ಉಡುಪಿ “ಕಾಶ್ಮೀರ್ ಡೈರಿ” ಕೃತಿಯ ಲೋಕಾರ್ಪಣೆ ಕಾರ್ಯಕ್ರಮ
ಸುಹಾಸಂ ಉಡುಪಿ, ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ ಮತ್ತು ಧಾತ್ರಿ ಪ್ರಕಾಶನ ಇವರ ಜಂಟಿ ಆಶ್ರಯದಲ್ಲಿ, ಸೆಪ್ಟೆಂಬರ್ 03, 2022 ರ ಶನಿವಾರದಂದು ಉಡುಪಿಯ ಕಿದಿಯೂರು ಹೋಟೆಲ್‍ನ ಅನಂತ ಶಯನ ಹಾಲ್‍ನಲ್ಲಿ, ಲೇಖಕ ಎಸ್. ಉಮೇಶ್ ರವರ “ಕಾಶ್ಮೀರ್ ಡೈರಿ” ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಜರುಗಿತ್ತು.
ಈ ಸಮಾರಂಭದಲ್ಲಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ರವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅಂಕಣಕಾರರು ಮತ್ತು ಅಂತರಾಷ್ಟ್ರೀಯ ವ್ಯವಹಾರ ವಿಶ್ಲೇಷಕರಾದಂತಹ ಶ್ರೀ ಪ್ರೇಮ್ ಶೇಖರ್, ಕಾಶ್ಮೀರ್ ಡೈರಿ ಕುರಿತು ಮಾತನಾಡಿದರು.
ಸುಹಾಸಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಶಾಂತಾರಾಜ್ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ಅಧ್ಯಕ್ಷರಾದ ಶ್ರೀ ರವಿರಾಜ್ ಹೆಚ್. ಪಿ. ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.