ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ -3182 : ಡಾ. ಜಯಗೌರಿ ಹಡಿಗಾಲ್ ರವರ ಜಿಲ್ಲಾ ಯೋಜನೆಗಳ ಮಾಹಿತಿ.

ಮಕ್ಕಳಲ್ಲಿ ಕಲಿಕಾ ನ್ಯೂನತೆಯನ್ನು ಗುರುತಿಸುವುದು: ಪ್ರತಿಯೊಂದು ಕ್ಷಬ್‌, ಶಿಕ್ಷಕರಿಗೆ ಮತ್ತು ಪೋಷಕರಿಗೆ ಆಯಾ ಶಾಲೆಗಳಲ್ಲಿ ಕಾರ್ಯಾಗಾರವನ್ನು ಏರ್ಪಡಿಸಿ ಹಾಗು ಹತ್ತಿರದ ಶಾಲೆಗಳ ಎಲ್ಲಾ ಶಿಕ್ಷಕರನ್ನು ಮತ್ತು ಕಲಿಕಾ ನ್ಯೂನತೆಯುಳ್ಳ ಮಕ್ಕಳ ಪೋಷಕರನ್ನು ಒಂದುಕಡೆ ಸೇರಿಸಿ ದೊಡ್ಡ ಮಟ್ಟದ ಕಾರ್ಯಾಗಾರವನ್ನು ಏರ್ಪಡಿಸುವುದು. ಕಲಿಕಾ ನ್ಯೂನತೆ ಇದ್ದರೂ ಮುಂದೆ ವೃತ್ತಿ ಜೀವನದಲ್ಲಿ ಅಸಾಧಾರಣ ಸಾಧನೆ ಮಾಡಿದ (ಉದಾ ಸಂಗೀತ, ನೃತ್ಯಕಲೆ, ಕ್ರೀಡೆ. ಕೃಷಿ, ಹೊಲಿಗೆ ಇತ್ಯಾದಿ) ವ್ಯಕ್ತಿಗಳನ್ನು ಕರೆಸಿ. ಅವರ ಜೀವನ ಯಾತ್ರೆಯ ಕುರಿತು ಉಪನ್ಯಾಸವನ್ನು ಶಾಲೆಗಳಲ್ಲಿ ವಿಧ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಏರ್ಪಡಿಸಿ ಅವರಲ್ಲಿ ಮನೊಲ್ಲಾಸವನ್ನು ಕು೦ಬಿಸಲು ಪ್ರಯತ್ನಿಸುವುದು.

ಚರ್ಮ ಮತ್ತು ಅಂಗಾಂಗ ದಾನ : ಭಾರತ ದೇಶದಲ್ಲಿ ಲಕ್ಷಾಂತರ ಮಂದಿಗೆ ಚರ್ಮ, ಮೂತ್ರಪಿಂಡ, ಯಕೃತ್‌, ಹೃದಯ, ಪಿತ್ತ ಜನಕಾಂಗ, 18 ಚುಂತಾದ ಬಹು ಮುಖ್ಯ ಆಂಗಾ೦ಗಗಳ ತುರ್ತು ಅಗತ್ಯವಿದೆ. ಕೇವಲ 0.01% ಪ್ರಜೆಗಳು ಮಾತ್ರ ಇಂದು ಅಂಗಾಂಗ ದಾನ ಮಾಡುತ್ತಿದ್ದಾರೆ. ಈ ಅಂಗಾಂಗ ದಾನದ ಬಗ್ಗೆ ತಿಳಿವಳಿಕೆ ಮೂಡಿಸುವುದು ಅನಿವಾರ್ಯವಾಗಿದೆ. ಒಬ್ಬ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು.

ಸ್ತ್ರೀ ಸಶಕ್ತಿಕರಣ : ಸ್ತೀಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತೀಕರಿಸುವ ಸದುದ್ದೇಶದಿ೦ದ ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಉದ್ಯೋಗ ಒದಗಿಸುವುದರ ಮೂಲಕ ಮಹಿಳೆಯರ ಸಾಮರ್ಥ್ಯವನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಹೊಲಿಗೆ ವೃತ್ತಿಯನ್ನು ಸ್ವಉದ್ಯೋಗಿಯಾಗಲು ಬಯಸುವ, ಮಹಿಳೆಯರಿಗೆ ಸ್ವಂತ ಉದ್ಯೋಗವನ್ನು ಕಲ್ಪಿಸುವ ಇನ್ನೊಂದು ಜಿಲ್ಲಾ ಯೋಜನೆಯನ್ನು ರೋಟರಿ ಜಿಲ್ಲೆ 3182 ಈ ವರ್ಷ ಪಸ್ತಾಪಿಸಿದೆ. ಪ್ರತೀ ರೋಟರಿ ಕ್ಲಬ್‌ಗಳು ಕನಿಷ್ಠ ತಲಾ ಇಬ್ಬರು ಬಡ ಫಲಾನುಭವಿ ಮಹಿಳೆಯರನ್ನು ಆಯ್ಕೆ ಮಾಡಿಕೊಂಡುಅವರಿಗೆ ಹೊಲಿಗೆ ಯಂತ್ರವನ್ನು ನೀಡುವುದು.

ಜಲ ಯಾತ್ರಾ : ಭಾರತೀಯ ಕುಟುಂಬ ಅಭಿವೃದ್ಧಿ ಸಮೀಕ್ಷೆಯ ಪ್ರಕಾರ ಗ್ರಾಮಾ೦ತರ ಪ್ರದೇಶದ ಪ್ರತಿ ನಾಲ್ಕು ಕುಟುಂಬಗಳ ಪೈಕಿ ಒಂದು ಕುಟು೦ಬವು ಕುಡಿಯುವ ನೀರಿಗಾಗಿ ಅರ್ಧಗಂಟೆ ಸಾಗಬೇಕಾಗಿದೆ. ಈ ನೆಲೆಯಲ್ಲಿ ಸಾರ್ವತ್ರಿಕವಾಗಿ ಜಲಜಾಗೃತಿಯನ್ನು ಮೂಡಿಸುವ ಚಿಂತನೆಯಿಂದ ಜಲ ಯಾತ್ರಾ ಜಿಲ್ಲಾ ಆಂದೋಲನವನ್ನು ಕೈಗೆತ್ತಿಕೊಳ್ಳಲು ರೋಟರಿ ಜಿಲ್ಲೆ 3182 ಈ ಬಾರಿ ಕೈಗೆತ್ತಿಗೊಂಡಿದೆ . ವಿದ್ಯಾರ್ಥಿಗಳಲ್ಲಿ ಜಲಜಾಗೃತಿಯನ್ನು ಮೂಡಿಸಿ, ನೀರು ಮತ್ತು ಜಲ ಸ೦ರಕ್ಷಣೆಯ ಅಧ್ಯಯನದಲ್ಲಿ ನಿ ರತರಾಗುಪಂತೆ ಪ್ರೇರೇಪಿಸುವುದು. ಸಮುದಾಯದಲ್ಲಿ ಜನಜಾಗೃತಿ ಜಾಥಾವನ್ನು ಏರ್ಪಡಿಸಿ, ಜಲ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಖಾತ್ರಿ ಪಡಿಸಿಕೊಳ್ಳುವುದು. ಜಲ ಸಂರಕ್ಷಣೆಗಾಗಿ ಸರಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಸಹಯೋಗ ನೀಡುವುದು.

ಇ-ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ: ಬಳಸಿ ಬಿಸಾಡುವ ವಸ್ತುಗಳ ಉತ್ಪಾದನೆಗೆ ಕಡಿವಾಣ, ಮತ್ತೆ ಮತ್ತೆ ಮರು ಬಳಸುವ, ರಿಪೇರಿಗೆ ಅವಕಾಶವಿರುವ, ಅಪ್‌ಡೇಟ್‌ಗೆ ಅವಕಾಶವಿರುವ ಉಪಕರಣಗಳ ಬಳಕೆ ಮಾಡಬೇಕು. ನಮ್ಮ ರೋಟರಿ ಜಿಲ್ಲೆಯಲ್ಲಿ ಸರಕಾರ ಮತ್ತು ಖಾಸಗಿ ಪಾಲುದಾರಿಕೆಯೊಂದಿಗೆ ಮರುಖರೀದಿ ಮತ್ತು ತ್ಯಾಜ್ಯ ಸ೦ಗ್ರಹ ಕೇ೦ದ್ರ ಗಳನ್ನು ಸ್ಥಾಪಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ವಿಶ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಪ್ಲಾಸ್ಟಿಕ್‌ ತ್ಯಾಜ್ಯ: ಪ್ಲ್ಯಾಸ್ಟಿಕ್‌ ತ್ಯಾಜ್ಯ ಭಾರತ ಎದುರಿಸುತ್ತಿರುವ ದೊಡ್ಡ ಪರಿಸರ ಸವಾಲುಗಳಲ್ಲಿ ಒಂದಾಗಿದೆ.ಏಕ ಬಳಕೆ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಮೊದಲ ಹೆಜ್ಜೆಯಾದರೆ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡುವುದು ಎರಡನೇ ಮುಖ್ಯ ಹೆಜ್ಜೆಯಾಗಿದೆ. ಮರುಬಳಕೆಗೆ ಯೊಗ್ಯವಾಗುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮರುಬಳಸುವಲ್ಲಿ ಸಮುದಾಯಕ್ಕೆ ಕಾಲಕಾಲಕ್ಕೆ ಮಾಹಿತಿ ನೀಡುವುದು. ಪ್ಲಾಸ್ಟಿಕ್‌ ತ್ಯಾಜ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಭಿತ್ತಿ ಚಿತ್ರಗಳು, ಘೋಷಣಾ ಫಲಕಗಳು, ಬೀದಿ ನಾಟಕಗಳ ಪ್ರದರ್ಶನವನ್ನು ಏರ್ಪಡಿಸುವುದು.

Related Posts

Leave a Reply

Your email address will not be published.