ತೋಕೂರು ಯುವಕ ಸಂಘದ ಆಶ್ರಯದಲ್ಲಿ ಬೇಸಿಗೆ ಶಿಬಿರ

ನೆಹರು ಯುವ ಕೇಂದ್ರ ಮಂಗಳೂರು, ರಜತ ಮಹೋತ್ಸವ ಸಮಿತಿ ಮಹಿಳಾ ಮಂಡಲ ತೋಕೂರು ಹಾಗೂ ತೋಕೂರು ಯುವಕ ಸಂಘದ ಆಶ್ರಯದಲ್ಲಿ ಬೇಸಿಗೆ ಶಿಬಿರ ಸಮಾರಂಭ ತೋಕೂರು ಯುವಕ ಸಂಘದ ಸುವರ್ಣ ಸಭಾಂಗಣದಲ್ಲಿ ನಡೆಯಿತು. ತೋಕೂರು ಸುಬ್ರಹ್ಮಣ್ಯ ಶೀಮಂತ್ರಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಕೂರು ಕ್ಲಸ್ಟರ್ ನ ವಿಶ್ವ ಬ್ಯಾಂಕ್ ನೆರವಿನ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿ ಅಧ್ಯಕ್ಷರಾದ ದಿನಕರ ಸಾಲ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ತರಬೇತುದಾರರಾದ ವಸಂತಿ ಎಸ್. ಭಟ್, ಅನಿತಾ ಶೆಟ್ಟಿ, ಪ್ರೇಮ, ಲಾವಣ್ಯ, ಮಾ. ಯಕ್ಷಿತ್, ಜ್ಯೋತಿ ಖಾರ್ವಿ, ಕಾಂಚನ ಗಣೇಶ್, ಜಯಲಕ್ಷ್ಮಿ ಎಸ್, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷೆ ಯಶೋಧ ಪಿ ರಾವ್, ಮಹಿಳಾ ಮಂಡಲದ ಅಧ್ಯಕ್ಷೆ ಅನುಪಮಾ ಎ ರಾವ್, ಯುವಕ ಸಂಘದ ಅಧ್ಯಕ್ಷ ಶೇಖರ ಶೆಟ್ಟಿಗಾರ ಮತ್ತಿತರರು ಉಪಸ್ಥಿತರಿದ್ದರು