ಉಡುಪಿ : ದಿಶಾ ಸರ್ಜಿಕಲ್ಸ್ & ಲೈಫ್ ಕೇರ್ ಶುಭಾರಂಭ
ಉಡುಪಿ ನಗರದಲ್ಲಿ ನೂತನವಾಗಿ ಶುಭಾರಂಭಗೊಂಡ ದಿಶಾ ಸರ್ಜಿಕಲ್ಸ್ & ಲೈಫ್ ಕೇರ್, ಹಳೆ ಡಯಾನ ಸರ್ಕಲ್ ನ ಕಲ್ಪನಾ ರೆಸಿಡೆನ್ಸಿ ಬಿಲ್ಡಿಂಗ್ ನೆಲ ಮಹಡಿಯಲ್ಲಿ ಜನರ ಸೇವೆಗಾಗಿ ತೆರೆದುಕೊಂಡಿದೆ. ಇದರ ಉದ್ಘಾಟನಾ ಸಮಾರಂಭವು ಅಕ್ಟೋಬರ್ 14, 2022 ರ ಶುಕ್ರವಾರದಂದು ಜರುಗಿತ್ತು. ಈ ಶುಭ ಸಂದರ್ಭದಲ್ಲಿ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟನೆ ನೆರವೇರಿಸಿದರು. ಕರ್ಲಾನ್ ಲಿಮಿಟೆಡ್ ಸಂಸ್ಥೆಯ ಸಿಎಂಡಿ ಟಿ. ಸುಧಾಕರ್ ಪೈ ಅಧ್ಯಕ್ಷತೆಯನ್ನು ವಹಿಸಿದ್ದರು. ಇದರ ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಮೈಸೂರು ಎಲೆಕ್ಟ್ರಿಕಲ್ & ಇಂಡಸ್ಟ್ರೀಸ್ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಜಿ. ಎಸ್. ಚಂದ್ರಶೇಖರ್, ಹೈಟೆಕ್ ಆಸ್ಪತ್ರೆ ನಿರ್ದೇಶಕ ಡಾ| ಟಿ. ಎಸ್. ರಾವ್, ಡಿಎಚ್ಒ ಡಾ| ನಾಗಭೂಷಣ ಉಡುಪ, ಜಿಲ್ಲಾಸ್ಪತ್ರೆ ಸರ್ಜನ್ ಡಾ| ಮಧುಸೂದನ್ ನಾಯಕ್, ನಗರಸಭೆ ಸದಸ್ಯೆ ಮಾನಸ ಸಿ. ಪೈ ಭಾಗವಹಿಸಿದ್ದರು.