ಉಚ್ಚಿಲ: ಓವರ್ ಟೇಕ್ ಭರದಲ್ಲಿ ಡಿವೈಡರ್ ಮೇಲೇರಿದ ಬಸ್ಸು: ಆಕ್ರೋಶಿತ ಪ್ರಯಾಣಿಕರಿಂದ ಬಸ್ಸಿನ ಗಾಜು ಪುಡಿ

ಎರಡು ಬಸ್ಸುಗಳ ಓವರ್‌ಟೇಕ್ ಭರದಲ್ಲಿ ಬಸ್ಸೊಂದು ಡಿವೈಡರ್ ಮೇಲೇರಿದ ಘಟನೆ ಉಚ್ಚಿಲ ಸಮಿಪದ ಮೂಳೂರು ವೆಸ್ಟ್‌ಕೋಸ್ಟ್ ನರ್ಸರಿ ಬಳಿ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುವ ವಿಶಾಲ್ ಹೆಸರಿನ ಎರಡು ಬಸ್ಸುಗಳು ಓವರ್ಟೇಕ್ ಮಾಡಿಕೊಂಡು ಬಂದು ಮೂಳೂರು ಬಳಿ ಸರ್ವಿಸ್ ರಸ್ತೆಯ ಪಕ್ಕದ ಡಿವೈಡರ್ ಮೇಲೇರಿದೆ.ಘಟನೆಯಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಘಟನೆಯಿಂದ ರೊಚ್ಚಿಗೆದ್ದ ಪ್ರಯಾಣಿಕರು ಬಸ್ಸಿನ ಕಿಟಕಿ ಗಾಜುಗಳನ್ನು ಪುಡಿಗೈದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.