ಡಿ.17 : ತಿಬರಾಯನ ಸೇವಾ ಯೋಜನೆ

ಶಿಬರೂರು ಕೊಡಮಣಿತ್ತಾಯ ಜಾತ್ರಾ ಮಹೋತ್ಸವದಲ್ಲಿ ಅರ್ಪಣಾ ಸೇವಾ ಟ್ರಸ್ಟ್ ಮುಲ್ಕಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ತಿಬರಾಯನ ಸೇವಾ ಯೋಜನೆಯು ಡಿಸೆಂಬರ್ 17, 18ರಂದು ನಡೆಯಲಿದೆ
ಗಂಜಿಮಠ ಗ್ರಾಮದಲ್ಲಿ ವಾಸವಾಗಿರುವ ಕಿಶೋರ್ ಹಾಗೂ ಹೇಮಾವತಿ ದಂಪತಿಗಳ ಏಕೈಕ ಪತ್ರಿ ಕುಮಾರಿ ತ್ರಿಷ (4) ವರ್ಷ ಶ್ವಾಸಕೋಶದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದು, ಶ್ವಾಸಕೋಶದ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಯ ಅಗತ್ಯವಿದೆ

ಕಿನ್ನಿಗೋಳಿ ಸಮೀಪದ ತಾಳಪಾಡಿ ಗ್ರಾಮದ ಕಲ್ಲರೆ ಮನೆಯ ಅಶ್ವಿನಿ ಪೂಜಾರಿ ಮತ್ತು ಚೇತನ್ ಪೂಜಾರಿ ಅವರ ಮಗು ಧ್ರುವ (4) ವರ್ಷ ಅಪರೂಪದ ಮೂತ್ರ ಪಿಂಡದ ಗೆಡ್ಡೆಯಿಂದ ಬಳಲುತ್ತಿದ್ದು, ತುರ್ತಾಗಿ ಕಿಮೋತೆರಪಿ ಮತ್ತು ಸರ್ಜರಿಯ ಅಗತ್ಯವಿದ್ದು ಈ ಬಡಕುಟುಂಬಕ್ಕೆ ಸಹೃದಯಿ ಬಂಧುಗಳ ಸಹಾಯಾಸ್ತವನ್ನು ಕೋರುತ್ತೇವೆ.
2 ಅಶಕ್ತ ಕುಟುಂಬದ ಚಿಕಿತ್ಸೆಗೆ 17-18 ರಂದು ಶಿಬರೂರು ದೈವಸ್ಥಾನದಲ್ಲಿ ವಿಶೇಷ ವೇಷ ಧರಿಸಿ ಧನ ಸಂಗ್ರಹ ಮಾಡಲು ತಮ್ಮ ಮುಂದೆ ಬರುತ್ತಿದ್ದೇವೆ. ತಾವೆಲ್ಲರೂ ತಮ್ಮಿಂದಾಗುವ ಧನ ಸಹಾಯ ನೀಡಿ ಸಹಕರಿಸ ಬೇಕಾಗಿ ವಿನಂತಿ
ನಿರಂಜನ್ ಪೂಜಾರಿ 9731923630, ಶ್ರೀದರ ಕವತ್ತಾರು 9880832556, ಧನು ಅಂಚನ್ 7259340967
