ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಲ್ನಡಿಗೆ ಜಾಥ

75ನೇ ಸ್ವಾತಂತ್ರೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆದ ಕಾಲ್ನಡಿಗೆ ಜಾಥವನ್ನು ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು… ದೇಶ ಸ್ವಾತಂತ್ರ್ಯ ಪಡೆಯಲು ಬಹಳಷ್ಟು ತ್ಯಾಗ ಬಲಿದಾನಗಳನ್ನು ನಡೆಸಿದೆ. ಇದೀಗ ದೇಶ ಕಾಯುವೆ ಎಂಬವರು ನಾನಾ ಹೆಸರಲ್ಲಿ ಗುರುತಿಸಿಕೊಂಡು ಬ್ರಿಟಿಷರೊಂದಿಗೆ ಸೇರಿಕೊಂಡು ದೇಶಕ್ಕೆ ಮೋಸ ಮಾಡಿದವರಾಗಿದ್ದಾರೆ ಎಂದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ದೇಶದ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದತೆಗಾಗಿ ಅಖಿಲಭಾರತ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೂಚನೆಯ ಮೇರೆಗೆ ಕಟಪಾಡಿಯಿಂದ ಶಿರ್ವ ವರಗೆ ಸುಮಾರು ಹದಿನೈದು ಕೀ.ಮಿ ಜಾಥ ನಡೆಸುತ್ತಿದ್ದು, ಈ ಜಾಥದಲ್ಲಿ ಪಕ್ಷದ ಪ್ರಮುಖರನೇಕರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಭ ಕಾಪು ಬ್ಯಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮುಂಖಡರಾದ ಧ್ರುವ ನಾರಾಯಣ್, ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಶೆಟ್ಟಿ, , ಹರೀಶ್ ನಾಯಕ್ ಕಾಪು, ಅಭಯಚಂದ್ರ ಜೈನ್, ಸರಸು ಬಂಗೇರ, ಸುಧೀರ್ ಹೆಜಮಾಡಿ, ರಮೀಜ್ ಹುಸೇನ್, ಶೇಖರ್ ಹೆಜಮಾಡಿ, ಅಶೋಕ್ ನಾಯಾರಿ, ಜ್ಯೋತಿ ಮೆನನ್, ಗೀತಾ ವಾಗ್ಳೆ ಮುಂತಾದವರಿದ್ದರು.
