Home Posts tagged #vitla (Page 3)

ವಿಟ್ಲ: ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಪತಿಯ ಕೊಲೆ

ವಿಟ್ಲ: ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಅವರನ್ನು ಪತ್ನಿ ಹಾಗೂ ಪತ್ನಿಯ ಪರಿಚಯಸ್ಥ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢ ಪಟ್ಟಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರವಿಂದ ಪತ್ನಿ ಆಶಾ ಹಾಗೂ ಮನೆಯ ಸೆಂಟ್ರಿಂಗ್‌ ಕೆಲಸ ನಿರ್ವಹಿಸಿದ ಯೋಗೀಶ ಗೌಡ ಆರೋಪಿಗಳಾಗಿದ್ದಾರೆ. ಅರವಿಂದ ಭಾಸ್ಕರ ಅವರು

ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ

ವಿಟ್ಲ: ಅಕ್ರಮವಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ವೇಳೆ ಕಾರು ಪಲ್ಟಿಯಾದ ಘಟನೆ ವಿಟ್ಲ ಕಂಬಳಬೆಟ್ಟು ಮಸೀದಿ ಬಳಿ ನಡೆದಿದೆ.ಕಾರೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದು, ಈ ವೇಳೆ ಕಾರು ಪಲ್ಟಿಯಾಗಿದೆ. ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ವಿಟ್ಲ : ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ

ವಿಟ್ಲ: ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಸಮೀಪದ ಕನ್ಯಾನದಲ್ಲಿ ನಡೆದಿದೆ.ಮೃತರನ್ನು ಆಟೋ ಚಾಲಕ ದಿನೇಶ್ ಬೈರಿಕಟ್ಟೆ (32) ಎಂದು ಗುರುತಿಸಲಾಗಿದೆ.ಅವಿವಾಹಿತರಾಗಿದ್ದ ದಿನೇಶ್ ರವರು ಆಟೋ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಇಂದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.ಆತ್ಮಹತ್ಯೆ ಕಾರಣ ತಿಳಿದು ಬಂದಿಲ್ಲ.

ಕಡಬ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ : ಮಗು ಮೃತ್ಯು, ನಾಲ್ವರಿಗೆ ಗಾಯ

ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮಗು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಸೋಮವಾರದಂದು ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಹಾಗೂಕೆ ಎಸ್ ಆರ್ ಟಿ ಸಿ ಬಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು,

ವಿಟ್ಲ : ಗುಡ್ಡಕ್ಕೆ ಹತ್ತಿದ ಬಸ್‌ : ಬಾಲಕಿ ಕಾಲಿಗೆ ಗಂಭೀರ ಗಾಯ

ವಿಟ್ಲ: ಖಾಸಗಿ ಬಸ್ಸೊಂದು ಗುಡ್ಡಕ್ಕೆ ಹತ್ತಿದ ಘಟನೆ ವಿಟ್ಲ -ಮಂಗಳೂರು ರಸ್ತೆಯ ಕೆಲಿಂಜದ ಮಾಜೋನಿ ಎಂಬಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್‌ ಗುಡ್ಡಕ್ಕೆ ಹತ್ತಿದೆ. ಘಟನೆಯಿಂದ ಚಂದಳಿಕೆಯ ಬಾಲಕಿಗೆ ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಕೆಲ ಪ್ರಯಾಣಿಕರಿಗೆ ಸಣ್ಣ -ಪುಟ್ಟ ಗಾಯಾವಾಗಿದೆ. ಸ್ಥಳಕ್ಕೆ ವಿಟ್ಲ ಪೋಲೀಸರು ಭೇಟಿ ನೀಡಿದ್ದಾರೆ

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಹಿಳೆ ಕೇರಳದಲ್ಲಿ ಬಂಧನ

ವಿಟ್ಲ: ಪ್ರಕರಣಯೊಂದರಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮಹಿಳೆಯೊಬ್ಬರನ್ನು ವಿಟ್ಲ ಪೊಲೀಸರು ಕೇರಳದಲ್ಲಿ ಬಂಧಿಸಿದ ಘಟನೆ ನಡೆದಿದೆ.‌ ಕೇರಳ ರಾಜ್ಯದ ಪಯ್ಯನ್ನೂರು ಜಿಲ್ಲೆಯ ಕುಂಞಮಂಗಲ ಪಾಣಚೇರಿ ನಿವಾಸಿಸುಜಾತ(42) ಬಂಧಿತ ಆರೋಪಿ ಮಹಿಳೆ.ಈಕೆಯ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ 2013ರಲ್ಲಿ ಕಲಂ:379,311,406,417, 418,419.420.423.427.465,467,468,471,504,506 r/w 34 IPC ಯಂತೆ ಪ್ರಕರಣ ದಾಖಲಾಗಿತ್ತು.ಈಕೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ

ವಿಟ್ಲ: ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಕಳ್ಳತನಕ್ಕೆ ಯತ್ನ: ಓರ್ವ ಆರೋಪಿ ಪೊಲೀಸರ ವಶಕ್ಕೆ

ವಿಟ್ಲ: ಪಡ್ನೂರು ಗ್ರಾಮದ ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಶೆಟರ್ ಅನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿಯಲು ಪ್ರಯತ್ನಿಸಿ ರಾತ್ರಿ ಕಳವು ಮಾಡಲು ಪ್ರಯತ್ನಿಸಿದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಟಿ.ಕೆ ಅಬ್ದುಲ್ (37) ಎಂದು. ಗುರುತಿಸಲಾಗಿದೆ. ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ ಹೆಚ್ .ಇ. ರವರ ಮಾರ್ಗದರ್ಶನದಂತೆ, ವಿಟ್ಲ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ

ವಿಟ್ಲ ಚಂದಳಿಕೆ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ಶನಿವಾರ ನಡೆಯಿತು. ಎಸ್ ಎಲ್ ವಿ ಬುಕ್ ಕಂಪೆನಿಯ ದಿವಾಕರದಾಸ್ ನೇರ್ಲಾಜೆ ಮಾತನಾಡಿ ಹಿರಿಯ ಶಿಕ್ಷಕರು ಭದ್ರ ಅಡಿಪಾಯ ಇಟ್ಟುಕೊಟ್ಟ ಕಾರಣದಿಂದ ಶಾಲೆಯೂ ಇಂದು ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಿಕ್ಷಕರ,  ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು. ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ  ಅವರನ್ನು

ವಿಟ್ಲ: ಅಕ್ರಮ ಗೋ ಸಾಗಾಟ ಪತ್ತೆ

ವಿಟ್ಲ: ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸ್ರು ಕಾರ್ಯಾಚರಣೆ ನಡೆಸಿ ವಾಹನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಬೆಳ್ಳಂಬೆಳಗ್ಗೆ ವಿಟ್ಲ ಸಮೀಪದ ಬೋಳಂತೂರಿನಲ್ಲಿ ನಡೆದಿದೆ. ರೌಂಡ್ಸ್ ಕರ್ತವ್ಯದಲ್ಲಿದ್ದ ವಿಟ್ಲ ಎಸ್‍ಐ ಸಂದೀಪ್ ಕುಮಾರ್ ಶೆಟ್ಟಿ ಮತ್ತು ಸಿಬ್ಬಂದಿಗಳು ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸಾಯಿಬು ಬ್ಯಾರಿ ನಗ್ರಿ, ಪ್ರದೀಪ್ ಸಿಕ್ವೇರಾ ಬಂಧಿತರು.ಈ ವೇಳೆ

ವಿಟ್ಲ :ಶಿಥಿಲಾವಸ್ಥೆಯಲ್ಲಿ ಕುಳಾಲು ಸರ್ಕಾರಿ ಶಾಲೆಯ ಕಟ್ಟಡ-ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳು -ಶಾಸಕರಿಗೆ ಮನವಿ ನೀಡಿದರೂ ಸ್ಪಂದಿಸಿಲ್ಲ

ವಿಟ್ಲ : ಶಿಕ್ಷಣ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ÷್ಯದಿಂದಾಗಿ 92ವರ್ಷಗಳ ಇತಿಹಾಸ ಹೊಂದಿದ ಕುಳಾಲು ಸರಕಾರಿ ಶಾಲೆಯ ಕಟ್ಟಡ ಕುಸಿಯುತ್ತಿದ್ದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 92ವರ್ಷಗಳನ್ನು ಪೂರೈಸಿದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಳಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಶತಮಾನದತ್ತ ದಾಪುಗಾಲು ಹಾಕುತ್ತಿದೆ. ಆದರೆ ಕುಸಿಯುವ ಹಂತದಲ್ಲಿರುವ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ ಆರು ಹೊಸ ಕೊಠಡಿಗಳನ್ನು ನೀಡುವಂತೆ