ಉಡುಪಿ : ಬೈಕ್‍ಗೆ ಲಾರಿ ಢಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
ಬೈಕ್ಕೊಂದಕ್ಕೆ ಲಾರಿಯೊಂದು ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಮೃತ ವ್ಯಕ್ತಿ ಕಟಪಾಡಿ ಸರ್ಕಾರಿ ಗುಡ್ಡೆ ಮೂಡಬೆಟ್ಟು ನಿವಾಸಿ ಹೂವಿನ ವ್ಯಾಪಾರಿ ಮಹಮ್ಮದ್ ರಫೀಕ್ ಬಾವ(35),
ವಿವಾಹಿತರಾಗಿದ್ದ ಇವರು ಒಂದು ಮಗುವಿನ ತಂದೆ, ಕಟಪಾಡಿಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಇವರು ದ್ವಿಚಕ್ರ ವಾಹನದಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಉದ್ಯಾವರ ತಲುಪುತಿದ್ದಂತೆ, ಕೇರಳದಿಂದ ಮುಂಬೈಗೆ ಬಾಡಿ ಪಿಕ್ಸ್ ಮಾಡಲು ಹೊಗುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.