ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿಯಿಂದ ಪರಿಸರ ಉಳಿಸಿ-ಬೆಳೆಸುವ ಅಭಿಯಾನ

ಕಾಪುವಿನ ಕ್ರೆಸೆಂಟ್ ಇಂಟರ್ನಾ್ಯಷನಲ್ ಸ್ಕೂಲ್ ಎನ್‌ಎನ್‌ಒ ಪರ್ಯಾವರಣ ಸಂರಕ್ಷಣಾ ಸಮಿತಿ ವತಿಯಿಂದ ಪರಿಸರ ಉಳಿಸಿ – ಬೆಳೆಸುವ ಅಭಿಯಾನ ಪ್ರಯುಕ್ತ ಪರಿಸರ ಪ್ರಜ್ಞೆ ಬೆಳೆಸುವುದರ ಜತೆಗೆ ಪ್ರಕೃತಿ ಸಮತೋಲನ ಕಾಯ್ದುಕೊಂಡು ಉತ್ತಮ ಮಳೆ ಬೆಳೆ ಬರಲು ಸಹಾಯವಾಗುವಂತೆ ರಾಜ್ಯಾಧ್ಯಕ್ಷರಾದ ಶೈಖ್ ಅಬ್ದುಲ್ ವಾಹಿದ್ ಉಡುಪಿಯವರ ನೇತೃತ್ವದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಸ್ವಾಗತಿಸಿದರು. ಕೇಂದ್ರ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಸಲೀಂ ಮೂಡಬಿದ್ರೆ, ಅಬ್ದುಲ್ ರಝಾಕ್ ಕಾಪು, ಮೌ ಝಮೀರ್ ಅಹ್ಮದ್ ರಶಾದಿ ಸಸಿ ನೆಡುವ ಮಹತ್ವದ ಬಗ್ಗೆ ವಿವರಿಸಿದರು. ಶಾಲೆಯ ಸಂಚಾಲಕರಾದ ಶಮ್ಶಶುದ್ದೀನ್, ಪ್ರಾಂಶುಪಾಲರಾದ ಅಕ್ಬರ್ ಅಲಿ, ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ರಶೀದ್ ಕಾಪು, ಅಝೀಮ್ ಉಪ್ಪಳ, ಅಬ್ದುಲ್ ಖಾದರ್ ಮೂಡುಗೋಪಾಡಿ, ಶಾಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕಿ ಅಸ್ಮಾ ಅತಿಥಿಗಳನ್ನು ಪರಿಚಯಿಸಿದರು, ಅಧ್ಯಾಪಕಿ ಲಕ್ಷಿ ದೇವಿ ಕಾರ್ಯಕ್ರಮ ನಿರೂಪಿಸಿದರು.
