ಡಿ. 16ರಂದು ಕರಾವಳಿಯಾದ್ಯಂತ ಶಕಲಕ ಬೂಮ್ ಬೂಮ್ ತುಳು ಸಿನಿಮಾ ಬಿಡುಗಡೆ

ತುಳು ಸಿನಿಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಯು ಎನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶ್ರೀಷಾ ಎಲಾರೆ ಅವರು ನಿರ್ದೇಶಿಸಿದ ಹಾರರ್, ಥ್ರಿಲ್ಲರ್ ಸಸ್ಪೆನ್ಸ್ ಕಾಮಿಡಿಯನ್ನು ಹೊಂದಿರುವ ಹೊಸತನದ ಬಹು ನಿರೀಕ್ಷೆಯ ಶಕಲಕ ಬೂಮ್ ಬೂಮ್ ಚಿತ್ರ ಡಿಸೆಂಬರ್ 16 ರಂದು ಕರಾವಳಿಯ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ನಗರದ ಪ್ರಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಚಿತ್ರದ ನಿರ್ದೇಶಕ ಸುನೀಲ್ ಕಡತಳ ಅವರು, ತುಳು ಚಿತ್ರರಂಗ ಸೌಹಾರ್ದಯುತವಾಗಿ ಮುನ್ನಡೆಯಬೇಕು ಎಂಬ ಉದ್ದೇಶದಿಂದ 3-4 ವಾರದ ಅಂತರದಲ್ಲಿ ಚಿತ್ರ ಬಿಡುಗಡೆಯಾಗಲಿ ಎನ್ನುವ ಆಶಯ ನಮ್ಮದು ಎಂದರು. ಇನ್ನು ಸಿನಿಮಾದಲ್ಲಿ ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ರೂಪಾಶ್ರೀ ವರ್ಕಾಡಿ, ಗಾಡ್ವಿನ್ ಸ್ಪಾರ್ಕಲ್, ಲಕ್ಷಾ ಶೆಟ್ಟಿ, ಪ್ರವೀಣ್ ಮಾರ್ಕಮೆ ಮಿಮಿಕ್ರಿ ಶರಣ್, ಹರೀಶ್, ಗಾಳಿಪಟ ವಸಂತ್ ಮುನಿಯಾಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಪ್ರಜ್ವಲ್ ಸುವರ್ಣ ಮತ್ತು ಅರುಣ್ ರೈ ಛಾಯಾಗ್ರಹಣದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ. ಒಟ್ಟಿನಲ್ಲಿ ಡಿಸೆಂಬರ್ 16ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ.

Related Posts

Leave a Reply

Your email address will not be published.