ಬಾರೆ ಹಾಕುವ ಕಾರ್ಯಕ್ರಮ : ಸಾವಿರ ವರ್ಷಗಳ ಇತಿಹಾಸವಿರುವ ಸಂಪ್ರದಾಯ
ಕಬೇತಿಗುತ್ತು ಮನೆತನದ ದುಗ್ಗಣ್ಣ ಬೈದರಿಂದ ಮುನ್ನಡೆಸಿಕೊಂಡು ಬರುತ್ತಿರುವ ಸಾವಿರ ವರ್ಷಗಳ ಇತಿಹಾಸವಿರುವ ತುಳುನಾಡಿನ ಬಾರೆ ಹಾಕುವ ಸಂಪ್ರದಾಯದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರು ಪಾಲ್ಗೊಂಡರು.
ಸ್ವತ: ಕೃಷಿಯಲ್ಲಿ ತುಂಬಾ ಆಸಕ್ತಿ ಇರುವ, ಕೃಷಿ ಮನೆತನದ ಡಾ.ಭರತ್ ಶೆಟ್ಟಿಯವರು ಈ ಕುರಿತು ಮಾತನಾಡುತ್ತಾ, ಇಂದಿಗೂ ಈ ಸಂಪ್ರದಾಯವನ್ನು ಉಳಿಸಿ, ಆಚರಿಸಿಕೊಂಡು ಬರುತ್ತಿರುವ ಕುಟುಂಬಸ್ಥರನ್ನು ಅಭಿನಂದಿಸುವುದಾಗಿ ಹೇಳಿದರು. ಇಲ್ಲಿ 5 ಸಲ ಕೋಣಗಳನ್ನು ಕಂಬಳದ ಗದ್ದೆಯಲ್ಲಿ ಓಡಿಸಲಾಗುತ್ತದೆ. ಕಂಬಳದ ಸ್ಪರ್ಧೆ ಇರುವುದಿಲ್ಲ. ಸುಗ್ಗಿ ಬೆಳೆಯುವ ಮೊದಲು ನಡೆಯುವ ಈ ಕಾರ್ಯಕ್ರಮದಲ್ಲಿ ವರ್ಷಕ್ಕೊಮ್ಮೆ ಭಾಗವಹಿಸುವ ಖುಷಿ ಇದೆ ಶಾಸಕರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಬೇತಿಗುತ್ತು ನ ಪ್ರಮುಖರಾದ ಮೋಹನ್ ಪುಜಾರಿ, ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ಅಮಿತಾ ಶೆಟ್ಟಿ, ಹಿರಿಯರು, ನಾಗರಿಕರು, ಸ್ಥಳೀಯರು ಉಪಸ್ಥಿತರಿದ್ದರು.