ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮ ಬ್ರಹ್ಮಾವರದಲ್ಲಿ ಉದ್ಘಾಟನೆ

ಬ್ರಹ್ಮಾವರ:ಯುನೈಟೆಡ್ ಟೊಯೊಟ ವತಿಯಿಂದ ಟೊಯೊಟಾ ಮಾನ್ಸೂನ್ ಕಾರೋತ್ಸವ  ಕಾರ್ಯಕ್ರಮ ಬ್ರಹ್ಮಾವರದಲ್ಲಿ ಸೋಮವಾರ ನಡೆಯಿತು.

ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮ ಜೂ.10 ರಿಂದ ಜೂ.16 ರ ವರೆಗೆ ಬ್ರಹ್ಮವಾರದಲ್ಲಿ ನಡೆಯಲಿದೆ. ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮದ ಅಂಗವಾಗಿ ಗ್ರಾಹಕರಿಗೆ ಆಕರ್ಷಕ  ಆಫರ್ ಗಳನ್ನು ನೀಡಲಾಗುತ್ತಿದ್ದು.ತಮ್ಮ ಹಳೆ ಕಾರನ್ನು ನೀಡಿ ಉತ್ತಮ ಬೆಲೆಯನ್ನು ಪಡೆದುಕೊಂಡು ಹೊಸ ಕಾರನ್ನು ಖರೀದಿಸಲು ಅವಕಾಶವನ್ನು ಕಲ್ಪಿಸಲಾಗಿದೆ.ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೆ ಕಾರ್ ಲೋನ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಗ್ಲಾಂಝಾ ಕಾರ್ ಮೇಲೆ ಒಂದು ಲಕ್ಷದ ವರೆಗೆ ಹಾಗೂ ಹೈರೈಡರ್ ಕಾರ್ ಮೇಲೆ 75 ಸಾವಿರ ರೂಪಾಯಿ ವರೆಗೆ  ಡಿಸ್ಕೌಂಟ್ ಆಫರ್ ಕಂಪನಿ ಕಡೆಯಿಂದ ನೀಡಲಾಗುತ್ತಿದೆ. ಪೋರ್ರ್ಚುನರ್ ಕಾರ್ ಖರೀದಿಸುವವರಿಗೆ ಒಂದು ಲಕ್ಷದ ವರೆಗೆ ರೀಯಾತಿ ದೊರಕಲಿದೆ.

ಬ್ರಹ್ಮಾವರದಲ್ಲಿ  ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಟೊಯೊಟಾ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಟೊಯೊಟಾ ಕಂಪನಿ ಕೊಡ ಮಾಡುವ ವಿಶೇಷ ಆಫರ್ ಸೌಲಭ್ಯವನ್ನು ಪಡೆಯಬಹುದಾಗಿದೆ.ಕಾರ್ ಟೆಸ್ಟ್ ಡ್ರೈವ್ ಕೂಡ ಮಾಡಲು ಅವಕಾವನ್ನು ಕೂಡ ಕಲ್ಪಿಸಲಾಗಿದೆ.

ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಾ ಆರ್ ಹೆಗ್ಡೆ ಅವರು ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.ಕಾರೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಹೊಸದಾಗಿ ಬಿಡುಗಡೆ ಗೊಂಡಿರುವ ಟೈಸರ್ ಕಾರನ್ನು ಲಾಂಚ್ ಮಾಡಲಾಯಿತು.

ಉದ್ಯಾವರದ  ಯುನೈಟೆಡ್ ಟೊಯೊಟಾ ಬ್ರಾಂಚ್ ನ ಎಚ್.ಆರ್ ಮೇಘಾಚಂದ್ರ ಅವರು ಮಾತನಾಡಿ,ಟೊಯೊಟಾ ಕಂಪನಿ ಯಿಂದ ಆಯೋಜನೆ ಮಾಡುತ್ತಿರುವ ಕಾರೋತ್ಸವ ಕಾರ್ಯಕ್ರಮ ಜೂನ್.16 ರ ತನಕ ನಡೆಯಲಿದೆ.

ಇದೆ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಮಾನ್ಸೂನ್ ಕಾರೋತ್ಸವ ಕಾರ್ಯಕ್ರಮವನ್ನು ಬ್ರಹ್ಮವಾರ ಜಂಕ್ಷನ್ ನಲ್ಲಿ ಆಯೋಜನೆ ಮಾಡಲಾಗಿದ್ದು.ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಬೇಕೆಂದು ಕೇಳಿಕೊಂಡರು.

ಬ್ಯಾಂಕ್ ಆಫ್ ಬರೋಡ ಬ್ರಹ್ಮಾವರ ಶಾಖೆ ಮ್ಯಾನೇಜರ್ ಭರತ್ ಅವರು ಮಾತನಾಡಿ, ಗುಣಮಟ್ಟದ ಸೇವೆ ಮತ್ತು ಉತ್ತಮ ರೀತಿಯ ಕಾರ್ ಅನ್ನು ಉತ್ಪಾದನೆ ಮಾಡುವ ಟೊಯೊಟಾ ಕಂಪನಿ ಜನ ಪ್ರೀತಿಗೆ ಒಳಗಾಗಿದೆ.ಬ್ಯಾಂಕ್ ಆಫ್ ಬರೋಡ ಮತ್ತು ಟೊಯೊಟಾ ಕಂಪನಿ ಒಂಡಬಂಡಿಕೆಯನ್ನು ಮಾಡಿಕೊಂಡಿದ್ದು ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸ್ಥಳದಲ್ಲೆ ಲೋನ್ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.ಗ್ರಾಹಕರು ತಮ್ಮ ನೆಚ್ಚಿನ ಕಾರ್ ಅನ್ನು ಸ್ಥಳದಲ್ಲೇ ಕೊಂಡು ಕೊಳ್ಳಬಹುದು ಎಂದು ಹೇಳಿದರು.

ಮಾನ್ಸೂನ್ ಕಾರೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಂಬಾ ಹೋಟೆಲ್ ಟೂರ್ ಮತ್ತು ಟ್ರಾವೆಲ್ಸ್ ಮಾಲೀಕರಾದ ಸುರೇಶ,ಬಸ್ ಮಾಲೀಕರಾದ ಸತೀಶ್ ಶೆಟ್ಟಿ, ಟ್ಯಾಕ್ಸಿ ಮಾಲೀಕರ ಸಂಘದ ಗೌರವಾಧ್ಯಕ್ಷರಾದ ಸಂತೋಷ, ಟೊಯೊಟಾ ಕಂಪನಿ ಸಿಬ್ಬಂದಿಗಳಾದ ಶರೋನ್, ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

ದೇಶ ವಿದೇಶಗಳಲ್ಲಿ ಮನೆ ಮಾತಾಗಿರುವ ಯುನಿಟೆಡ್ ಟೋಯೊಟ ಕಂಪನಿ ಕಾರ್ ಉದ್ಯಮದಲ್ಲಿ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡಿದೆ.ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಕಾರ್ ಗಳನ್ನು ಮಾರಾಟ ಮಾಡಿ ಕೊಂಡು ಬಂದಿರುವ ಯುನಿಟೆಡ್ ಟೋಯೊಟ ಕಂಪನಿ ಗ್ರಾಹಕರ ನೆಚ್ಚಿನ ಕಂಪೆನಿಗಳಲ್ಲಿ  ಒಂದಾಗಿದೆ.

Related Posts

Leave a Reply

Your email address will not be published.