸಲಾಗಿದ್ದು, 10 ಅಶ್ವಶಕ್ತಿ ಹೆಚ್ಚು ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕಾ ಚಟುವಟಿಕೆ ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು ಅಥವಾ

ಬಂಟ್ವಾಳ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿ

ಬಂಟ್ವಾಳ: ಮಂಗಳವಾರ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿ ಉಂಟಾಗಿ ನಷ್ಟ ಸಂಭವಿಸಿದೆ. ಅರಳ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದು ಜನಹಿತಾಯ ವಿದ್ಯಾಸಂಸ್ಥೆಗೆ ಸೇರಿದ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದೆ. ಸಜೀಪನಡು ಗ್ರಾಮದ ದೇರಾಜೆ ಬರೆ ಎಂಬಲ್ಲಿ ಲೀಲಾ ಸಂಜೀವ ಪೂಜಾರಿಯವರ ಮನೆ ಸಮೀಪದ ಗುಡ್ಡ ಜರಿದು ಬಿದ್ದು ಮನೆಯ ಸುತ್ತ ಆವರಿಸಿಕೊಂಡಿದೆ. ಅರಳ ಗ್ರಾಮದ ಸುಂದರ ಎಂಬವರ ಮನೆಯ ಮೇಲೆ ಆವರಣ ಗೋಡೆ ಕುಸಿದು

ಚೀನಾದಲ್ಲಿ ಧಾರಕಾರ ಮಳೆ: 12 ಮಂದಿ ಸಾವು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯ ಸ್ಥಳಾಂತರ

ಚೀನಾದಲ್ಲಿ ಸುರಿಯುತ್ತಿರುವ ಧಾರಕಾರ ಮಳೆಯಿಂದ ಇದುವರೆಗೂ 12 ಮಂದಿ ಸಾವನ್ನಪ್ಪಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಹೆನ್ನಾನ್ ಪ್ರಾಂತ್ಯದ ಝೆಂಗ್ಜು ಪ್ರದೇಶದಲ್ಲಿ ಕೇವಲ ಒಂದು ಗಂಟೆಯ ಅವಧಿಯಲ್ಲಿ 201.9 ಮಿ,ಮೀ ಮಳೆಯಾಗಿದೆ. ಝೆಂಗ್ಜು ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ಹರಿಯುತ್ತಿದ್ದು, ನೂರಾರು ಮನೆ ಮಠಗಳು ನಾಶವಾಗಿವೆ. ಇದುವರೆಗೂ 12 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಮುಂಜಾಗೃತಾ

ಭಾರೀ ಮಳೆ : ದಕ್ಷಿಣ ಕನ್ನಡ ಆರೆಂಜ್ ಅಲರ್ಟ್ ಘೋಷಣೆ

ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪೂರ್ವ ಅರಬ್ಬಿ ಸಮುದ್ರ ಹಾಗೂ ಕಚ್ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆ ಮುಂದುವರೆದಿದೆ. ಉತ್ತರ ಕನ್ನಡ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ,