Home Posts tagged #sdpi

ಎಸ್‍ಡಿಪಿಐ ನಿಷೇಧಿಸಲು ಗೃಹ ಸಚಿವರು ಮಾಡಿದ ಗೂಡಂಗಡಿಯಲ್ಲ : ಅನ್ವರ್ ಸಾದತ್ ಬಜತ್ತೂರು ಆಕ್ರೋಶ

ತೊಕ್ಕೊಟ್ಟು : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರು ಎಸ್ ಡಿಪಿಯನ್ನು ನಿಷೇಧಿಸಲಾಗುವುದು ಎಂದು ಹೇಳುತ್ತಿದ್ದು ನಿಷೇಧಿಸಲು ಇದೇನೂ ಗೂಡಂಗಡಿಯಲ್ಲ. ಇದು ಚುನಾವಣಾ ಆಯೋಗದಲ್ಲಿ ನೋಂದಾಯಿತವಾದ ಒಂದು ರಾಜಕೀಯ ಪಕ್ಷ ಎಂದು ಎಸ್ ಡಿಪಿ ಐ ದ. ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ ಡಿಪಿ ಐ ದಕ್ಷಿಣ ಕನ್ನಡ ಜಿಲ್ಲಾ

ಮಂಗಳೂರಿನ ಹಲವೆಡೆ ಎನ್‍ಐಎ ದಾಳಿ : ಎಸ್ ಡಿ ಪಿ ಐ , ಪಿಎಫ್‍ಐ ಕಚೇರಿ, ನಾಯಕರ ಮನೆಗಳಲ್ಲಿ ಶೋಧ

ಎನ್‍ಐಎ ಅಧಿಕಾರಿಗಳು ಮಂಗಳೂರು ನಗರದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಎಸ್ಡಿಪಿಐ- ಪಿಎಫ್‍ಐ ಕಚೇರಿ ಸೇರಿದಂತೆ ನಾಯಕರ ಮನೆಗಳಿಗೆ ದಾಳಿ ನಡೆಸಿದ್ದಾರೆ.ಇದೇ ವೇಳೆ, ಎನ್‍ಐಎ ದಾಳಿಯನ್ನು ಖಂಡಿಸಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಸ್ಡಿಪಿಐ ಕಚೇರಿಗೆ ನಸುಕಿನಲ್ಲಿ ಮೂರು ಗಂಟೆ ವೇಳೆಗೆ ಮೀಸಲು ಪಡೆಯ ಭದ್ರತೆಯೊಂದಿಗೆ

ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ : ಎಸ್‍ಡಿಪಿಐಯ ರಿಯಾಝ್ ಫರಂಗಿಪೇಟೆ ಹೇಳಿಕೆ

ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಲ್ಲಿರುವ ಎಸ್‍ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಇಂದು ಬೆಳಗ್ಗೆ ಎನ್‍ಐಎ ಅಧಿಕಾರಿಗಳ ತಂಡ ಬಂಟ್ವಾಳ ಪೆÇಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ. ವಿಚಾರಣೆ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ. ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎನ್‍ಐಎ ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ

ಮಂಗಳಪೇಟೆಯ ಫಾಝಿಲ್ ಮನೆಗೆ ಭೇಟಿ ನೀಡಿದ SDPI ನಿಯೋಗ

ಮಂಗಳೂರು: ಇತ್ತೀಚೆಗೆ ಸುರತ್ಕಲ್ ಪೇಟೆಯಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾದ ಯುವಕ ಫಾಝಿಲ್ ರವರ ಮನೆಗೆ SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆಯವರ ನೇತೃತ್ವದ ನಿಯೋಗವು ಭೇಟಿ ನೀಡಿ ಫಾಝಿಲ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ದೈರ್ಯ ತುಂಬಲಾಯಿತು, ಕುಟುಂಬದೊಂದಿಗೆ ಪಕ್ಷವು ಸದಾ ಇರಲಿದೆ ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ, ದೈರ್ಯ ಕಳೆದುಕೊಳ್ಳದೇ ಕಾನೂನಿನ ಮೇಲೆ ನಂಬಿಕೆ ಇಟ್ಟು ಕಾನೂನು ಹೋರಾಟ ಮಾಡಿ ಕೊಲೆಗಟುಕರಿಗೆ

ಎಸ್‌ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ನಾಮಪತ್ರ ಸಲ್ಲಿಕೆ

ಮಂಗಳೂರು: ದಕ್ಷಿಣ ಕನ್ನಡ ವಿಧಾನ ಪರಿಷತ್ ಕ್ಷೇತ್ರಕ್ಕೆ ಡಿಸೆಂಬರ್ 10 ರಂದು ನಡೆಯುವ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಸ್ ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ಕಾರ್ಯದರ್ಶಿ, ಯುವ ನಾಯಕ ಶಾಫಿ ಬೆಳ್ಳಾರೆಯವರು ಇಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಇರುವಂತಹ ಸಮಸ್ಯೆ ಪರಿಹಾರವೇ ನನ್ನ ಗುರಿ ಎಂದು ಹೇಳಿದರು.

ಉಳ್ಳಾಲ: ಎಸ್‍ಡಿಪಿಐ ಪಕ್ಷದ ಕಚೇರಿ, ಮಾಹಿತಿ ಸೇವಾ ಕೇಂದ್ರ ಉದ್ಘಾಟನೆ

ಉಳ್ಳಾಲ. ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಳಾಂತರಿತ ಪಕ್ಷದ ಕಚೇರಿ ಮತ್ತು ಮಾಹಿತಿ ಸೇವಾ ಕೇಂದ್ರ ಉದ್ಘಾಟನೆಗೊಂಡಿತು.ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿದರು.ಎಸ್ ಡಿಪಿಐ ದ.ಕ ಪ್ರ.ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಎಸ್ ಡಿಪಿಐ ಉಳ್ಳಾಲ ನಗರ ಸಮಿತಿ ಕಚೇರಿಯನ್ನು ಉದ್ಘಾಟಿಸಿದರು.ಎಸ್ ಡಿಪಿಐ ರಾಜ್ಯ ಪ್ರ.ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ದಿಕ್ಸೂಚಿ

ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಸುಲೈಮಾನ್ ಹಾಜಿ ನಿಧನ : ಎಸ್ ಡಿಪಿಐ ಸಂತಾಪ

ಬಾಂಬೆ ಲಕ್ಕಿ ರೆಸ್ಟೋರೆಂಟ್ ಮಾಲಕ ಉದ್ಯಮಿ ಸುಲೈಮಾನ್ ಹಾಜಿ ರವರು ನಿಧನ ಹೊಂದಿದ್ದು ಇವರ ನಿಧನಕ್ಕೆ ಎಸ್ ಡಿಪಿಐ ತೀವ್ರ ಸಂತಾಪ ವ್ಯಕ್ತಪಡಿಸುತ್ತಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯನ್ನು ಹೊಂದಿದ ಅವರು ಕುದ್ರೋಳಿ ಜಾಮಿಯ ಮಸೀದಿಯ ಅಧ್ಯಕ್ಷರಾಗಿ ಪ್ರಸ್ತುತ ಟ್ರಸ್ಟಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ತನ್ನ ರೆಸ್ಟೋರೆಂಟ್ ನಲ್ಲಿ ದಿನನಿತ್ಯ ನಿರ್ಗತಿಕರಿಗೆ ಉಚಿತ ಆಹಾರವನ್ನು ನೀಡುತ್ತಿದ್ದರು ಮತ್ತು ಬಡವರ ಪಾಲಿಗೆ ಕೊಡುಗೈ ದಾನಿಯಾಗಿ

ಕ್ರೈಸ್ತ ಮಿಷನರಿಗಳ ಮೇಲೆ ಮತಾಂತರದ ಆಧಾರರಹಿತ ಆರೋಪ- ಶಾಸಕ ಗೂಳಿಹಟ್ಟಿ ಸುಳ್ಳುಹೇಳಿಕೆ ಖಂಡನೀಯ : ಎಸ್.ಡಿ.ಪಿ.ಐ

ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್‌ ಅವರು “ಕ್ರೈಸ್ತ ಮಿಷನರಿಗಳು ರಾಜ್ಯದಲ್ಲಿ ವ್ಯಾಪಕವಾಗಿ ಮತಾಂತರ ಮಾಡುತ್ತಿದ್ದಾರೆ, ತಡೆಯಲು ಹೋದವರ ಮೇಲೆ ಜಾತಿ ನಿಂದನೆ ಮತ್ತು ಅತ್ಯಾಚಾರ ಪ್ರಕರಣಗಳನ್ನು ಹಾಕುತ್ತಾರೆ” ಎಂದು ಆಧಾರ ರಹಿತ ಆರೋಪ ನಡೆಸಿ ಸದನವನ್ನು ದಾರಿ ತಪ್ಪಿಸುವುದರೊಂದಿಗೆ ಇಡೀ ಕ್ರೈಸ್ತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಅವಮಾಸಿರುವುದನ್ನು ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ

ಮಹಿಳಾ ಪೊಲೀಸ್ ಅಧಿಕಾರಿಯ ಅತ್ಯಾಚಾರ, ಹತ್ಯೆ ಖಂಡಿಸಿ : ಮೂಡಬಿದ್ರೆಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣವನ್ನು ಖಂಡಿಸಿ ಮೂಡಬಿದ್ರೆಯಲ್ಲಿ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಎಸ್‌ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು,ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಶೀಘ್ರ ಮುಕ್ತಾಯಗೊಳಿಸಿ ಆರೋಪಿಗಳಿಗೆ ಮರಣದಂಡನೆ ವಿಧಿಸುವ ಹೊಸ ಕಾನೂನನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ರು. ಹೋರಾಟಗಾರ ಅಚ್ಯುತ ಸಂಪಿಗೆ

ಪುತ್ತೂರಿನಲ್ಲಿ ಎಸ್‌ಡಿಪಿಐನಿಂದ ಪ್ರತಿಭಟನೆ

ಪುತ್ತೂರು: ಜಾತಿ, ಧರ್ಮದ ಹೆಸರಿನಲ್ಲಿ ಗಲಭೆ ನಡೆಸುತ್ತಾ ಬರುತ್ತಿರುವ ಇದೀಗ ಸಾವರ್‌ಕರ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಫ್ಯಾಸಿಸ್ಟ್ ಶಕ್ತಿಗಳಿಗೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಸ್‌ಡಿಪಿಐ ಫ್ಯಾಸಿಸಂನ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದರು. ಅವರು ಎಸ್‌ಡಿಪಿಐ ವತಿಯಿಂದ ಪುತ್ತೂರಿನ ದರ್ಬೆಯಲ್ಲಿ ನಡೆದ ಪ್ರತಿಭಟನೆಯನ್ನು