ತುಮಕೂರಿನ ಸಿದ್ಧಗಂಗಾ ಮಠಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ

ಅರುಣ್ ಕುಮಾರ್ ಪುತ್ತಿಲ ಅವರು ತ್ರಿವಿಧ ದಾಸೋಹಿ ಮಠ ಎಂದೇ ಖ್ಯಾತವಾದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಗದ್ದುಗೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಸಿದ್ದಗಂಗಾ ಮಠದಾಧ್ಯಕ್ಷರಾದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರ ಹಾಗು ಕಿರಿಯ ಶ್ರೀ ಗಳಾದ ಪೂಜ್ಯ ಶ್ರೀ ಶಿವಸಿದ್ಧೇಶ್ವರ ಸ್ವಾಮಿಗಳವರ ಆಶೀರ್ವಾದ ಪಡೆದರು. ಮಠದಾಧ್ಯಕ್ಷರು ಅರುಣ್ ಕುಮಾರ್ ಪುತ್ತಿಲರವರ ಜೊತೆ ರಾಜಕೀಯ ಹಾಗೂ ಹಿಂದೂತ್ವದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಹಿಂದೂತ್ವದ ವಿಚಾರಧಾರೆಯ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಇನ್ನೊಮ್ಮೆ ಮಠಕ್ಕೆ ಆಗಮಿಸಬೇಕೆಂದು ಪುತ್ತಿಲರಲ್ಲಿ ಮಠದ ಆಡಳಿತ ಮಂಡಳಿ ತಿಳಿಸಿದೆ.
