ತಲಪಾಡಿ ಟೋಲ್ ಗೇಟ್‍ನಲ್ಲಿ ಹಲ್ಲೆ : ಪ್ರತಿಭಟನೆಗೆ ಸಜ್ಜಾಗುತ್ತಿರುವ ಸ್ಥಳೀಯರು

ಮಂಜೇಶ್ವರ: ತಲಪ್ಪಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆಗೈಯುತ್ತಿರುವ ವೀಡಿಯೋ ವೈರಲಾಗುತ್ತಿದ್ದಂತೆಯೇ ಗಡಿಪ್ರದೇಶದ ಜನರು ಟೋಲ್ ಅಧಿಕೃತರ ವಿರುದ್ಧ ಪ್ರತಿಭಟನೆಗೆ ಸಜ್ಜಾಗುತಿದ್ದಾರೆ.ಟೋಲ್ ಗೇಟಿನಲ್ಲಿ ಕ್ರಿಮಿನಲ್ ಹಿನ್ನೆಲೆಯಿರುವ ಉದ್ಯೋಗಿಗಳನ್ನು ಕೂಡಲೇ ವಜಾಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಸಂಘಟನೆಗಳು ಪ್ರತಿಭಟನೆಗೆ ತಯಾರಿ ನಡೆಸುತ್ತಿದೆ.ಈ ಬಗ್ಗೆ ಉಳ್ಳಾಲ ಪೆÇಲೀಸರು ವೀಡಿಯೋ ಪರಿಶೀಲಿಸಿ ಸುಮಟೋ ಕೇಸು ದಾಖಲಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರೀಕರು ಆಗ್ರಹಿಸಿದ್ದಾರೆ.
