Home Posts tagged #surathkal (Page 2)

ಮುಸ್ಲಿಂ ಯುವತಿ ವರಿಸಿದ ಬಜರಂಗದಳ ದ ಯುವಕ

ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದ ಸುರತ್ಕಲ್‍ನ 19ರ ಆಯಿಶಾ ಮತ್ತು 31ರ ಬಜರಂಗ ದಳದ ಪ್ರಶಾಂತ್ ಭಂಡಾರಿ ಮದುವೆ ಆಗಿರುವುದು ಶರಣ್ ಪಂಪ್‍ವೆಲ್ ಅವರ ಶುಭಾಶಯಪೋಸ್ಟ್ ನಿಂದ ಸ್ಪಷ್ಟಗೊಂಡಿದೆ. ಆಯಿಷಾಳು ಅಕ್ಷತಾ ಆಗಿ ನಮ್ಮ ಪ್ರಶಾಂತರನ್ನು ಹಿಂದೂ ರೀತ್ಯಾ ಮದುವೆ ಆಗಿದ್ದಾರೆ. ಶುಭಾಶಯ ಹೇಳಿ ಈ ಮತಾಂತರ ಸಮರ್ಥಿಸಿದ್ದಾರೆ. ಆಯಿಷಾ ಅಲಿಯಾಸ್ ಅಕ್ಷತಾಳ

ಸುರತ್ಕಲ್: ಕಳೆದು ಹೋಗಿದ್ದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಮೊಬೈಲ್ ಫೋನೊಂದು ಕಳೆದು ಹೋಗಿದ್ದು, ವಾರಸುದಾರರಿಗೆ ಮರಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರತ್ಕಲ್‍ನ ಕುಳಾಯಿ ನಿವಾಸಿ ವಿ4 ನ್ಯೂಸ್‍ನ ಕ್ಯಾಮರಾಮೆನ್ ಶರತ್ ಸಾಲ್ಯಾನ್ ಅವರ ಪುತ್ರಿ ಶಿವಾನಿಯವರ ಮೊಬೈಲ್ ಪೋನ್ ಖಾಸಗಿ ಬಸ್‍ನಲ್ಲಿ ಕಳೆದು ಹೋಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಪ್ರವೃತ್ತರಾದ ಪೊಲೀಸರು ಸಿಇಐಆರ್ ಪೋರ್ಟಲ್ ಆ್ಯಪ್

ಸುರತ್ಕಲ್‍ ; ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಯುವಕ – ಸಹಾಯದ ನಿರೀಕ್ಷೆಯಲ್ಲಿ ಬಡ ಕುಟುಂಬ

ಸುರತ್ಕಲ್‍ನ ನಿವಾಸಿಯಾದ ಕಿರಣ್ ದೇವಾಡಿಗ ಎಂಬವರು ಅಪರೂಪದ ಎಲುಬು ಕ್ಯಾನ್ಸರ್‍ಗೆ ತುತ್ತಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಚಿಕತ್ಸೆಗಾಗಿ ಸಾವಿರಾರು ರೂಪಾಯಿ ಖರ್ಚಾಗಿದ್ದು, ಕಿರಣ್ ಮನೆಯವರು ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಸೋಮನಾಥ್ ದೇವಾಡಿಗ ಅವರು ಹುಟ್ಟು ಅಂಗವಿಕಲರಾಗಿದ್ದು, ವೃದ್ದಾಪ್ಯ ಹಾಗೂ ಸಂಕಷ್ಠದ ಸಮಯದಲ್ಲಿ ತನ್ನ ಒಬ್ಬನೇ ಮಗನಾದ 28 ವರ್ಷ ಪ್ರಾಯದ ಕಿರಣ್ ದೇವಾಡಿಗ ಅವರು

ಸುರತ್ಕಲ್: ಕರಾವಳಿ ಸ್ವೋರ್ಟ್ಸ್ ಮಳಿಗೆಯಲ್ಲಿ 20ನೇ ವಾರ್ಷಿಕೋತ್ಸವ ಆಚರಣೆ

ಸುರತ್ಕಲ್‍ನ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಎಸ್‍ವಿಎಸ್‍ಎಸ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಕರಾವಳಿ ಸ್ವೋರ್ಟ್ಸ್ ಮಳಿಗೆಯಲ್ಲಿ 20ನೇ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸುರತ್ಕಲ್‍ನ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಎಸ್‍ವಿಎಸ್‍ಎಸ್ ಬ್ಯಾಂಕ್ ಬಿಲ್ಡಿಂಗ್‍ನಲ್ಲಿರುವ ಕರಾವಳಿ ಸ್ವೋರ್ಟ್ಸ್ ಗ್ರಾಹಕರ ಅತ್ಯುತ್ತಮ ಮಳಿಗೆಯಾಗಿದ್ದು, ಕ್ರೀಡೆಗೆ ಬೇಕಾದ

ಸುರತ್ಕಲ್: ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಚಲಿಸಿ ಐದು ವಾಹನಗಳು ಜಖಂ..!!

ಸುರತ್ಕಲ್‍ನ ಪೆಟ್ರೋಲ್ ಬಂಕ್ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಹಿಂದಕ್ಕೆ ಚಲಿಸಿ, ನಿಲ್ಲಿಸಿದ್ದ ನಾಲ್ಕು ಕಾರು, ಒಂದು ಬೈಕ್‍ಗೆ ಗುದ್ದಿ ಹಾನಿ ಮಾಡಿದ ಘಟನೆ ನಡೆದಿದೆ. ಸಂಜೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದ. ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್ ಲಾರಿ ಡಿವೈಡರ್ ಬಳಿ ತಿರುವು ತೆಗೆದುಕೊಂಡು ಬಂದಿದೆ. ಇದರಿಂದ ಮಾರ್ಕೆಟ್ ಅಂಗಡಿಗೆ ಬಂದಿದ್ದ ಗ್ರಾಹಕರ ನಾಲ್ಕು

ಸುರತ್ಕಲ್: ಸರಣಿ ಅಪಘಾತ, ಸ್ಕೂಟರ್ ಸವಾರ ಸಾವು

ಸುರತ್ಕಲ್ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಸರಣಿ ಅಪಘಾತಗಳು ನಡೆದಿದ್ದು, ಓರ್ವ ಬೈಕ್ ಸವಾರ ಮೃತಪಟ್ಟರೆ ಉಳಿದ ಅಪಘಾತಗಳಲ್ಲಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಕುಳಾಯಿಯ ಹೊನ್ನಕಟ್ಟೆ ಬಳಿ ಪಿಕಪ್ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಿತ್ರಾಪುರದ ಬಸ್ ನಿಲ್ದಾಣದ ಸಮೀಪದಲ್ಲಿ ಸ್ಕೂಟರೊಂದು ಸ್ಕಿಡ್ ಆಗಿದ್ದು, ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಬೈಕಂಪಾಡಿ

ಸುರತ್ಕಲ್: ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚುವಂತೆ ಡಿವೈಎಫ್‍ಐ ಆಗ್ರಹ

ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಲು ಒತ್ತಾಯಿಸಿ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕೊಂಕಣ ರೈಲ್ವೆ ರೋರೋ ಘಟಕವನ್ನು ಶೀಘ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್‍ಐ ಸುರತ್ಕಲ್ ಘಟಕದಿಂದ ಪ್ರತಿಭಟನೆ ನಡೆಸಿದರು. ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆ ಹೊಂಡ

ಸುರತ್ಕಲ್: ಸೆ.29 ರಂದು ಬಿಎಂಆರ್ ಗೋಲ್ಡ್ & ಡೈಮಂಡ್ಸ್‌ನ ನೂತನ ಮಳಿಗೆ ಶುಭಾರಂಭ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾಗಿರುವ ಬಿಎಂಆರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ನೂತನ ಮಳಿಗೆಯು ಸೆ.29 ರಂದು ಸಂಜೆ 5 ಗಂಟೆಗೆ ಕೃಷ್ಣಾಪುರದ ಬಿಎಂಆರ್ ಹೆಡ್ ಆಫೀಸ್‌ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬಿಎಂಆರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಾವೂದ್ ಹಕೀಮ್ ತಿಳಿಸಿದ್ದಾರೆ. ನೂತನ ಮಳಿಗೆಯನ್ನು ಪನಕ್ಕಾಡ್‌ನ ಸಯ್ಯದ್ ಫೈನಜ್ ಆಲಿ ಶಿನಾಬ್ ತಂಗಳ್ ಹಾಗೂ ಕೃಷ್ಣಾಪುರದ ಖಾಝಿ ಆಲ್ ಹಾಜಿ ಇ.ಕೆ. ಇಬ್ರಾಹಿಂ ಮದನಿ ಅವರು ಉದ್ಘಾಟಿಸಲಿದ್ದಾರೆ. ವಿಧಾನಸಭಾ ಸ್ಪೀಕರ್

ಸುರತ್ಕಲ್: ಸಂಘ ಸಂಸ್ಥೆಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರಿಂದ ಕ್ರೀಡಾ ಸಲಕರಣೆ ವಿತರಣೆ

ಸುರತ್ಕಲ್: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆಯ 2022-23ನೇ ಸಾಲಿನ ಜಿಲ್ಲಾ ಪಂಚಾಯತ್ ವತಿಯಿಂದ ಭಾರತ ಸರ್ಕಾರ ಪೂರೈಸಿದ ಕ್ರೀಡಾ ಸಾಮಗ್ರಿ ಮತ್ತು ಸಲಕರಣೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್ ನಲ್ಲಿ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಯುವ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರಕಾರ ಸಲಕರಣೆ ವಿತರಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಯುವ ಜನತೆ ಬೆಳೆದು ಬರಬೇಕಿದೆ. ಈಗಾಗಲೇ

ಸುರತ್ಕಲ್: ಅನುದಾನ ಸಿಗದೆ ಆಶ್ರಯ ಮನೆ ಪೂರ್ಣಗೊಂಡಿಲ್ಲ-ಫಲಾನುಭವಿಗಳ ಅಳಲು

ಸುರತ್ಕಲ್: ಅನುದಾನ ಸಿಗದೇ ಆಶ್ರಯ ಮನೆ ಪೂರ್ಣಗೊಂಡಿಲ್ಲ. ಆರ್ಥಿಕ ಸಂಕಷ್ಟದಿಂದಾಗಿ ಬಾಡಿಗೆ ಮನೆಯಲ್ಲಿ ಇರುವುದೂ ಸಾಧ್ಯವಾಗುತ್ತಿಲ್ಲ. ಹೃದಯ ಖಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡಲೂ ಆಗುತ್ತಿಲ್ಲ. ನಮಗೆ ಎಪಿಎಲ್ ಕಾರ್ಡು ಬದಲು ಬಿಪಿಎಲ್ ಮಾಡಿ ಕೊಡಿ ಎಂದು ಕೆಲ ಮಹಿಳೆಯರು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮನವಿಗಳನ್ನು ಸ್ವೀಕರಿಸಿ ಮಾತನಾಡಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ