ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿಬೆಟ್ಟು ಬಳಿ ಸಿಡಿಲಾಘತಕ್ಕೆ ಕಾಲೇಜು ವಿದ್ಯಾರ್ಥಿ ಬಲಿಯಾದ ಘಟನೆ ಕಳೆದ ರಾತ್ರಿ ನಡೆದಿದೆ ಶಿರ್ವ ಎಂ ಎಸ್ ಆರ್ ಎಸ್ ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ ರಕ್ಷಿತ್ ಪೂಜಾರಿ (20 )ಮೃತಪಟ್ಟವರು. ಕಳೆದ ರಾತ್ರಿ ಸ್ನಾನ ಮಾಡಲು ಬಚ್ಚಲು ಮನೆ ಬಳಿ ನಿಂತಿದ್ದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ನೆಲಕ್ಕೆ ಬಿದ್ದಿದ್ದ
ಅಡಿಕೆ ತೆಗೆಯುವ ವೇಳೆ ಕರೆಂಟ್ ಶಾಕ್ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ಉಡುಪಿಯ ಕಾಪು ತಾಲೂಕಿನ ಕುರ್ಕಾಲು ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಪವನ್ ಶ್ರವಣ್ ಸೇವಂತ್ ಮೃತ ದುರ್ದೈವಿ. ಈತ ಕಬ್ಬಿಣದ ರಾಡ್ ಗೆ ಕತ್ತಿ ಕಟ್ಟಿ ಅಡಿಕೆ ತೆಗೆಯಲು ಮುಂದಾಗಿದ್ದ ವೇಳೆ ವಿದ್ಯುತ್ ತಂತಿಗೆ ರಾಡ್ ತಗಲಿ ಯುವಕ ಮೃತಪಟ್ಟಿದ್ದಾನೆ. ಶಿರ್ವಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿರ್ವ:ಹೂವಾಗಿ ಅರಳುವ ಮುನ್ನವೇ ವಿಧಿ ಮುಗ್ದ ಹೆಣ್ಣು ಮಗುವಿನ ಬದುಕನ್ನೇ ಕಸಿದು ಬಿಟ್ಟಿದೆ.ನಗು ನಗುತ್ತಾ ಎಲ್ಲರೊಂದಿಗೂ ಬೆರೆತು ಸ್ನೇಹ ಜೀವಿಯಾಗಿದ್ದ ಮುಗ್ದ ಯುವತಿ ವಿಧಿಯಾಟಕ್ಕೆ ಬಲಿಯಾಗಿದ್ದಾಳೆ.ಕ್ಯಾನ್ಸರ್ ಎಂಬ ಮಹಾಮಾರಿ ಅಕೆಯನ್ನ ಬಲಿ ಪಡೆದುಕೊಂಡಿದೆ. ಉಡುಪಿಯ ಶಿರ್ವ ಕಾನ್ವೆಂಟ್ ರಸ್ತೆಯ ಇಪ್ಪತ್ತೊಂದು ವರ್ಷದ ವಿದ್ಯಾರ್ಥಿನಿ ರಿಯಾನಾ ಜೆನ್ ಡಿಸೋಜಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದಾಳೆ. ರಿಯಾನಾ ಜೆನ್ ಡಿಸೋಜಾ ಬಿಕಾಂ ಮುಗಿಸಿ ಮಣಿಪಾಲದಲ್ಲಿ ಎಕಾಂ
ಶಿರ್ವದ ನಡಿಬೆಟ್ಟು ಕಿಂಡಿ ಅಣೆಕಟ್ಟು ಬಳಿ ಮೀನಿಗೆ ಗಾಳ ಹಾಕಲು ಹೋಗಿ ಹೊಳೆಗೆ ಬಿದ್ದು ನಾಪತ್ತೆಯಾದ ಯುವಕನ ಶವ ಪತ್ತೆಯಾಗಿದೆ. ದಿಲೀಪ್ ಪಾಣಾರ (30) ಮೃತ ವ್ಯಕ್ತಿ ದೈವ ನರ್ತನ ಕೆಲಸ ಮಾಡುತ್ತಿದ್ದ ದಿಲೀಪ್ ಪಾಣಾರ ತನ್ನ ಸಹಪಾಠಿಗಳೊಂದಿಗೆ ಭಾನುವಾರ ಹೊಳೆಗೆ ಮೀನು ಹಿಡಿಯಲು ಹೋಗಿದ್ದ ಈತ ಆಕಸ್ಮಿಕವಾಗಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ, ಸಂಜೆಯವರೆಗೂ ಈತನ ಪತ್ತೆಗಾಗಿ ಹುಡುಕಾಟ ನಡೆಸಿದರಾದರೂ ಕತ್ತಲಾವರಿಸಿದ್ದರಿ ಕಾರ್ಯಚರಣೆ ಸ್ಥಗಿತಗೊಳಿಸಿದ್ದರು. ಮತ್ತೆ