ತೊಕ್ಕೊಟ್ಟು : ಗೂಡುದೀಪ ಸಂಗಮ- ದೀಪಾವಳಿ ಸಂಭ್ರಮ-2022 ಗೂಡುದೀಪ ಸ್ಪರ್ಧೆ
ದಕ್ಷಿಣ ಕನ್ನಡ ಜಿಲ್ಲಾ ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ ಎನ್ನುವ ಹೆಸರಿನಲ್ಲಿ ಗೂಡುದೀಪ ಸ್ಪರ್ಧೆಯನ್ನು ಅ.29ರಂದು ಕುತ್ತಾರಿನ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟ್ಟು ಹೇಳಿದ್ರು.
ಈ ಕುರಿತು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ವಿವಿಧ ಸೇವಾ ಚಟುವಟಿಕೆಗಳು, ಪರಿಸರ ಸಂರಕ್ಷಣೆಗಾಗಿ ವೃಕ್ಷಾಂಜುರ ರಕ್ಷಾ, ವೃಕ್ಷ ತೋರಣ, ಮನೆಗೊಂದು ಗಿಡ ಕಾರ್ಯಕ್ರöಮಗಳು, ರಕ್ತದಾನ ಶಿಬಿರಗಳು ಜತೆಯಲ್ಲಿ ಬಹಳ ಸಂಭ್ರಮದಿAದ ಆಚರಿಸಿಕೊಂಡು ಬರಲಾಗುತ್ತಿದೆ,. ಎರಡೂ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಗೌರವಾಧ್ಯಕ್ಷರಾದ ರಾಕೇಶ್ ಬೈಪಾಸ್, ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಹರೀಶ್ ಅಂಬ್ಲಮೊಗರು, ಕಿರಣ್ ಕೊಲ್ಯ, ಪ್ರಸಾದ್ ಕೊಂಡಾಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.