ಬಡಕುಟುಂಬದ ಹೆಣ್ಣು ಮಗಳಿಗೆ ಮದುವೆ ಮಾಡಿಸುವ ಮೂಲಕ ಮಾದರಿಯಾದ ತಿರುವೈಲು ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವುದು ಸಾಮಾನ್ಯ. ಆದರೆ ಅವರ ಮಿತಿಯನ್ನು ಮೀರಿಯೂ ಜನ ಸೇವೆ ಮಾಡುವುದು ವಿರಳ. ಅಂತಹ ವಿರಳ ಜನಪ್ರತಿನಿಧಿಯೊನಬ್ಬರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದಾರೆ. ಅವರ ಮಾನವೀಯತೆಯ ಸೇವೆಗೆ ಊರವರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇವರು ಮಂಗಳೂರು ಮಹಾನಗರ ಪಾಲಿಕೆಯ ತಿರುವೈಲ್ ವಾರ್ಡ್‍ನ ಕಾಪೆರ್Çಲರೇಟರ್ ಹೇಮಲತಾ ರಘು ಸಾಲ್ಯಾನ್. ಪತಿ ರಘು ಸಾಲ್ಯಾನ್ ಜೊತೆ ಸೇರಿ ಸಮಾಜ ಸೇವೆಯಲ್ಲೇ ಸುಖ ಕಂಡವರು. ತಮ್ಮ ವಾರ್ಡ್‍ನಲ್ಲಿರುವ ಶಾಲೆಗಳ ಅಭಿವೃದ್ಧಿ, ಕಡು ಬಡತನದ ಕುಟುಂಬಗಳಿಗೆ ನೆರವಾಗುವ ಮೂಲಕವೇ ಈ ದಂಪತಿ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಅವರ ಮಾನವೀಯ ಸೇವೆಗೆ ಮತ್ತೊಂದು ಘಟನೆ ಸೇರ್ಪಡೆಗೊಂಡಿದೆ.

ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ತೀರಾ ಬಡ ಕುಟುಂಬವಾದ ಪರಮೇಶ್ವರ ಆಚಾರ್ಯ ಅವರ ಪುತ್ರಿ ಆರತಿಯ ಮದುವೆಯನ್ನು ಈ ದಂಪತಿಗಳೇ ಮುಂದೆ ನಿಂತು ನೆರವೇರಿಸಿದ್ದಾರೆ. ಪರಮೇಶ್ವರ್ ಆಚಾರ್ಯರಿಗೆ ಅನಾರೋಗ್ಯದಿಂದ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಪತ್ನಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಈ ಕಡು ಬಡ ಕುಟುಂಬಕ್ಕೆ ಬೇಕಾದ ಎಲ್ಲಾ ಅಗತ್ಯತೆಯನ್ನು ಪೂರೈಸಿ ಈ ಮದುವೆ ಕಾರ್ಯ ನೆರವೇರಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಯುವತಿಗೆ ಕಾಪೆರ್Çೀರೇಟರ್ ತಾಯಿ ಸ್ಥಾನದಲ್ಲಿ ನಿಂತು ಮದುವೆ ಮಾಡಿಕೊಟ್ಟಿದ್ದಾರೆ.
ಅಷ್ಟೇ ಅಲ್ಲ ಆ ಯುವತಿಯ ಸಹೋದರಿಗೂ ಆರೋಗ್ಯ ಸಮಸ್ಯೆ ಇದ್ದು, ಅದನ್ನೂ ಮೀರಿ ಆ ಯುವತಿಗೂ ತಿರುವೈಲ್ ಶಾಲೆಯಲ್ಲಿ ಉದ್ಯೋಗವನ್ನೂ ನೀಡಿದ್ದಾರೆ. ಮದುವೆ ಮಂಗಳಕರವಾಗಿ ಮುಗಿದ ಬಳಿಕ ಈ ದಂಪತಿಯ ಮುಖದಲ್ಲಿ ತಮ್ಮ ಮಗಳನ್ನೇ ದಾರೆ ಎರೆದಷ್ಟು ಖುಷಿ ಎದ್ದು ಕಾಣುತ್ತಿತ್ತು.

Related Posts

Leave a Reply

Your email address will not be published.