6 ನೇ ತರಗತಿಯ ವಿದ್ಯಾರ್ಥಿ ಮೇಲೆ ಪೊಲೀಸ್ ಲಾಠಿಚಾರ್ಜ್

ನಗರದ ತಣ್ಣೀರಬಾವಿ ಬೀಚ್ ಬಳಿ ಬ್ಲಾಕ್ ಆಗಿದ್ದ ಕಾರಣಕ್ಕೆ, ಅಲ್ಲಿ ಸೇರಿದ್ದ ಯುವಕರ ಮೇಲೆ ಪೆÇಲೀಸರು ಲಾಠಿ ಚಾರ್ಜ್ ಮಾಡಿ ಘಟನೆ ನಡೆದಿದ್ದು, ” ಪೊಲೀಸರ ಅತಿರೇಕದ ವರ್ತನೆ” ಎಂದು ಸ್ಥಳೀಯರು ಕಿಡಿಕಾರಿದ ಘಟನೆ ನಡೆದಿದೆ. 6 ನೇ ತರಗತಿಯ ವಿದ್ಯಾರ್ಥಿ ಮತ್ತು ಪಿಯು ವಿದ್ಯಾರ್ಥಿಗಳ ಮೇಲೆ ಕೂಡಾ ಪೊಲೀಸರು ಲಾಠಿ ಬೀಸಿರುವುದು ಕಂಡು ಸ್ಥಳೀಯರು ಗರಂ ಆಗಿದ್ದು ಪೊಲೀಸರ ವಿರುದ್ದ ತಿರುಗಿಬಿದ್ದಿದ್ದಾರೆ. ವಿಕೇಂಡ್ ಮತ್ತು ಹೊಸ ವರ್ಷವಾದ್ದರಿಂದ ತಣ್ಣೀರಭಾವಿ ಬೀಚ್‍ಗೆ ಭೇಟಿ ನೀಡಿವವರ ಸಂಖ್ಯೆ ಹೆಚ್ಚಿತ್ತು.

ಹೀಗಾಗಿ ಟ್ರಾಪಿಕ್ ಜಾಮ್ ಆಗಿತ್ತು. ಈ ವೇಳೆ ಕ್ರಿಕೆಟ್ ಆಡಿ ಬೈಕಿನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟ್ಟಿದ ಪೊಲೀಸರು, ನಿಮ್ಮಿಂದಲೇ ಬ್ಲಾಕ್ ಆಗಿದೆಯೆಂದು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.ಲಾಠಿ ಏಟಿನಿಂದ 6ನೇ ತರಗತಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಸಾರ್ವಜನಿಕರು ಪೊಲೀಸರಿಗೆ ಘೇರಾವ್ ಹಾಕಿದ್ದು, ಮೂವರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಮೂಲಕ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ. ಮೂವರು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related Posts

Leave a Reply

Your email address will not be published.