ಉಚ್ಚಿಲ:ವಸತಿ ಸಂಕೀರ್ಣದ ಅವ್ಯವಸ್ಥೆ- ನಿವಾಸಿಗಳ ಅಕ್ರೋಶ

ಉಚ್ಚಿಲ ಪೇಟೆಯ ಹೃದಯ ಭಾಗದಲ್ಲಿರುವ ಬಹು ಮಹಡಿ ವಸತಿ ಸಂಕೀರ್ಣದಲ್ಲಿ ಬ್ಲೂ÷್ಯ ವೇವ್ಸ್ ನಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದ್ದು ಅಲ್ಲಿಯ ನಿವಾಸಿಗಳು ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಟ್ಟಡಕ್ಕೆ ಸಂಬAಧಿಸಿ ಐವರು ಪಾಲುದಾರರಿದ್ದರೂ ಕೂಡ ಇಲ್ಲಿಯ ನಿವಾಸಿಗಳ ಮಾತಿಗೆ ಸ್ಪಂದಿಸುತ್ತಿಲ್ಲ. ಈ ಕಟ್ಟಡದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕಟ್ಟಡದ ಸುತ್ತಲೂ ತ್ಯಾಜ್ಯ ರಾಶಿ, ಕುಡಿಯಲು ಯೋಗ್ಯವಲ್ಲದ ನೀರು, ಕಟ್ಟಡದ ನೆಲ ಅಂತಸ್ತಿನ ನೀರಿನ ಪೈಪ್ ಒಡೆದಿದ್ದರೂ ದುರಸ್ಥಿ ಪಡಿಸುತ್ತಿಲ್ಲ, ಕಟ್ಟಡದ ಕೋಣೆಗಳನ್ನು ಮಾರಾಟ ನಡೆಸುವ ಸಂದರ್ಭ ಎಲ್ಲವೂ ಇದೆ ಎಂಬುದಾಗಿ ನಮಗೆ ಸುಳ್ಳು ಹೇಳಿ ಇದೀಗ ಯಾವುದನ್ನೂ ನೀಡದೆ ಯಾಮಾರಿಸುತ್ತಿದ್ದಾರೆ. ಬಹಳಷ್ಟು ಬಾರಿ ಮೌಕಿಕವಾಗಿ ಕಟ್ಟಡ ಮಾಲಿಕರಲ್ಲಿ ಮನವಿ ಮಾಡಿದ್ದಾಗಿದೆ. ನಮ್ಮ ನೋವನ್ನು ಲಿಖಿತ ಮೂಲಕ ಪೊಲೀಸರಿಗೆ ತಿಳಿಸಿದ್ದಾಗಿದೆ, ಆದರೂ ಈ ವರಗೆ ಯಾವುದೇ ಪ್ರಯೋಜನವಾಗಿಲ್ಲ ಮುಂದೆ ನಮ್ಮ ಉಳಿವಿಗಾಗಿ ಏನು ಮಾಡ ಬೇಕೆಂಬುದನ್ನು ನಾವೆಲ್ಲಾ ಸೇರಿ ನಿರ್ಧಾರ ಮಾಡಲಿದ್ದೇವೆ ಎಂಬುದಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Related Posts

Leave a Reply

Your email address will not be published.