ಉಪ್ಪಿನಂಗಡಿ: ವ್ಯಕ್ತಿಯೋರ್ವರು ಬಸ್ ನಿಲ್ದಾಣ ಪಂಚಾಯತ್ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.27 ರಂದು ನಡೆದಿದೆ.ರಾಮಣ್ಣ ಪೂಜಾರಿ ಎಂಬವರು ಕೆಲ ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದು, ಇಂದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ
ಯುವತಿ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿಬಂದಿದ್ದು, ಉಳ್ಳಾಲದ ಮೀನುಗಾರರು ಮೃತದೇಹ ಸಮುದ್ರ ಸೇರುವುದನ್ನು ತಪ್ಪಿಸಿ ಹೊಯ್ಗೆಬಜಾರ್ ತೀರಕ್ಕೆ ತಲುಪಿಸಿದ್ದಾರೆ. ಸುಮಾರು 20-35 ರ ಒಳಗಿನ ಯುವತಿ ಮೃತದೇಹ ಇದಾಗಿದೆ. ಪ್ಯಾಂಟ್ ಹಾಗೂ ಟೀಶಟ್೯ ಧರಿಸಿದ್ದಳು. ಆತ್ಮಹತ್ಯೆಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ