ಉಚ್ಚಿಲ : ನಾಮಫಲಕ ಅಳವಡಿಸಿದ್ದರ ವಿರುದ್ಧ ಆಟೋ ಚಾಲಕರ ಗೊಂದಲ ಪೊಲೀಸ್ ಸಮ್ಮುಖದಲ್ಲಿ ನಾಮಫಲಕ ತೆರವು
ಕೆಲ ಅಟೋ ರಿಕ್ಷಾ ಚಾಲಕರು ಅಟೋ ನಿಲ್ದಾಣ ಎಂಬ ನಾಮಫಲಕ ಅಳವಡಿಸಿದರ ವಿರುದ್ಧ ಆಕ್ರೋಶಗೊಂಡ ಉಚ್ಚಿಲ ಅಟೋ ಯೂನಿಯನ್ ಸದಸ್ಯರು ಪ್ರತಿಭಟಿಸಿ ಪೆÇಲೀಸ್ ಸಮುಖದಲ್ಲಿ ಬೋರ್ಡ್ ತೆರವುಗೊಳಿಸಲಾಯಿತು.ಉಚ್ಚಿಲ ಅಟೋ ಯೂನಿಯನ್ ಪ್ರಮುಖರಾದ ಸಿರಾಜ್ ಉಚ್ಚಿಲ ಮಾಹಿತಿ ನೀಡಿ, ಯೂನಿಯನ್‍ಗೆ ಸೇರದ ಕೆಲವು ಮಂದಿ ಹಾಗೂ ನೆರೆಯ ಊರಿನ ಕೆಲವು ಅಟೋ ಚಾಲಕರು ಸೇರಿ ಯಾವುದೇ ಪರವಾನಗೆ ಪಡೆಯದೆ ಏಕಾಏಕಿ ಮಹಾಲಕ್ಷ್ಮೀ ದೇವಳದ ಬಳಿಯ ಫುಟ್ ಫಾತ್ ನಲ್ಲಿ ಬೊರ್ಡ್ ನೆಟ್ಟಿದ್ದು, ಈ ಬಗ್ಗೆ ಪೊಲೀಸ್ ಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಯಾವುದೇ ಇಲಾಖೆಯ ಪರವಾನಗಿ ಪಡೆದೆ ನೆಟ್ಟ ಬೋರ್ಡ್ ತೆರವುಗೊಳಿಸಿದ್ದು, ನಾಳೆ ಎರಡೂ ತಂಡದ ಸದಸ್ಯರನ್ನು ಠಾಣೆಗೆ ಮಾತುಕತೆಗೆ ಕರೆದಿದ್ದಾರೆ ಎಂದಿದ್ದಾರೆ. ಸದ್ಯಕ್ಕೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತ್ತಿದ್ದು ನಾಳೆ ನಡೆಯುವ ಸಭೆಯ ಮೇಲೆ ಇಲ್ಲಿನ ಪರಿಸ್ಥಿತಿ ಅವಲಂಬಿತವಾಗಿದೆ.