ಕಿನ್ನಿಗೋಳಿ: ಕಿನ್ನಿಗೋಳಿ ಸುತ್ತಮುತ್ತ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆಗಿಳಿಯುವ ತಂಡ ಕಾರ್ಯಾಚರಿಸುತ್ತಿದೆ. ಮನೆ ಮನೆಗೆ ಭೇಟಿ ನೀಡುತ್ತಿರುವ ಯುವಕನೋರ್ವ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಒಡವೆಗಳನ್ನು ಪಡೆದು, ತನ್ನ ಬಳಿ ಇರುವ ಪುಡಿಯೊಂದರಲ್ಲಿ ತನ್ನ ಪಾತ್ರೆಯಲ್ಲಿರುವ ನೀರಿನಲ್ಲಿ ತೊಳೆಯುತ್ತಾನೆ ಚಿನ್ನದ ಒಡವೆಗಳಿಗೆ ಹೊಳಪು
ಬೈಂದೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯ ಯಕ್ಷಗಾನ ಕಲಾವಿದರೊಬ್ಬರ ಮನೆಗೆ ನುಗ್ಗಿ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಶಿರೂರು ಮೇಲ್ಪೇಟೆ ಎಂಬಲ್ಲಿ ನಡೆದಿದೆ. ಮೇಲ್ಪೇಟೆ ಕೊಠಡಿಯಲ್ಲಿ ವಾಸವಾಗಿರುವ ಯಕ್ಷಗಾನ ಕಲಾವಿದ ಸಂತೋಷ್ ಮೊಗವೀರ(34) ಎಂಬವರಿಗೆ ಗುರುರಾಜ್ ಎಂಬಾತನನ್ನು ಫೇಸ್‌ಬುಕ್‌ನಲ್ಲಿ 2 ವರ್ಷಗಳ ಹಿಂದೆ ಪರಿಚಯವಾಗಿತ್ತು. ಗುರುರಾಜ್ ನ.9ರಂದು ಸಂತೋಷ್ ಅವರ ಕೊಠಡಿಗೆ ಬಂದು ಉಳಿದುಕೊಂಡಿದ್ದನು. ನ.12ರಂದು ಸಂತೋಷ್ ಹಾಗೂ
ನಗರದ ನಂತೂರು ಪದವು ಬಳಿ ಬೈಕ್ ಸವಾರನನ್ನು ತಡೆದು ನಿಲ್ಲಿಸಿ ಚಿನ್ನದ ಸರವನ್ನು ಸುಲಿಗೆಗೈದ ಮಂಗಳಮುಖಿಯನ್ನು ಕದ್ರಿ ಠಾಣೆಯ ಪೊಲೀಸರು ನ 29 ರ ಸೋಮವಾರ ಬಂಧಿಸಿದ್ದಾರೆ. ಮೂಲತಃ ಮೈಸೂರಿನ ಅಗ್ರಹಾರದ ಪ್ರಸ್ತುತ ಬೆಂಗಳೂರಿನ ನಿವಾಸಿ ಅಭಿಷೇಕ್ ಯಾನೆ ಗೊಂಬೆ ಯಾನೆ ಅನಾಮಿಕ (27) ಬಂಧಿತ ಆರೋಪಿಯಾಗಿದ್ದಾನೆ. ಗಣೇಶ್ ಶೆಟ್ಟಿ ಎಂಬವರು ಎರಡು ತಿಂಗಳ ಹಿಂದೆ ತನ್ನ ಬೈಕ್‌ನಲ್ಲಿ ನಂತೂರು ಪದವಿನಿಂದ ಬಿಎಸ್‌ಎನ್‌ಎಲ್ ಎಕ್ಸೇಂಜ್ ಬಳಿಯ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಠಾತ್
ಪಡುಬಿದ್ರಿ ಪೊಲೀಸ್ ಠಾಣೆಯ ನೂರು ಮೀಟರ್ ಅಂತರ, ಪೇಟೆಭಾಗದ ಪೊಲೀಸ್ ವಾಹನ ತಪಾಸಣಾ ಸ್ಥಳಕ್ಕೆ ಇಪ್ಪತ್ತು ಮೀಟರ್ ಅಂತರದಲ್ಲಿರುವ ಆರು ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸುವ ಮೂಲಕ ಸರಣಿ ಕಳ್ಳತನ ನಡೆಸಿದ್ದಾರೆ. ಪೊಲೀಸರಿಗೆ ಸವಾಲಾದ ಈ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರು ಸಿಸಿ ಕ್ಯಾಮಾರಗಳ ಮೊರೆ ಹೋಗಿದ್ದಾರೆ. ಕಳ್ಳತನ ನಡೆದ ಎರಡು ಅಂಗಡಿಗಳ ಅಂಚು ತೆಗೆದು ಒಳ ನುಗ್ಗಿದರೆ, ಉಳಿದ ಹಣ್ಣು ಹಂಪಲು, ಕಬ್ಬಿನ ಜ್ಯೂಸ್, ತರಕಾರಿ, ಹೂವಿನಂಗಡಿ ಇವುಗಳಿಗೆ ಭದ್ರತೆ
ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಅಡಿಕೆ ಕದ್ದ ಆರೋಪದ ಮೇಲೆ ಅಪ್ರಾಪ್ತ ಬಾಲಕನಿಗೆ ಹಲ್ಲೆ ಮಾಡಿರುವ ಘಟನೆ ನಡೆದಿದೆ, ಸುಳ್ಯ ತಾಲೂಕಿನ ಗುತ್ತಿಗಾರಿನ ಪುರ್ಲುಮಕ್ಕಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕನಿಗೆ ಹಲ್ಲೆ ನಡೆಸುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಬಾಲಕನಿಂದ ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾನೆ, ಹಲ್ಲೆ ನಡೆಸಿದ ಹತ್ತು ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಕಾರ್ಕಳ ಕುಕ್ಕಂದೂರು ಗ್ರಾಮದ ಗುಂಡ್ಯಡ್ಕ ದಲ್ಲಿ ವಾಸವಾಗಿರಯವ ದೇಜು ಶೆಟ್ಟಿ ರವರ ಮನೆಗೆ ತೋಟದ ಕೆಲಸಕ್ಕೆ ಬಂದ ಬೆಳ್ತಂಗಡಿ ತಾಲೂಕಿನ ಜಯಪ್ರಕಾಶ್ ಮನೆಯ ಒಡತಿ ಸರಳ ಶೆಟ್ಟಿ ರವರು ಸ್ನಾನಕ್ಕೆಂದು ಹೋದಾಗ ಅವರ ಬೆಡ್ ರೂಂನಲ್ಲಿದ್ದ ಚಿನ್ನದ ಉಂಗುರವನ್ನು ಕಳವು ಮಾಡಿದ್ದು ಈ ಬಗ್ಗೆ ಸರಳ ಶೆಟ್ಟಿ ರವರು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಅದರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಬಳಿಕ ಉಂಗುರವನ್ನು ವೇಣೂರಿನ ಸೊಸೈಟಿಯೊಂದರಲ್ಲಿ
ಉಳ್ಳಾಲ: ಎರಡು ಮನೆಗಳಿಗೆ ಬಾಗಿಲು ಮುರಿದು ನುಗ್ಗಿದ ಕಳ್ಳರ ತಂಡ, ಮನೆಯೊಳಗಿದ್ದ ಸೊತ್ತುಗಳನ್ನು ಹಾನಿಗೈದು ಒಂದು ಮನೆಯಿಂದ ವಾಚ್ ಕಳವುಗೈದು ಪರಾರಿಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಮೂಕಾಂಬಿಕಾ ದೇವಸ್ಥಾನ ಬಳಿ ವೇಳೆ ನಡೆದಿದೆ. ವಿದೇಶದಲ್ಲಿ ನೆಲೆಸಿರುವ ಸುರೇಶ್ ಎಂಬವರಿಗೆ ಸೇರಿದ ಮನೆಯ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಕಪಾಟು ಪುಡಿಗೈದು, ಮನೆಯೊಳಗಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೈದು ಹಣ ಹಾಗೂ ಒಡವೆಗಾಗಿ ಹುಡುಕಾಡಿ ಏನೂ ಸಿಗದೇ