ನ.26ಕ್ಕೆ ಕಟಪಾಡಿ ತ್ರಿಶಾ ಕಾಲೇಜಿನ ವಿದ್ಯಾರ್ಥಿ ನಿಲಯ ಉದ್ಘಾಟನೆ
ವಿದ್ಯೆ ಎನ್ನುವುದು ವ್ಯಾಪಾರವಲ್ಲ, ಕಲಿಯಲು ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಯವತಿಯಿಂದ ವಿದ್ಯಾರ್ಥಿ ವೇತನ ಸಹಿತ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರಕುವ ಸವಲತ್ತುಗಳನ್ನು ಸಂಸ್ಥೆ ನಿಗ ವಹಿಸಿ ಅವರಿಗೆ ತೆಗೆಸಿಕೊಳ್ಳುವ ಮೂಲಕ ಮಕ್ಕಳ ವಿದ್ಯಾರ್ಜನೆ ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಬುದಾಗಿ ಸಂಸ್ಥೆಯ ಪ್ರಾಂಶುಪಾಲ ಗುರುಪ್ರಸಾದ್ ರಾವ್ ಹೇಳಿದ್ದಾರೆ.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಕಟಪಾಡಿಯ ಹೃದಯ ಭಾಗದಲ್ಲಿ ಕಾರ್ಯಚರಿಸುತ್ತಿರುವ ನಮ್ಮ ತ್ರಿಶಾ ಪದವಿ ಕಾಲೇಜು ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಕೌಶಲ್ಯ, ನೈತಿಕ ಶಿಕ್ಷಣ, ಸಾಮಾಜಿಕ ಬದ್ದತೆ, ಶಿಸ್ತುಬದ್ದ ಜೀವನ ಶೈಲಿ, ಏಕತೆ, ಐಕ್ಯತೆಯ ಮಹತ್ವ, ದೇಶ ಪ್ರೇಮವನ್ನು ಉದ್ದೀಪನಗೊಳಿಸುವ ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳು ಬದುಕನ್ನು ಸಮರ್ಥವಾಗಿ ರೂಪಿಸಿಕೊಳ್ಳುವ ಶಿಕ್ಷಣವನ್ನು ಈ ಸಮೂಹ ವಿದ್ಯಾಸಂಸ್ಥೆ ಯಲ್ಲಿ ನೀಡಲಾಗುತ್ತಿದೆ. ಇದೀಗ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನ ವಿಸ್ತೃತ ನೂತನ ಕಟ್ಟಡ ಮತ್ತು “ಸಂಸ್ಕ್ರತಿ” ಎಂಬ ನಾಮಾಂಕಿತ ಸುಸಜ್ಜಿತ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗಿದ್ದು, ಅದರ ಉದ್ಘಾಟನೆಯನ್ನು ಗೋವಾ ರಾಜ್ಯದ ವಿದ್ಯಾಧೀಶ ತೀರ್ಥ ವಡೇರ ಶ್ರೀಗಳು ನೆರವೇರಿಸಲಿದ್ದು, ನಿಟ್ಟೆ ವಿದ್ಯಾಸಂಸ್ಥೆಯ ಪ್ರಮುಖರಾದ ವಿನಯ ಹೆಗ್ಡೆ, ಉದ್ಯಮಿ ಕೆ. ಸತ್ಯೇಂದ್ರ ಪೈ ಸಹಿತ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಎ.ಗೋಪಾಲಕೃಷ್ಣ ಭಟ್ ಭಾಗವಹಿಸಲಿದ್ದಾರೆ ಎಂದರು. ಸುದ್ಧಿಗೋಷ್ಠಿಯಲ್ಲಿ ಸಂಸ್ಥೆಯ ಆಢಳಿತಾಧಿಕಾರಿ ವಿ.ಕೆ. ಉದ್ಯಾವರ್, ಸಿಬ್ಬಂದಿ ಸುರೇಶ್ ಭಟ್ ಉಪಸ್ಥಿತರಿದ್ದರು.