Home Posts tagged #surathkal (Page 3)

ಸುರತ್ಕಲ್: ನಿಲ್ಲಿಸಿದ್ದ ಲಾರಿ ಹಿಮ್ಮುಖವಾಗಿ ಚಲಿಸಿ ಐದು ವಾಹನಗಳು ಜಖಂ..!!

ಸುರತ್ಕಲ್‍ನ ಪೆಟ್ರೋಲ್ ಬಂಕ್ ರಸ್ತೆ ಬಳಿ ನಿಲ್ಲಿಸಿದ್ದ ಸಿಮೆಂಟ್ ತುಂಬಿದ ಲಾರಿಯೊಂದು ಆಕಸ್ಮಿಕವಾಗಿ ಹಿಂದಕ್ಕೆ ಚಲಿಸಿ, ನಿಲ್ಲಿಸಿದ್ದ ನಾಲ್ಕು ಕಾರು, ಒಂದು ಬೈಕ್‍ಗೆ ಗುದ್ದಿ ಹಾನಿ ಮಾಡಿದ ಘಟನೆ ನಡೆದಿದೆ. ಸಂಜೆ ವೇಳೆಗೆ ಈ ಘಟನೆ ಸಂಭವಿಸಿದ್ದು, ಚಾಲಕ ಲಾರಿಯನ್ನು ನಿಲ್ಲಿಸಿ ಹೊರಗೆ ತೆರಳಿದ್ದ. ಏಕಾಏಕಿ ಹಿಂದಕ್ಕೆ ಚಲಿಸಿದ ಲೋಡ್ ಲಾರಿ

ಸುರತ್ಕಲ್: ಸರಣಿ ಅಪಘಾತ, ಸ್ಕೂಟರ್ ಸವಾರ ಸಾವು

ಸುರತ್ಕಲ್ ವ್ಯಾಪ್ತಿಯಲ್ಲಿ ನಿನ್ನೆ ತಡರಾತ್ರಿ ಸರಣಿ ಅಪಘಾತಗಳು ನಡೆದಿದ್ದು, ಓರ್ವ ಬೈಕ್ ಸವಾರ ಮೃತಪಟ್ಟರೆ ಉಳಿದ ಅಪಘಾತಗಳಲ್ಲಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಕುಳಾಯಿಯ ಹೊನ್ನಕಟ್ಟೆ ಬಳಿ ಪಿಕಪ್ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಚಿತ್ರಾಪುರದ ಬಸ್ ನಿಲ್ದಾಣದ ಸಮೀಪದಲ್ಲಿ ಸ್ಕೂಟರೊಂದು ಸ್ಕಿಡ್ ಆಗಿದ್ದು, ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಬೈಕಂಪಾಡಿ

ಸುರತ್ಕಲ್: ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚುವಂತೆ ಡಿವೈಎಫ್‍ಐ ಆಗ್ರಹ

ಸುರತ್ಕಲ್ ರೈಲ್ವೇ ಸೇತುವೆ ಅಕ್ಕಪಕ್ಕದ ರಸ್ತೆ ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸಲು ಒತ್ತಾಯಿಸಿ ಹಾಗೂ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತಿರುವ ಕೊಂಕಣ ರೈಲ್ವೆ ರೋರೋ ಘಟಕವನ್ನು ಶೀಘ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿವೈಎಫ್‍ಐ ಸುರತ್ಕಲ್ ಘಟಕದಿಂದ ಪ್ರತಿಭಟನೆ ನಡೆಸಿದರು. ಡಿವೈಎಫ್‍ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸುರತ್ಕಲ್ ಭಾಗದಲ್ಲಿ ರಸ್ತೆ ಹೊಂಡ

ಸುರತ್ಕಲ್: ಸೆ.29 ರಂದು ಬಿಎಂಆರ್ ಗೋಲ್ಡ್ & ಡೈಮಂಡ್ಸ್‌ನ ನೂತನ ಮಳಿಗೆ ಶುಭಾರಂಭ

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾಗಿರುವ ಬಿಎಂಆರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ನೂತನ ಮಳಿಗೆಯು ಸೆ.29 ರಂದು ಸಂಜೆ 5 ಗಂಟೆಗೆ ಕೃಷ್ಣಾಪುರದ ಬಿಎಂಆರ್ ಹೆಡ್ ಆಫೀಸ್‌ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಬಿಎಂಆರ್ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ದಾವೂದ್ ಹಕೀಮ್ ತಿಳಿಸಿದ್ದಾರೆ. ನೂತನ ಮಳಿಗೆಯನ್ನು ಪನಕ್ಕಾಡ್‌ನ ಸಯ್ಯದ್ ಫೈನಜ್ ಆಲಿ ಶಿನಾಬ್ ತಂಗಳ್ ಹಾಗೂ ಕೃಷ್ಣಾಪುರದ ಖಾಝಿ ಆಲ್ ಹಾಜಿ ಇ.ಕೆ. ಇಬ್ರಾಹಿಂ ಮದನಿ ಅವರು ಉದ್ಘಾಟಿಸಲಿದ್ದಾರೆ. ವಿಧಾನಸಭಾ ಸ್ಪೀಕರ್

ಸುರತ್ಕಲ್: ಸಂಘ ಸಂಸ್ಥೆಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರಿಂದ ಕ್ರೀಡಾ ಸಲಕರಣೆ ವಿತರಣೆ

ಸುರತ್ಕಲ್: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆಯ 2022-23ನೇ ಸಾಲಿನ ಜಿಲ್ಲಾ ಪಂಚಾಯತ್ ವತಿಯಿಂದ ಭಾರತ ಸರ್ಕಾರ ಪೂರೈಸಿದ ಕ್ರೀಡಾ ಸಾಮಗ್ರಿ ಮತ್ತು ಸಲಕರಣೆಯನ್ನು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್ ನಲ್ಲಿ ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ಯುವ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಸರಕಾರ ಸಲಕರಣೆ ವಿತರಿಸುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯ ಯುವ ಜನತೆ ಬೆಳೆದು ಬರಬೇಕಿದೆ. ಈಗಾಗಲೇ

ಸುರತ್ಕಲ್: ಅನುದಾನ ಸಿಗದೆ ಆಶ್ರಯ ಮನೆ ಪೂರ್ಣಗೊಂಡಿಲ್ಲ-ಫಲಾನುಭವಿಗಳ ಅಳಲು

ಸುರತ್ಕಲ್: ಅನುದಾನ ಸಿಗದೇ ಆಶ್ರಯ ಮನೆ ಪೂರ್ಣಗೊಂಡಿಲ್ಲ. ಆರ್ಥಿಕ ಸಂಕಷ್ಟದಿಂದಾಗಿ ಬಾಡಿಗೆ ಮನೆಯಲ್ಲಿ ಇರುವುದೂ ಸಾಧ್ಯವಾಗುತ್ತಿಲ್ಲ. ಹೃದಯ ಖಾಯಿಲೆಯಿಂದ ಬಳಲುತ್ತಿದ್ದು ಕೆಲಸ ಮಾಡಲೂ ಆಗುತ್ತಿಲ್ಲ. ನಮಗೆ ಎಪಿಎಲ್ ಕಾರ್ಡು ಬದಲು ಬಿಪಿಎಲ್ ಮಾಡಿ ಕೊಡಿ ಎಂದು ಕೆಲ ಮಹಿಳೆಯರು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರಲ್ಲಿ ಅಳಲನ್ನು ತೋಡಿಕೊಂಡಿದ್ದಾರೆ. ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮನವಿಗಳನ್ನು ಸ್ವೀಕರಿಸಿ ಮಾತನಾಡಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

ಸುರತ್ಕಲ್‍ || ಕಾಂಪೌಂಡ್ ಕುಸಿದು ಓರ್ವ ಮೃತ್ಯು, ಇನ್ನೋರ್ವನಿಗೆ ಗಾಯ

ರಸ್ತೆ ಬದಿಯಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದ ವೇಳೆ ಕಾಂಪೌಂಡ್ ಕುಸಿದು ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ಕೃಷ್ಣಾಪುರದ ಕೆಇಬಿ ಬಳಿ ನಡೆದಿದೆ. ಬಜ್ಪೆ ಕರಂಬಾರು ನಿವಾಸಿ ಹನೀಫ್ ಮೃತಪಟ್ಟ ವ್ಯಕ್ತಿಯಾಗಿದ್ದು, ಮಣಿ ಎಂಬವರು ಗಾಯಗೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಶರೀಫ್ ಎಂಬವರು ರಸ್ತೆ ಬದಿ ಚರಂಡಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಹನೀಫ್ ಮತ್ತು ಮಣಿ ಅವರು ಚರಂಡಿ ಅಗೆಯುತ್ತಿದ್ದ ವೇಳೆ

ಮಂಗಳೂರು: ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳ ಬಂಧನ

ಮಾದಕ ವಸ್ತು `ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್‍ನ ಶಾಕೀಬ್ ಯಾನೆ ಶಬ್ಬು (33), ಚೊಕ್ಕಬೆಟ್ಟು 8ನೆ ಬ್ಲಾಕ್‍ನ ನಿಸಾರ್ ಹುಸೈನ್ ಯಾನೆ ನಿಚ್ಚು (34) ಬಂಧಿತ ಆರೋಪಿಗಳು. ಇವರಿಂದ ಒಟ್ಟು 52 ಗ್ರಾಂ ತೂಕದ 2,60,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, 2 ಮೊಬೈಲ್ ಫೆÇೀನು, ನಗದು 1,800 ರೂ.,

ಸುರತ್ಕಲ್‍ : ಎಟಿಎಂ ಮೆಷಿನ್ ಕಳವು ಯತ್ನ ಪ್ರಕರಣ – ನಾಲ್ವರ ಬಂಧನ

ಸುರತ್ಕಲ್ ಬಳಿಯ ಇಡ್ಯಾ ಎಂಬಲ್ಲಿ ಜೆಸಿಬಿ ಮೂಲಕ ಎಟಿಎಂ ಒಡೆದು ಹಣ ದೋಚುವ ಯತ್ನ ನಡೆದಿತ್ತು. ಪ್ರಕರಣದ ಬೆನ್ನತ್ತಿದ ಸುರತ್ಕಲ್ ಪೊಲೀಸರು ಶಿವಮೊಗ್ಗ ಮೂಲದ ನಾಲ್ವರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೇಗೂರು ಗ್ರಾಮದ ದೇವರಾಜ್ (24), ಭರತ್ (20), ನಾಗರಾಜ ನಾಯ್ಕ (21), ಕೃತ್ಯಕ್ಕೆ ಧನಸಹಾಯ ಮಾಡಿದ್ದ ಧನರಾಜ್ ನಾಯ್ಕ (26) ಬಂಧಿತರು. ಇವರಿಂದ ಹೀರೊ ಹೊಂಡಾ ಸ್ಪ್ಲೆಂಡರ್ ಬೈಕ್ ಮತ್ತು ಎರಡು ಮೊಬೈಲ್ ಗಳನ್ನು ಪೆÇಲೀಸರು ವಶಕ್ಕೆ

ಸುರತ್ಕಲ್ ; ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್ ಬ್ಲಾಕ್ ಕಿಸಾನ್ ಘಟಕದ ವತಿಯಿಂದ ಸುರತ್ಕಲ್ ಪಡ್ರೆಯಲ್ಲಿ ಸೌಹಾರ್ದ ಆಟಿಕೂಟ, ಗ್ರಾಮೀಣ ಆಟೋಟ ಸ್ಪರ್ಧೆ ನಡೆಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಅವರು ಸೌಹಾರ್ದ ಆಟಿಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸ್ಪರ ಅರಿತು ಬಾಳುವ, ಸೌಹಾರ್ದತೆಯಿಂದ ಬಾಂಧವ್ಯವನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಸುರತ್ಕಲ್ ಬ್ಲಕ್ ಕಾಂಗ್ರೆಸ್ ಅಧ್ಯಕ್ಷ