ಮಂಗಳೂರು: ಮಾನವನ ಅಭಿವೃದ್ಧಿಯ ತೆವಲಿಗೆ ಅದೆಷ್ಟೋ ಪ್ರಾಣಿ, ಪಕ್ಷಿ ಸಂಕುಲ, ಸೂಕ್ಷ್ಮಜೀವಿಗಳು ಬಲಿಯಾಗುತ್ತಿವೆ. ಕಾಡು ಕಡಿದು ನಾಡು ಮಾಡಿ ತನ್ನ ಇರವನ್ನು ಗಟ್ಟಿ ಮಾಡಿಕೊಂಡ ಮಾನವ ಪರಿಸರದ ಇತರ ಜೀವಿಗಳ ಜೀವಿಸುವ ಹಕ್ಕನ್ನು ಕಸಿದುಕೊಂಡ ಇದರಿಂದ ನೆಲೆಕಳೆದುಕೊಂಡು ಅದೆಷ್ಟೋ ಜೀವಿಗಳು ಕಣ್ಮರೆಯಾಗಿವೆ. ಆದರೆ ಪ್ರಾಣಿ – ಪಕ್ಷಿಗಳ ಮೇಲೆ ಕಾಳಜಿ ಇದ್ದವರು
ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣ ಹಾಗೂ ಸೆಮಿನಾರ್ ಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥಹುದೇ ಒರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು ಹೇಗೆ ಬೆಳೆಸಬಹುದು ಎನ್ನುವುದಕ್ಕೆ ಮಾದರಿಯಾಗಿರುವ ಈ ವ್ಯಕ್ತಿ ಯಾರು ಹಾಗೂ ಇವರ ಸಾಧನೆಯೇನು