ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಮೊಳಕಾಲ್ಮೂರು ಬಳಿ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಉಂಟಾಗಿದೆ. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಉಂಟಾದ ನೆರೆಯಿಂದ ಆತ್ರಾಡಿಯ ಭಾಗದ ನಿವಾಸಿಗಳ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸದ ಹಿನ್ನೆಲೆಯಲ್ಲಿ ಮನೆಗೆ ಚರಂಡಿ ನೀರು
ಉಡುಪಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು,ಉಡುಪಿ ಜಿಲ್ಲೆಯ ಕೆಮ್ತೂರು ,ಬೊಳ್ಜೆ ಭಾಗ ಸಂಪೂರ್ಣ ಜಲಾವೃತಗೊಂಡಿದೆ. ಪಾಪನಾಶಿನಿ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಾಲಾವೃತಗೊಂಡಿದ್ದು, ಅಗ್ನಿ ಶಾಮಕ ದಳ ಸಿಬಂದಿಗಳು ರಬ್ಬರ್ ಮೂಲಕ ನೆರೆ ಸಂತ್ರಸ್ತರನ್ನ ರಕ್ಚಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತಂದರೂ. ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ನದಿ ನೀರಿ ಮಟ್ಟ ಹೆಚ್ಚಾಗುತ್ತಿರುವುದು ಸ್ಥಳೀಯರ
ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕರ್ತೋಜಿ ಭಾಗದಲ್ಲಿ ರಸ್ತೆಯ ಬಲಬದಿ ಗುಡ್ಡ ಕುಸಿಯುವ ಸಾಧ್ಯತೆ, ಸಾರ್ವಜನಿಕರ ಹಿತಾಸಕ್ತಿಯಿಂದ ಜು.18 ರಿಂದ 22ರ ವರೆಗೆ ಪ್ರತಿ ದಿನ ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 275 ರ ಸಂಪಾಜೆಯಿಂದ ಮಡಿಕೇರಿ ನಡುವಿನ ಕಿ.ಮೀ. 90.05 ರಿಂದ 90.10ರ
ಶಿರೂರು ಟೋಲ್ ಗೇಟ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ನಿಂತಿರುವ ಲಾರಿ ಡ್ರೈವರ್ ಗಳ ಗೋಳು ಕೇಳುವವರೇ ಇಲ್ಲದಂತಾಗಿದೆ. ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತ ಉಂಟಾದ ಹಿನ್ನಲೆಯಲ್ಲಿ, ರಸ್ತೆ ಸಂಚಾರ ಸಂಪೂರ್ಣ ಬಂದ್ ಅಗಿರುವ ಹಿನ್ನಲೆಯಲ್ಲಿ, ಉಡುಪಿ ಜಿಲ್ಲೆಯ ಶಿರೂರು ಟೋಲ್ ಗೇಟ್‌ನಲ್ಲಿ ನೂರಾರು ಲಾರಿಗಳು ಸಾಲು ಸಾಲಾಗಿ ನಿಂತುಕೊಂಡಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಲಾರಿಗಳು ಇಲ್ಲೆ ಬಾಕಿಯಾಗಿದ್ದು, ಲಾರಿ ಡ್ರೈವರ್ ಗಳ ಕೈಯಲ್ಲಿದ್ದ ಹಣ ಹಾಗೂ ಆಹಾರ
ಕಾರ್ಕಳ ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರದ ವೇಳೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಉರುಳಿ ರುದ್ರಭೂಮಿಯ ಮೇಲ್ಟಾವಣಿಗೆ ಬಿದ್ದಿರುವ ಘಟನೆ ನಡೆದಿದೆ. ಮರ ಉರುಳಿ ಬಿದ್ದ ಪರಿಣಾಮವಾಗಿ ಅಂದಾಜು 50 ಸಾ. ರೂ. ನಷ್ಟ ಸಂಭವಿಸಿದೆ. ರೆಂಜಾಳ ಮತ್ತು ಸಾಣೂರು ಗ್ರಾಮದ ಮೃತದೇಹಗಳನ್ನು ಸುಡುವ ವೇಳೆ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ರುದ್ರಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಕಾಶ್ ರಾವ್,
ಪುತ್ತೂರು: ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿಯಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಶ್ರೀ ಸುಂದರ ಗೌಡ ಅವರು ಪಧೋನ್ನತಿ ಹೊಂದಿ ರಾಮನಗರ ಜಿಲ್ಲೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ತೆರಳುತ್ತಿರುವ ಈ ಸಂದರ್ಭದಲ್ಲಿ ಪುತ್ತೂರು ಬನ್ನೂರು ಕೃಷ್ಣನಗರದ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿದೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ
ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ ಕಳೆದ ಕೆಲವುದಿನದಿಂದ ಸುರಿಯುವ ಬಾರೀ ಮಳೆಯಿಂದ ಪ್ರವಾಹದಿಂದ ತುಂಬಿಹರಿಯುವ ನದಿಯಲ್ಲಿ ಬಾರಕೂರು ಬಳಿಯ ಸೀತಾನದಿಯ ನೀಲಾವರ ಕಿಂಡಿ ಅಣೆಕಟ್ಟಿನಲ್ಲಿ ಲೋಡುಗಟ್ಟಲೆ ತ್ಯಾಜ್ಯಗಳು ಸಿಲಿಕಿಕೊಂಡು ನದಿ ತೀರದಲ್ಲಿ ಕೃತಕ ನೆರೆ ಉಂಟಾಗಿದೆ. ಪೂರ್ವ ಭಾಗವಾದ ಕೊಕ್ಕರ್ಣೆ ,ಎಳ್ಳಂಪಳ್ಳಿ, ಕರ್ದಾಡಿ, ಕೂರಾಡಿ ಭಾಗದಲ್ಲಿ ಸೇತುವೆಯಿಂದ ನದಿಗೆ ಎಸೆಯುವಖಾಲಿ ಬಾಟಲಿಗಳು ಬೃಹತ್ ಮರದದಿಮ್ಮಿಗಳು ಸತ್ತು ಬಿದ್ದ ಪ್ರಾಣಿಗಳು ಇಲ್ಲಿನ
ಪ್ರಕೃತಿಯೇ ವಿಶ್ವವಿದ್ಯಾನಿಲಯ. ಮರ, ನದಿ ಕೂಡಾ ಪರೋಪಕಾರ ಮನೋಭಾವವನ್ನು ಬೆಳೆಸುತ್ತದೆ. ಪ್ರಕೃತಿ ನಾಶವಾಗಬಾರದು. ಅದರ ಜತೆಗೆ ಬದುಕು ಸಾಗಬೇಕು. ಪ್ರಕೃತಿ ಸಮತೋಲನ ಕಾಪಾಡುತ್ತದೆ. ಪ್ರಕೃತಿಯನ್ನು ಸ್ವಚ್ಛವಾಗಿಡುವುದು ಕರ್ತವ್ಯ ಮತ್ತು ಪರಿಣಾಮವಾಗಿ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆಧ್ಯಾತ್ಮದ ಚಿಂತನೆ ಮೂಲಕ ಜೀವನ ಪಾವನವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ನುಡಿದರು. ಅವರು ಒಡಿಯೂರು ಶ್ರೀಗಳ
ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಪಕ್ಷಿಕೆರೆಯಿಂದ ಪಂಜ ಮೂಲಕ ಸುರತ್ಕಲ್ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆ ತೀವ್ರ ಕೆಟ್ಟು ಹೋಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಈ ರಸ್ತೆಯ ಕೆಮ್ರಾಲ್ ಸಮುದಾಯ ಆರೋಗ್ಯ ಕೇಂದ್ರ ಹಾಗೂ ದಿ.ಶಾಂತರಾಮ ಶೆಟ್ಟಿ ಶಾಲೆಯ ಬಳಿ ತೀವ್ರ ಹದಗೆಟ್ಟಿದ್ದು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ರೋಡ್, ತೋಡಾಗಿ ಪರಿಣಮಿಸಿದ್ದು ಸ್ಥಳೀಯರು ಸಂಬಂಧಪಟ್ಟವರಿಗೆ ಹಿಡಿ ಶಾಪ