Home Posts tagged #V4 STREAM (Page 4)

ಮೂಡುಬಿದಿರೆ : ಎಸ್‌ ಕೆ ಎಸ್‌ ಎಸ್‌ ಎಫ್‌ ನಿಂದ ಪ್ರತಿಭಟನೆ

ಮೂಡುಬಿದಿರೆ: ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ನಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು. ವಾಗ್ಮಿ ಅಹ್ಮದ್ ನಹೀಮ್ ಪೈಝಿ ಮುಕ್ವೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದೇಶ ಒಡೆಯುವ

ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್: ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ರಕ್ತದಾನ ಶಿಬಿರ

ಉಳ್ಳಾಲ. ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರು ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಇಂದು ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ರಕ್ತದಾನ ಶಿಬಿರ ನಡೆಯಿತು ಅಸ್ಸಯ್ಯದ್ ಅಮೀರ್ ತಙಳ್ ಕಿನ್ಯ ದುಆ ನೆರವೇರಿಸಿದರು. ಶಾಸಕ ಯು.ಟಿ ಖಾದರ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಡಾ. ಶಕೀಲ್ ಚಾರಿಟೇಬಲ್ ಟ್ರಸ್ಟ್ ಹಲವು ರೀತಿಯ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಆರೋಗ್ಯಕ್ಕೆ ಸಂಬಂಧಿಸಿದ ರಕ್ತದಾನ ಶಿಬಿರ ಆಯೋಜಿಸಿದೆ. ಮುಂದಿನ ದಿನಗಳಲ್ಲಿ

ಪ್ರವಾದಿ ನಿಂದನೆಯನ್ನು ವಿರೋಧಿಸಿ ಪ್ರತಿಭಟನೆ

ಗುರುಪುರ ಕೈಕಂಬ; ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಂ. ಇಸ್ಹಾಕ್ ಕೌಸರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಿಮಗಿಂತಲೂ ಪ್ರವಾದಿಯನ್ನು ನಿಂದಿಸಿದ ಜನರು ಕಳೆದುಹೋಗಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಪ್ರವಾದಿಯವರನ್ನು ಅರಿತಾಗ ಇಸ್ಲಾಂ ಸ್ವೀಕರಿಸಿದ ಚರಿತ್ರೆಯಿದೆ. ಪ್ರವಾದಿಯನ್ನು

ವೆನ್ಲಾಕ್ ಆಸ್ಪತ್ರೆಯಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಲೋಕಾರ್ಪಣೆ

ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವಠಾರದಲ್ಲಿ ಎರಡು ಆಕ್ಸಿಜನ್ ಉತ್ಪಾದನಾ ಘಟಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದರು. ಆಕ್ಸಿಜನ್ ಘಟಕವನ್ನು ಉದ್ಘಾಟಿಸಿದ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿ.ಎಂ ಕೇರ್ ನಿಧಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 16 ಆಕ್ಸಿಜನ್ ಉತ್ಪಾದನಾ ಘಟಕ ಕಾರ್ಯ

ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ

ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲಾ ಹಾಗೂ ಯುವ ಮೋರ್ಚಾ ಬೈಂದೂರು ಮಂಡಲದ ವತಿಯಿಂದ ಸೌಪರ್ಣಿಕಾ ನದಿ ತಟ ಸ್ವಚ್ಛತಾ ಕಾರ್ಯಕ್ರಮ ಇಂಧನ ಸಚಿವ ವಿ.ಸುನೀಲ್ ಕುಮಾರ್ ಉಪಸ್ಥಿಯಲ್ಲಿ ಸಾಂಗವಾಗಿ ನೆರವೇರಿತು. ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಆಜಾದಿ ಕಿ ಅಮೃತ ಮಹೋತ್ಸವದ ಅಂಗವಾಗಿ ಮಾಜಿ ಸೈನಿಕ ಶ್ರೀ ಗಣಪತಿ ಗೌಡ ಯೆಳ್ ಜಿತ್ ಇವರಿಗೆ ಯುವ ಮೋರ್ಚಾದ ವತಿಯಿಂದ ಮೂಕಾಂಬಿಕಾ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶರತ್

ದಾನಿಗಳ ನೆರವನ್ನು ಎದುರು ನೋಡುತ್ತಿದೆ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬ

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬವೊಂದು ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ದಾನಿಗಳ ನೆರವನ್ನು ಎದುರು ನೋಡುತ್ತಿದೆ. ಈ ಮನೆಯಲ್ಲಿ ವಾಸವಿರುವ ಮೂರು ಮಂದಿಯನ್ನು ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಮುಂದೇನು ಎನ್ನುವ ದಾರಿ ಕಾಣದೆ ಕಂಗೆಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸೇಸಮ್ಮ ಪೂಜಾರ್ತಿಯವರದ್ದು ಬಡ ಕುಟುಂಬ. ಸೇಸಮ್ಮ ಅವರ ಹಿರಿಯ ಮಗಳು ವೇದ ಎಲ್ಲರಂತೆ ಲವಲವಿಕೆಯಿಂದ

ಅಕ್ಟೋಬರ್ 10 ರಂದು ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ

ಕಲ್ಕೂರ ಪ್ರತಿಷ್ಟಾನವು ವರ್ಷಂಪ್ರತಿಯಂತೆ ಅಕ್ಟೋಬರ್ 1೦ರಂದು ಕಡಲತೀರದ ಭಾರ್ಗವರೆಂದೇ ಪ್ರಸಿದ್ಧರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಕೊಡಿಯಾಲ್ ಗುತ್ತುವಿನ ಪತ್ತುಮುಡಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ವರ್ಷದ ಕಾರಂತ ಪ್ರಶಸ್ತಿಯನ್ನು ಖ್ಯಾತ ವಾರಪತ್ರಿಕೆ ತರಂಗದ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಎಸ್. ಪೈ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ

ಹಾಪ್ ಪಿಚ್ ಶಾರ್ಟ್ ಕ್ರಿಕೆಟ್ ಟೂರ್ನಮೆಂಟ್ : ಚಿದಾನಂದ ಸವದಿ ಅವರಿಂದ ಚಾಲನೆ

ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹವು ಕೂಡ ಸದೃಢವಾಗುತ್ತದೆ ಕೊವೀಡ್ ಸಂಕಷ್ಟದ ಸಮಯದಲ್ಲಿ ಕ್ರೀಡೆಗೆ ಹಿನ್ನಡೆ ಉಂಟಾದ ಪರಿಣಾಮ ಮತ್ತೊಮ್ಮೆ ಕ್ರೀಡಾ ವಿಭಾಗ ಸಹಜ ಸ್ಥಿತಿಗೆ ಮರಳಬೇಕು. ಈ ನಿಟ್ಟಿನಲ್ಲಿ ಮಾಜಿ ಡಿಸಿಎಮ್ ಹೆಸರಿನಲ್ಲಿ ಎಲ್.ಎಸ್. ಟ್ರೋಫಿ ಹಾಫ್ ಪಿಚ್ ಕ್ರಿಕೇಟ್ ಟೂರ್ನಮೆಂಟ್ ಸಹಕಾರಿಯಾಗಲಿ ಎಂದು ಬಿಜೆಪಿ ಧುರೀಣ ಚಿದಾನಂದ ಸವದಿ ಹೇಳಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕೆಎಲ್‌ಇ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಎಲ್.ಎಸ್. ಟ್ರೋಫಿ ಹಾಪ್

ಉಡುಪಿಯಲ್ಲಿ ಅಸಾಯಕರಿಗೆ ನೀಡುತ್ತಿದ್ದ ಅನ್ನದಾನದ ಸಮಾರೋಪ

ಉಡುಪಿ: ಕೊರೊನ 2ನೇ ಲಾಕ್‌ಡೌನ್ ಪ್ರಾರಂಭದಿಂದ ಅಸಹಾಯಕ ವೃದ್ಧರು ಅಂಗವಿಕಲರು ಮಾನಸಿಕ ರೋಗಿಗಳಿಗೆ ಹಸಿದವರ ಹಸಿವು ನೀಗಿಸಿದ ವಿಶು ಶೆಟ್ಟಿಯವರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಮೀನ್ ಮಧ್ವ ನಗರ ಹೇಳಿದರು. ಇದೀಗ ಸೆಪ್ಟೆಂಬರ್ 23ತಾರೀಕಿನಿಂದ ಕೃಷ್ಣ ಮಠದಲ್ಲಿ ಅನ್ನ ಪ್ರಸಾದ ಪ್ರಾರಂಭವಾದ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು. ಏಪ್ರಿಲ್ 24ರಂದು ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಪ್ರತಿದಿನ 500ಕ್ಕೂ ಹೆಚ್ಚು

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು: ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಅಭಿಯಾನ

ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯುತ್ತ ಕಾಲೇಜಿನ ಅಟೊನಾಮಸ್ ವಿಭಾಗದ ಎನ್‌ಸಿಸಿ ಏರ್‌ವಿಂಗ್ ಕೆಡೆಟ್‌ಗಳಿಂದ ನಗರದ ಟಾಗೂರ್ ಪಾರ್ಕ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಒಟ್ಟು 59 ಕೆಡೆಟ್‌ಗಳಿಂದ ಸ್ವಚ್ಛಾತಾ ಕಾರ್ಯ ನೆರವೇರಿತು. ಎನ್‌ಸಿಸಿ ಏರ್‌ವಿಂಗ್‌ನ ಅಫೀಸರ್ ಅಲ್ವಿನ್ ಸ್ಟೀಪನ್ ಮಿಸ್ಕಿತ್ ಅವರು ನೇತೃತ್ವವನ್ನು ವಹಿಸಿದ್ದರು. ಟಾಗೂರ್ ಪಾರ್ಕ್‌ನಲ್ಲಿದ್ದಂತಹ ಪ್ರತಿಮೆಯನನು ವಿದ್ಯಾರ್ಥಿಗಳು ಸ್ಚಚ್ಚಗೊಳಿಸಿದರು. ಇನ್ನು ವಿದ್ಯಾರ್ಥಿಗಳು ಬ್ಯಾನರ್