ಕಾಪು : ಪೋಷಣ್ ಅಭಿಯಾನ-ಪೋಷಣ್ ಮಾಸಾಚರಣೆ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಪು ಪುರಸಭೆ, ಡೇ ನಲ್ಮ್ ಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು, ಶ್ರೀ ದೇವಿ ಸ್ಪೋರ್ಟ್ ಮತ್ತು ಕಲ್ಟರಲ್ ಕ್ಲಬ್ ಕಾಪು, ಅರಣ್ಯ ಇಲಾಖೆ ಪಡುಬಿದ್ರಿ ವಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು ಹಾಗೂ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು, ಯುನಿಸೆಫ್ ಇವರ ಸಹಯೋಗದೊಂದಿಗೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಘೋಷಣ್ ಅಭಿಯಾನ, ಘೋಷಣಾ ಮಾಸಾಚರಣೆ – 2022 ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ ಸ್ಟೀವನ್ ಕ್ವಾಡ್ರಸ್ ಉದ್ಘಾಟಿಸಿದರು, ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಕಾಪು ಪುರಸಭಾ ಕಾರ್ಯನಿರ್ವಾಹನಾಧಿಕಾರಿ ವೆಂಕಟೇಶ್ ನಾವಡ,ಮಕ್ಕಳನ್ನು ಕಾಡುತ್ತಿರುವ ಅನಾರೋಗ್ಯ, ನ್ಯೂಟ್ರೀಷಿಯನ್ ಕೊರತೆಯನ್ನು ನೀಗಿಸುವಲ್ಲಿ ಪೆÇೀಷಣ್ ಅಭಿಯಾನ ಕಾರ್ಯಕ್ರಮ ಮಹತ್ವಪೂರ್ಣ ಭೂಮಿಕೆಯನ್ನು ನಿಭಾಯಿಸುತ್ತಿದೆ ಎಂದರು.ಈ ಸಂದರ್ಭ ವೈದ್ಯಾಧಿಕಾರಿ ಡಾ. ಸುಬ್ರಾಯ ಕಾಮತ್,ವಿಜಯ್ ಕುಮಾರ್, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.