ಬಸ್ ಬ್ರೇಕ್ ಫೈಲ್ ಆಗಿ ಕಾರಿಗೆ ಢಿಕ್ಕಿ : ಪವಾಡ ಸದೃಶ ಪಾರಾದ ಪ್ರಯಾಣಿಕರು

ಉಳ್ಳಾಲ: ಬ್ರೇಕ್ ಫೇಲ್ ಗೊಳಗಾದ ಬಸ್ಸು ಝೈಲೋ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಸಂಭವಿಸಿದೆ. ಬಸ್ಸು ಚಾಲಕನ ಸಮಯ ಸಾಧನೆಯಿಂದ 21 ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಬದುಕುಳಿದಿದ್ದಾರೆ.ಝೈಲೋ ಕಾರಿನಲ್ಲಿದ್ದ ಮಾಲೀಕ ಮುಡಿಪು ನಿವಾಸಿ ಮೊಹಮ್ಮದ್ ಮತ್ತು ಸಂಬಂಧಿ ಪ್ರಯಾಣಿಕ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾರು ಒಂದು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮಂಗಳೂರಿನಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎನ್.ಎಸ್ ಟ್ರಾವೆಲ್ಸ್ ಬಸ್ಸು ತೊಕ್ಕೊಟ್ಟು ಬಸ್ ನಿಲ್ದಾಣಕ್ಕೆ ಹೋಗಬೇಕಾಗಿತ್ತು. ಆದರೆ ಬ್ರೇಕ್ ಫೇಲ್ ಆಧ ಪರಿಣಾಮ ನೇರ ತೊಕ್ಕೊಟ್ಟು ಜಂಕ್ಷನ್ನಿಗೆ ಬಸ್ಸನ್ನು ಚಲಾಯಿಸಿದ್ದು, ಈ ವೇಳೆ ಉಳ್ಳಾಲದಿಂದ ಮುಡಿಪುವಿನತ್ತ ತೆರಳುತ್ತಿದ್ದ ಜೈಲೋ ಕಾರಿಗೆ ಢಿಕ್ಕಿ ಹೊಟೆದಿದೆ. ಜನದಟ್ಟಣೆ ಹೆಚ್ಚಿರುವ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ. ಜೆಪ್ಪು ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಂಬವರು ಕಾರಿನಲ್ಲಿ ಇಬ್ಬರಿದ್ದರೂ, ಕಾರು ನುಜ್ಜುಗುಜ್ಜಾದರೂ ಇಬ್ಬರು ಅಪಾಯವಿಲ್ಲದೆ ಪಾರಾಗಿದ್ದಾರೆ.
