Home Posts tagged #surathkal

ಸುರತ್ಕಲ್ ವ್ಯಾಪ್ತಿಯಲ್ಲಿ ಪದ್ಮರಾಜ್ ಆರ್ ರೋಡ್ ಶೋ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಅವರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರ ನೇತೃತ್ವದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರ ಜೊತೆಗೂಡಿ ಮುಕ್ಕ ಶ್ರೀರಾಮ ಭಜನಾ ಮಂದಿರದಿಂದ ಆರಂಭವಾದ ರೋಡ್ ಶೋ ಮುಕ್ಕ ಮಸ್ಜಿದ್, ಮುಕ್ಕ

ಸುರತ್ಕಲ್ : ಪಟ್ಲ ಫೌಂಡೇಶನ್ ಘಟಕದ ಚತುರ್ಥ ವಾರ್ಷಿಕೋತ್ಸವ

ಸುರತ್ಕಲ್: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ ಕಾರ್ಯಕ್ರಮವು ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ದೀಪ ಪ್ರಜ್ವಲನೆಗೈದ ಯಕ್ಷಧ್ರುವ ಯಕ್ಷ ಶಿಕ್ಷಣ ಪ್ರಧಾನ ಸಂಚಾಲಕ ವಾಸುದೇವ ಐತಾಳ್ ಯುಎಸ್ ಎ ಮಾತನಾಡಿ, “ಅಮೇರಿಕದಲ್ಲಿ ಯಕ್ಷಗಾನ ಮಾಡಿಸುವ ಮೂಲಕ ಅಲ್ಲಿನ ಜನರಿಗೂ ನಮ್ಮ ಕರಾವಳಿಯ ಸಂಸ್ಕೃತಿಯ ಪರಿಚಯ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿ

ಸುರತ್ಕಲ್: ಲೋಕಸಭಾ ಚುನಾವಣೆ ಹಿನ್ನೆಲೆ ಪಥಸಂಚಲನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರತ್ಕಲ್ ಪ್ಯಾರಡೈಸ್ ಮೈದಾನದಿಂದ ಕಾಟಿಪಳ್ಳವರೆಗೆ ಬೃಹತ್ ಪೊಲೀಸ್ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಭಾಗವಹಿಸಿದ್ದರು. ಪೊಲೀಸ್ ಪಥಸಂಚಲನದಲ್ಲಿ ಪೊಲೀಸ್, ಸಿಆರ್ ಪಿಎಫ್ ಸಹಿತ ವಿವಿಧ ಘಟಕಗಳ ಸಿಬ್ಬಂದಿ ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದರು.

ಇವಿಎಂ ಭದ್ರತಾ ಕೇಂದ್ರಗಳ ಪೂರ್ವಸಿದ್ಧತೆ ಪರಿಶೀಲನೆ

ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಸುರತ್ಕಲ್ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ದಕ್ಷಿಣ ಕನ್ನಡ ಜಿಲ್ಲೆಯ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಮತ್ತಿತರರು

ಶಿಬರೂರು: “ಬಾಲೆಗ್ ಒಲಿಯಿನ ಭ್ರಾಮರಿ” ತುಳು ನಾಟಕಕ್ಕೆ ಮುಹೂರ್ತ

ಶ್ರೀ ಕೊಡಮಣಿತ್ತಾಯ ಕ್ಷೇತ್ರ ಶಿಬರೂರು ದೇಲಂತಬೆಟ್ಟು ಇಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಪರಮಾನಂದ ಸಾಲ್ಯಾನ್ ರಚಿಸಿ ನಿರ್ದೇಶಿಸಿರುವ “ಬಾಲೆಗ್ ಒಲಿಯಿನ ಭ್ರಾಮರಿ” ತುಳು ಭಕ್ತಿಪ್ರಧಾನ ನಾಟಕದ ಮುಹೂರ್ತ ಸಮಾರಂಭವು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತದಲ್ಲಿ ನಡೆಯಿತು.ಶುಭಮುಹೂರ್ತಕ್ಕೆ ಶಿಬರೂರು ಗುತ್ತು ಉಮೇಶ್ ಎನ್ ಶೆಟ್ಟಿ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವದ

ಸುರತ್ಕಲ್: ಫೆ.18 ರಂದು ಸುರತ್ಕಲ್ ನಲ್ಲಿ ಆಯುಷ್ಮಾನ್ ಮತ್ತು ಇ ಶ್ರಮ ಕಾಡ್೯ ವಿತರಣೆ

ಸುರತ್ಕಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಭಾರತ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ ಬಂಟರ ಸಂಘ (ರಿ) ಸುರತ್ಕಲ್ ಇದರ ಸಹಯೋಗದಲ್ಲಿ ಸಾರ್ವಜನಿಕರಿಗೆ ಅಯುಷ್ಮಾನ್ ಭಾರತ ಕಾರ್ಡ್ ಮತ್ತು ಇ ಶ್ರಮ ಕಾರ್ಡ್ ವಿತರಣಾ ಕಾರ್ಯ ಕ್ರಮ ಸಮಾರಂಭ ಫೆಬ್ರವರಿ 18 ರಂದು ಆದಿತ್ಯವಾರ ಬೆಳಿಗ್ಗೆ 9-30 ಕ್ಕೆ ಬಂಟರ ಭವನ ಸುರತ್ಕಲ್ ಇಲ್ಲಿ ಆಯೋಜಿಸಲಾಗಿದೆ.ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು

ಸುರತ್ಕಲ್: ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯ ಇದೆ: ಅಬ್ದುಲ್ ಬಶೀರ್

ಸುರತ್ಕಲ್: ಭಾರತವು ಕೃಷಿ ಪ್ರಧಾನವಾದ ದೇಶವಾಗಿದ್ದು ಇಂದಿನ ಯುವ ಜನತೆ ಕೃಷಿಯತ್ತ ಒಲವು ತೋರಿಸುವ ಅಗತ್ಯ ವಿದೆ ಎಂದು ನಿವೃತ್ತ ಸುರತ್ಕಲ್ ಕೃಷಿ ಅಧಿಕಾರಿ ಅಬ್ದುಲ್ ಬಸೀರ್ ನುಡಿದರು ಅವರು ಬಂಟರ ಸಂಘ ಸುರತ್ಕಲ್, ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಜೆಸಿಐ ಸುರತ್ಕಲ್ ಸಹಯೋಗ ದಲ್ಲಿ ಬಂಟರ ಭವನ ಸುರತ್ಕಲ್ ನಲ್ಲಿ ನಡೆದ ಸಾವಯವ ಕೃಷಿಕರ ಮತ್ತು ಗ್ರಾಹಕರ ಮುಖಾಮುಖಿ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು ಇಂದಿನ ಕಾಲಘಟ್ಟದಲ್ಲಿ ನಮ್ಮ ಆರೋಗ್ಯ ದ

ಮಂಗಳೂರು: ಕುಳಾಯಿ ಕಿರುಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಭೇಟಿ, ಪರಿಶೀಲನೆ

ಕುಳಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಿರು ಜೆಟ್ಟಿಯು ನಾಡದೋಣಿ ಮೀನುಗಾರರಿಗೆ ಅನುಕೂಲವಾಗುತ್ತಿಲ್ಲ. ಈಗಿನ ಬ್ರೇಕ್ ವಾಟರ್ ನಿರ್ಮಾಣ ಅವೈಜ್ನಾನಿಕವಾಗಿದ್ದು, ನಾಡದೋಣಿಕೆ ಪೂರಕವಾಗಿ ನಿರ್ಮಿಸಲಾಗುತ್ತಿಲ್ಲ. ಮೀನುಗಾರರು ಪ್ರಾಣ ಭೀತಿಯಲ್ಲಿದ್ದಾರೆ ಎಂದು ನಾಡದೋಣಿ ಮೀನುಗಾರರು ಹಾಗೂ ಸಾಂಪ್ರದಾಯಿಕ ಮೂಲ ಮೀನುಗಾರರ ಸಂಘಟನೆಗಳು ಸಂಸದ ನಳಿನ್ ಕುಮಾರ್ ಕಟೀಲ್ ಮುಂದೆ ಅಸಮಾಧಾನ ತೋಡಿಕೊಂಡರು. ಕುಳಾಯಿಯ ಕಿರು ಜೆಟ್ಟಿ ಕಾಮಗಾರಿ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್

ಸುರತ್ಕಲ್ ಠಾಣೆಗೆ ಹಾಜರಾಗಿ ಆಯಿಷಾ ಅಲ್ಲ ಅಕ್ಷತಾ ಎಂದು ಹೇಳಿಕೆ

ವಾರದ ಹಿಂದೆ ಓಡಿ ಹೋಗಿದ್ದ, ಆಮೇಲೆ ಮದುವೆಯ ಸುದ್ದಿಯನ್ನು ಹಂಚಿಕೊಂಡ ಆಯಿಷಾ ಮತ್ತು ಅಕ್ಷತಾ ದಂಪತಿ ಇಂದು ಸುರತ್ಕಲ್ ಪೋಲೀಸು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಆಯಿಷಾಳ ಹೆತ್ತವರು ಆಕೆ ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದುದರ ಬಗೆಗೆ ಸುರತ್ಕಲ್ ಪೋಲೀಸು ಠಾಣೆಯಲ್ಲಿ ದೂರು ನೀಡಿದ್ದರು. ಆದ್ದರಿಂದ ಅವರು ಸದರಿ ಠಾಣೆಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು. ಮೂರು ವರುಷದಿಂದ ಪ್ರೀತಿಸುತ್ತಿದ್ದೆವು. ಅನ್ಯ ಧರ್ಮೀಯರಾದ್ದರಿಂದ ಮದುವೆಗೆ ಒಪ್ಪಿಗೆ ಸಿಗುವ ಸಂಭವ

ಮುಸ್ಲಿಂ ಯುವತಿ ವರಿಸಿದ ಬಜರಂಗದಳ ದ ಯುವಕ

ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದ ಸುರತ್ಕಲ್‍ನ 19ರ ಆಯಿಶಾ ಮತ್ತು 31ರ ಬಜರಂಗ ದಳದ ಪ್ರಶಾಂತ್ ಭಂಡಾರಿ ಮದುವೆ ಆಗಿರುವುದು ಶರಣ್ ಪಂಪ್‍ವೆಲ್ ಅವರ ಶುಭಾಶಯಪೋಸ್ಟ್ ನಿಂದ ಸ್ಪಷ್ಟಗೊಂಡಿದೆ. ಆಯಿಷಾಳು ಅಕ್ಷತಾ ಆಗಿ ನಮ್ಮ ಪ್ರಶಾಂತರನ್ನು ಹಿಂದೂ ರೀತ್ಯಾ ಮದುವೆ ಆಗಿದ್ದಾರೆ. ಶುಭಾಶಯ ಹೇಳಿ ಈ ಮತಾಂತರ ಸಮರ್ಥಿಸಿದ್ದಾರೆ. ಆಯಿಷಾ ಅಲಿಯಾಸ್ ಅಕ್ಷತಾಳ ಹೆತ್ತವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದವರು. ಆಯಿಷಾ ತಂದೆ ಸುರತ್ಕಲ್‍ನಲ್ಲಿ