ಸಮಾನ ಮನಸ್ಕ ಸಂಘಟನೆಗಳ ಜನಪರ ಸೇವೆಗಳು ಸಮಾಜದ ಸ್ವಾಸ್ಥ ಕಾಪಾಡುತ್ತದೆ : ವರ್ಗೀಸ್ ಪಿ

ಸಮಾನ ಮನಸ್ಕ ಸಂಘಟನೆಗಳ ಜನಪರ ಸೇವೆಗಳು ಸಮಾಜದ ಸ್ವಾಸ್ಥ ಕಾಪಾಡುತ್ತದೆ. ಇಂತಹ ಅರೋಗ್ಯ ಶಿಬಿರಗಳು ನಿರಂತರ ನಡೆಯುತ್ತಿದ್ದರೆ ಸಾರ್ವಜನಿಕರಿಗೆ ಬಹಳ ಉಪಯೋಗವಾಗುವುದು ಎಂದು ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವರ್ಗೀಸ್ ಪಿ. ಹೇಳಿದರುಅವರು ಸುಮನಸಾ ಕೊಡವೂರು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯ, ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ, ಹಳೆ ವಿದ್ಯಾರ್ಥಿ ಸಂಘ ಮಲ್ಪೆ, ಫಿಶರೀಶ್ ಶಾಲೆ ಮಲ್ಪೆ ಇದರ ಜಂಟಿ ಆಶ್ರಯದಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಕೊಡವರು ಬಿ. ಉಪ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ರಕ್ತದ ಒತ್ತಡ, ಮಧುಮೇಹ ಬೂಸ್ಟರ್ ಲಸಿಕೆ, ಅಭಾ ಕಾರ್ಡ್ ನೋಂದಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಈ ಸಂಧರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಎಸ್ ಕೆಪಿಎ ಜಿಲ್ಲಾ ಜೊತೆ ಕಾರ್ಯದರ್ಶಿ ವಾಮನ್ ಪಡುಕರೆ, ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಗೌರವಾಧ್ಯಕ್ಷ ಮಹೇಶ್ ಎಂ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋಪಾಲ್ ಸಿ ಬಂಗೇರ, ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕುಸುಮ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ। ಆನಂದ್ ಪಿ ಶುಕ್ಲ, ಕಾಂತಪ್ಪ ಕರ್ಕೇರ, ಎಂ ಎಸ್ ಭಟ್ ರವರು ಉಪಸ್ಥಿತರಿದ್ದರು

ಶಾಲಾ ಸಿಬ್ಬಂದಿ ವರ್ಗ ಮತ್ತು ಶಾಲಾ ಮಕ್ಕಳು ದಂತ ವೈದ್ಯಕೀಯ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಕೊಡವೂರಿನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷ ಜನಾರ್ಧನ್ ಕೊಡವೂರು ಧನ್ಯವಾದವಿತ್ತರು. ಸುಮನಸಾ ಜೊತೆ ಕಾರ್ಯದರ್ಶಿ ಗಣೇಶ್ ಸಗ್ರಿ ಹಾಗು ಕಾರ್ಯದರ್ಶಿ ಚಂದ್ರಕಾಂತ ಕುಂದರ್ ನಿರೂಪಿಸಿದರು.

ವರದಿ: ಜಯಂತ್ ಐತಾಳ್ಉಡುಪಿ

97437 80016

Related Posts

Leave a Reply

Your email address will not be published.