ಉಚ್ಚಿಲ ಬಡಾ ಗ್ರಾ.ಪಂ. ಪ್ರಥಮ ಗ್ರಾಮ ಸಭೆ
ಕೇವಲ ಬೆರಳೆಣಿಕೆಯ ಗ್ರಾಮಸ್ಥರ ಮಧ್ಯೆಯೇ 56ನೇ ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ಪ್ರಥಮ ಗ್ರಾಮ ಸಭೆ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆದಿದೆ.
ಆರಂಭದಲ್ಲೇ ಸಭಾಭವನದಲ್ಲಿ ಸೂಕ್ತ ಧ್ವನಿವರ್ಧಕದ ವ್ಯವಸ್ಥೆ ಇಲ್ಲದೆ ಸಭೆ ಮಾತುಗಳು ಉಪಸ್ಥಿತರಿದ್ದ ಬೆರಳೆಣಿಕೆ ಮಂದಿಗೂ ಕೇಳದೆ ಸಭೆಯಲ್ಲಿ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು.15 ಮಂದಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಮಾತ್ರ ಸಭೆಯಲ್ಲಿ ಕಾಣಿಸುತ್ತಿದ್ದು ಗ್ರಾ.ಪಂ. ಕಾರ್ಯವೈಕರಿ ಎದ್ದು ಕಾಣಿಸುವಂತ್ತಿತ್ತು. ಇಲ್ಲದ ಗ್ರಾಮಸ್ಥರಿಗೆ ಆಗಮಿಸಿದ ಅಧಿಕಾರಿಗಳು ಮಾಹಿತಿ ನೀಡುವ ಮೂಲಕ ಹರಕೆ ತೀರಿಸಿ ಮರಳಿದ್ದಾರೆ.ಇಪ್ಪತ್ತೊಂದು ಸದಸ್ಯ ಬಲ ಹೊಂದಿರು ಗ್ರಾ.ಪಂ.ನ ಐದು ಮಂದಿ ಸದಸ್ಯರು ಗೈರು ಹಾಜರಾಗುವ ಮೂಲಕ ತಮ್ಮ ಜವಾಬ್ದಾರಿ ಮರೆತು ವರ್ತಿಸಿದ ಬಗ್ಗೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.
ಒಟ್ಟಾರೆಯಾಗಿ ಗ್ರಾಮ ಸಭೆ ಕಾಟಾಚಾರಕ್ಕೆ ನಡೆದಂತಿದ್ದು. ನೋಡಲ್ ಅಧಿಕಾರಿಯಾಗಿ ಆಗಮಿಸಿದ ವಿವೇಕಾನಂದ ಗಾಂವ್ಕರ್ ರವರು ಈ ಎಲ್ಲಾ ವಿದ್ಯಾಮಾನಗಳನ್ನು ಮೂಕ ಪ್ರೇಕ್ಷಕರಾಗಿ ನೋಡುವ ಸ್ಥಿತಿ ಅವರದ್ದಾಗಿತ್ತು.