Home Page 2

ಸೋಮ್ ಭಾಯ್ ಮೋದಿ ಅವರಿಂದ ಉಡುಪಿ ಪ್ರಸಾದ್ ನೇತ್ರಾಲಯದ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನೆ

ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮವು ನ.21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ್ ಅಚಾರ್ಯ ಶುಭಾಂಸನೆಗೈಯಲಿದ್ದಾರೆ.

ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡ ಅನನ್ಯಾ ಸಿಂಗ್

ಮಂಗಳೂರಿನ ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾದ ಅನನ್ಯಾ ಸಿಂಗ್ ಅವರು ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿದ್ದಾರೆ ನವದೆಹಲಿಯ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಆಯೋಜಿಸಿರುವ ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್-

ಟೋಲ್‌ಗೇಟ್ ಪಕ್ಕದಲ್ಲೆ ಬಸ್ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಮಂಜೇಶ್ವರ: ಕೇರಳ ಗಡಿ ಭಾಗದಿಂದ ಪ್ರಯಾಣಿಕರನ್ನು ಹೇರಿಕೊಂಡು ಆಗಮಿಸುತ್ತಿರುವ ಬಸ್ಸುಗಳು ಕೇರಳ ಕರ್ನಾಟಕದ ಗಡಿಯಲ್ಲಿರುವ ಕರ್ನಾಟಕದಲ್ಲಿ ಪ್ರಯಾಣಿಕರನ್ನು ಇಳಿಸಿ ಟೋಲ್ ಗೇಟ್ ಪಕ್ಕದಲ್ಲೇ ನಿಲುಗಡೆಯನ್ನು ನೀಡುವುದನ್ನು ಪ್ರತಿಭಟಿಸಿ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸ್ಥಳೀಯ ವ್ಯಾಪಾರಿಗಳ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದರು. ಎಲ್ಲಾ ಖಾಸಗಿ ಬಸ್ಸುಗಳು ಕೊರೊನ

ನ.21ರಿಂದ ಜ.7ರ ತನಕ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ರಂಗಪೂಜೆ

ಪುತ್ತೂರು ತಾಲೂಕಿನ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಾರ್ಪಾಡಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 21 ರಂದು ಆರಂಭಗೊಂಡು ಜನವರಿ 7 ರ ತನಕ ನಿರಂತರ 48  ದಿನಗಳ ಕಾಲ (ಒಂದು ಮಂಡಲ) ಸಂಜೆ ವಿಶೇಷ ರಂಗಪೂಜೆ ನಡೆಯಲಿದೆ. ಮೂರನೇ ವರ್ಷದಲ್ಲಿ ನಡೆಯುತ್ತಿರುವ ಈ ವಿಶೇಷ ರಂಗಪೂಜೆಯು ಕಾರ್ಪಾಡಿ, ಶ್ರೀ. ಸುಬ್ರಹ್ಮಣ್ಯ ಕ್ಷೇತ್ರದ ವಿಶೇಷತೆಗಳಲ್ಲಿ ಒಂದು. ನಿರಂತರ

ರೆ. ಜಾರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಗಾರ್ಡ್‌ನ್ ಲೋಕಾರ್ಪಣೆ

ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಯಿನಾಥ್ ಶೇಟ್ ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಯಿನಾಥ ಶೇಟ್ ಅವರನ್ನು ದೈವಜ್ಞ ಬ್ರಾಹ್ಮಣ ಸಮಾಜ ಕುಂದಾಪುರ ವತಿಯಿಂದ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಸ್ವಾತಿ ಜಿ ಶೇಟ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾತ್ವಿಕ್ ಕೋಟೇಶ್ವರ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ

ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯದ ಡಾ. ಸಂಧ್ಯಾ ಶೆಣೈರವರಿಗೆ ವಿಶ್ವ ಶ್ರೇಷ್ಠ ವಿಜ್ಞಾನಿ ಸ್ಥಾನ

ಸುರತ್ಕಲ್ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಂಧ್ಯಾ ಶೆಣೈ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವೈಜ್ಞಾನಿಕ ಪ್ರಬಂಧಗಳಿಗೆ ಇತರ ಸಂಶೋಧಕರಿಂದ ಸಿಗುವ ಉಲ್ಲೇಖಗಳನ್ನಾಧರಿಸಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಲಂಡನ್ ಅವರು

ಕ.ಸಾ.ಪಗೆ ಒಂದು ಸಾವಿರ ಕೋಟಿ ರೂ ಶಾಶ್ವತ ನಿಧಿ ಸ್ಥಾಪನೆ ತಮ್ಮ ಗುರಿ ; ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧಿ ಮಾಯಣ್ಣ

ಬೆಂಗಳೂರು, ನ 18; ನಾಡಿನ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಆರ್ಥಿಕ ಬಲ ತುಂಬುವುದು ತಮ್ಮ ಪ್ರಧಾನ ಆದ್ಯತೆಯಾಗಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಮೊತ್ತದ ಶಾಶ್ವತ ನಿಧಿ ಸ್ಥಾಪಿಸಲು ಶ್ರಮಿಸುವುದಾಗಿ ಪರಿಷತ್ತಿನ ಅಧ್ಯಕ್ಷ ಸ್ಥಾನದ ಸ್ಪರ್ಧಿ ಮಾಯಣ್ಣ ಹೇಳಿದ್ದಾರೆ.ಇದೇ ತಿಂಗಳ 21 ರಂದು ನಡೆಯಲಿರುವ

ಪುನಿತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಪ್ರಧಾನಿ  ಅವರಿಗೆ ರಕ್ಷಾ ರಾಮಯ್ಯ ಒತ್ತಾಯ ; ರಾಜ್ಯಪಾಲರಿಗೆ ನಿಯೋಗದ ಮೂಲಕ ಮನವಿ ಸಲ್ಲಿಕೆ

ಬೆಂಗಳೂರು, ನ 18; ಇತ್ತೀಚೆಗೆ ಅಗಲಿದ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರದೇಶ ಯುವ ಕಾಂಗ್ರೆಸ್ ಸಮಿತಿ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಶ್ಲಾಘನೀಯ -ಡಾ.ಕುಮಾರ್

ಕಡಬ: ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪತ್ರಕರ್ತರ ಪ್ರಯತ್ನ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿಂದು ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ