ಚುನಾವಣಾ ಪ್ರಚಾರದ ಅಂಗವಾಗಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಗುರುವಾರದಂದು ಶಿರ್ತಾಡಿ ಜಿ.ಪಂ.ಕ್ಷೇತ್ರದ ಬೆಳುವಾಯಿ, ದರೆಗುಡ್ಡೆ ಮತ್ತು ಅಳಿಯೂರು ಪೇಟೆಗಳಲ್ಲಿ ಮತಯಾಚಿಸಿದರು. ಮಂಡಲ ಅಧ್ಯಕ್ಷರಾದ ಸುನೀಲ್ ಆಳ್ವ, ಪಂಚಾಯತ್ ಸದಸ್ಯರುಗಳು, ಕಾರ್ಯಕರ್ತರಾದ ಸುಕೇಶ್ ಶೆಟ್ಟಿ, ಅಶ್ವತ್ಥ್ ಪಣಪಿಲ, ಹಿಂದೂ ಜಾಗರಣ ವೇದಿಕೆಯ ಸಮಿತ್ ರಾಜ್ ದರೆಗುಡ್ಡೆ
ಮೂಡುಬಿದಿರೆಯ ಅಶ್ವತ್ಥಪುರದ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಶ್ರೀ ದೇವಸ್ಥಾನದ ಅಷ್ಟೊತ್ತರ ಶತಮಾನೋತ್ಸವ, ಗೋಶಾಲೆ ಉದ್ಘಾಟನೆ, ಶ್ರೀಗುರುಭವನದ ಶಿಲಾನ್ಯಾಸ ಹಾಗೂ ಶ್ರೀ ಶತಚಂಡಿಕಾ ಹವನದಲ್ಲಿ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ಅವರು ಭಾಗವಹಿಸಿದರು.ಈ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರು ಪೀಠದ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.
ಮೂಲ್ಕಿ: “ಕಳೆದ 5 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದೆ. ಇದಕ್ಕೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮವೇ ಕಾರಣ. ವಿವಿಧ ಇಲಾಖೆಗಳಿಂದ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶ್ರಮಿಸಿದ್ದೇನೆ. ಹೀಗಾಗಿ ಮತ ಯಾಚನೆಗೆ ಮನೆ ಮನೆಗೆ ಹೋದಾಗ ಬಹಳ ಒಳ್ಳೆಯ ಸ್ಪಂದನೆ ಜನರಿಂದ ಸಿಗುತ್ತಿದೆ. ಮೇ 3ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೂಲ್ಕಿಗೆ ಬರಲಿದ್ದಾರೆ. ಇಲ್ಲಿಯವರೆಗೆ
ಮೂಡುಬಿದಿರೆ : ಮುಲ್ಕಿ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಎ.ಕೋಟ್ಯಾನ್ ಅವರು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಆಶೀರ್ವಾದ ಪಡೆದರು. ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರನ್ನು ಗುರುವಾರ ಭೇಟಿಯಾಗಿ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮೇಘನಾಥ ಶೆಟ್ಟಿ, ಎಂಸಿಎಸ್ ಬ್ಯಾಂಕಿನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.
ಮೂಡುಬಿದಿರೆ : ಪ್ರತಿಯೊಬ್ಬ ಮಗುವಿನಲ್ಲೂ ಅದರದ್ದೇ ಆದ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಹೊರಗೆಳೆಯುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ. ನಮ್ಮ ಉಸಿರು ಇರುವವರೆಗೆ ನಾವು ವಿದ್ಯಾರ್ಥಿಗಳೇ. ಹಾಗಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದಾಗ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಿಂದ ರಾಷ್ಟ್ರೀಯತೆಯ ಅರಿವು ಮೂಡಲು ಸಾಧ್ಯ ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್