ಬೈಂದೂರು: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಜನ ಹಿತರಕ್ಷಣ ವೇದಿಕೆ ದ.ಕ. ವತಿಯಿಂದ ಗುಂಡ್ಯ ಶಿರಾಡಿ ಬಳಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರ ವಿರುದ್ಧ ರಾಜ್ಯ ಸರ್ಕಾರ ಎಫ್ ಐ ಆರ್ ದಾಖಲಿಸಿರುವುದು ಖಂಡನೀಯ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ನಮ್ಮ ಸಂವಿಧಾನ ನೀಡಿದೆ. ಸರ್ಕಾರದ ಧೋರಣಿ ಖಂಡಿಸಿ
ಕೆಎಸ್‌ಆರ್‌ಟಿಸಿ ಕಾಂಟ್ರೆಕ್ಟ್ ಸಿಬ್ಬಂದಿಗೆ ವೇತನ ನೀಡದ ಸತಾಯಿಸುತ್ತಿರುವ ಖಾಸಗಿ ಸಂಸ್ಥೆಗಳ ವಿರುದ್ಧ ಪುತ್ತೂರು, ಸುಳ್ಯ, ಮಡಿಕೇರಿ ಡಿಪೋಗಳ ಬಸ್ ಚಾಲಕರು ಬಸ್ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಬಸ್ ಚಾಲಕರು ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಪರದಾಡಿದ ಘಟನೆಯೂ ನಡೆಯಿತು. ಕೆಎಸ್‌ಆರ್‌ಟಿಸಿ ಬಸ್‌ಗೆ ಕಾಂಟ್ರಾಕ್ಟ್ ಬೇಸ್‌ನಲ್ಲಿ ಚಾಲಕರನ್ನು ನೇಮಕ ಮಾಡಲಾಗಿದ್ದು, ಗ್ರಾಮೀಣ ಭಾಗದಲ್ಲಿ ಈ ಬಸ್‌ಗಳು ಹೆಚ್ಚು ಸಂಚಾರ ನಡೆಸುತ್ತವೆ. ಇದೀಗ ಆ ಬಸ್
ನಾವು ಯುವ ವಿದ್ಯಾರ್ಥಿಗಳ ಜೊತೆ ಒಂದಷ್ಟು ಸಮಾಲೋಚಿಸಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿದ್ದೇವೆ. ಈ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ. ವಿದ್ಯಾರ್ಥಿ ಸಂಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯ ತರಬೇತಿಯಾಗಿ ಬದಲಾಗಲಿ. ಮುಂದಿನ ದಿನಗಳಲ್ಲಿ ಶಾಸಕಾಂಗದ ಚುಕ್ಕಾಣಿಯನ್ನು ಹಿಡಿಯಲು ಪ್ರೇರಣೆಯಾಗಲಿ. ಜೊತೆಗೆ ವಿದ್ಯಾರ್ಥಿಗಳು ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಿ ಎಂದು ಜಾನಪದ ಲೇಖಕರು ಹಾಗೂ ಸಂಶೋಧಕರಾದ ಡಾ. ಸುಂದರ ಕೇನಾಜೆ ಹೇಳಿದರು. ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ
ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ ಸುಳ್ಯದ ನರೇಂದ್ರ ವಿಹಾರದಲ್ಲಿ ಮಾಜಿ ಪ್ರಧಾನಿ, ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ದಿನವನ್ನು ಆಚರಿಸಲಾಯಿತು. ಈ ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಹಾಗೂ ಟ್ರಸ್ಟಿನ ಕೋಶಾಧಿಕಾರಿಗಳಾದ ಎ ವಿ ತೀರ್ಥರಾಮ, ಮಾನ್ಯ ಶಾಸಕರು ಹಾಗೂ ಟ್ರಸ್ಟಿಗಳಾದ ಕು. ಭಾಗೀರಥಿ ಮುರುಳ್ಯ ಮತ್ತು ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಟ್ರಸ್ಟಿಗಳಾದ ವಿನಯ್ ಕುಮಾರ್ ಕಂದಡ್ಕರವರು
ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪುತ್ತೂರು ಇಲ್ಲಿನ ಭಾರತ್ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವತಿಯಿಂದ ವನ ಮಹೋತ್ಸವ ವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ವನ ಮಹೋತ್ಸವದ ಅಗತ್ಯತೆ, ಪ್ರಕೃತಿಯ ಆಂತರ್ಯದ ಸತ್ವವನ್ನು ನಾವು ತಿಳಿದು ಕೊಳ್ಳುವ ಅನಿವಾರ್ಯತೆಯ ಕುರಿತು ಬೆಳಕು ಚೆಲ್ಲಿದರು. ವೇದಿಕೆಯಲ್ಲಿ ಸ್ಕೌಟ್ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್, ಗೈಡ್ ಶಿಕ್ಷಕಿಯರಾದ
ಸುಳ್ಯ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆಯಿತು. ನೂತನ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಪುಷ್ಪರಾಜ ಶೆಟ್ಟಿ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡರು. ನಿರ್ಗಮನ ಅಧ್ಯಕ್ಷ ದಯಾನಂದ ಕಲ್ನಾರ್, ಕಾರ್ಯದರ್ಶಿ ತೇಜೇಶ್ವರ ಕುಂದಲ್ಪಾಡಿ ಅಧಿಕಾರ ಹಸ್ತಾಂತರಿಸಿದರು. ದ.ಕ.ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ
ಪಂಜ: ಕಲಾ ಮಂದಿರ್ ಡಾನ್ಸ್ ಕ್ರಿವ್ ಬೆಳ್ಳಾರೆ ಇದರ ವತಿಯಿಂದ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನೃತ್ಯ ತರಗತಿಗಳನ್ನು ಉದ್ಘಾಟಿಸಿದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಇವರು”ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಪೂರಕವಾದ ನೃತ್ಯ ತರಬೇತಿ ತರಗತಿಯಿಂದ ಮಕ್ಕಳಿಗೆ ಪ್ರಯೋಜನವಾಗಲಿ”ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್
ನಮ್ಮ ಯುವ ತೇಜಸ್ಸಿನ ಆಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ‘ಪ್ರದೀಪ್ ಅಡ್ಕ’ ಎಂಬುವವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು, ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವ ತೇಜಸ್ಸು ಆಂಬುಲೆನ್ಸ್‌ನಲ್ಲಿ ಬಹಳಷ್ಟು ಬಾರಿ ಬಡವರಿಗೆ (ಕಷ್ಟದಲ್ಲಿರುವವರಿಗೆ) ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸಿನ ನಲ್ಮೆಯ
ನಾನು ಸಚಿವನಾದ ಬಳಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ 5 ಕೋಟಿ 6 ಲಕ್ಷ ಸಸಿಗಳನ್ನು ನಾಟಿ ಮಾಡಿದ್ದೇವೆ. ಈ ಮೂಲಕ ಹರಿಸು ವ್ಯಾಪ್ತಿ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಪರಿಸರ, ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಅವರು ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದ ಸಂದರ್ಶನದಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಸಸಿ ನಾಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಗಳು ಉಂಟಾಗದಂತೆ ಅದಕ್ಕೆ
ದ. ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜನವರಿ 11ರಂದು ಮಧ್ಯಾಹ್ನ ಸುಮಾರು ೧-೦೦ ಗಂಟೆಯ ಸಮಯಕ್ಕೆ ಮಹಿಳೆಯೊಬ್ಬರಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಗ್ಗೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಪತ್ತೆಯ ಬಗ್ಗೆ ರಚಿಸಲಾದ ವಿಶೇಷ ತನಿಖಾ ತಂಡವು ಸುಲಿಗೆ ಮಾಡಿದ ನೌಶಾದ್ ಬಿ ಎ ನರಿಮೊಗರು, ಸುಲಿಗೆಗೆ ಸಹಕರಿಸಿದ ಚಂದ್ರಮೋಹನ್ ಉದ್ಯಾವರ, ಎಂಬವರನ್ನು