ಉಡುಪಿಯಲ್ಲಿ ನಡೆದ ಸಂಸ್ಕøತೋತ್ಸವ-2022

ಸಂಸ್ಕøತ ಭಾಷೆಯ ಪ್ರಚಾರದ ಉದ್ದೇಶದಿಂದ ಸಂಸ್ಕøತ ಸಪ್ತಾಹ ಎಂಬುದಾಗಿ ಏಳುದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಿದ್ದರು. ಈ ಪ್ರಯುಕ್ತ ಉಡುಪಿಯ ಸಂಸ್ಕøತ ಭಾರತೀ ಘಟಕವೂ, ಉಡುಪಿಯ ತೆಂಕುಪೇಟೆಯಲ್ಲಿರುವ ಶ್ರೀ ವೆಂಕಟರಮಣ ದೇವಾಲಯ ಸಮೀಪದ, ಸಂಸ್ಕøತ ಭಾರತೀ ಕಾರ್ಯಾಲಯದಲ್ಲಿ ಆಗಸ್ಟ್ 11, 2022 ರಿಂದ ಆಗಸ್ಟ್ 15, 2022 ರವರೆಗೆ “ಸಂಸ್ಕøತೋತ್ಸವ -2022” ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮೊದಲ ದಿನ ಆಗಸ್ಟ್ 11 ರಂದು ಅತಿಥಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಅನಂತರ ಬಾಲಕೇಂದ್ರ ಮಕ್ಕಳಿಂದ ಭವತು ಭಾರತಮ್'' ಶಿಶುಗೀತೆ, ಕಾರ್ಯಕರ್ತರು ಹಾಗೂ ಕಿಶೋರ ಮಕ್ಕಳಿಂದಶ್ರಮಸ್ಯ ಫಲಂ” ಎನ್ನುವ ಲಘು ಸಂಸ್ಕøತ ನಾಟಕ, ಚಿಕ್ಕಮಕ್ಕಳಿಂದ ಶಾಖಾವಿಪಣಿಃ ನೃತ್ಯಗೀತಮ್'', ಕೀಶೋರ ಮಕ್ಕಳಿಂದತಾಟಕೀ ಸಂಹಾರ” ಲಘು ನಾಟಕ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು. ಎರಡನೇ ದಿನ ಆಗಸ್ಟ್ 12 ರಂದು ವಿದ್ವಾನ್ ಎಚ್ ಎನ್ ನಟರಾಜಃ ಹಾಗೂ ಡಾ| ರಾಘವೇಂದ್ರ ರಾವ್ ಇವರಿಂದ ಕಾಳಿದಾಸನ ಪ್ರಸಿದ್ಧ ಕಾವ್ಯ ಅಭಿಜ್ಞಾನಶಾಕುಂತಲಮ್ ನಾಟಕದ 5ನೇ ಅಂಕದ “ಶಕುಂತಲಾ ಪರಿತ್ಯಾಗ” ಎನ್ನುವ ಭಾಗದ ಗಾನ ವ್ಯಾಖ್ಯಾನ ಕಾರ್ಯಕ್ರಮ ಜರುಗಿತ್ತು.

ಮೂರನೇ ದಿನ ಆಗಸ್ಟ್ 13 ರಂದು, ಬಾಲಕೇಂದ್ರದ ಮಕ್ಕಳು ತಾಯಂದಿರನ್ನು ಪೂಜಿಸಿ ಆರ್ಶೀವಾದ ಪಡೆದ ಮಾತೃಪೂಜನಾ'' ಕಾರ್ಯಕ್ರಮ ನಡೆಯಿತು. ಇದರೊಂದಿಗೆ, ಅಂದಿನ ಮುಖ್ಯ ಅತಿಥಿಯಾದ ಪಾಂಡುರಂಗ ಶಾನುಭಾಗ್ ಇವರುಮಾತೃಪೂಜೆಯ ಮಹತ್ವ” ಈ ವಿಷಯದಲ್ಲಿ ಸಂದೇಶವನ್ನು ನೀಡಿದರು. ಕಿಶೋರ ಮಕ್ಕಳಿಂದ ಮಮ ಮಾತಾ ದೇವತಾ'' ಎನ್ನುವ ಗೀತ ಗಾಯನ ಮತ್ತು ಕಾರ್ಯಕ್ರಮದ ಅಂತ್ಯದಲ್ಲಿ ಕಾರ್ಯಕರ್ತರಿಂದಜಾಗೃಹಿತ್ವಂ ಭಾರತೀಯ” ಗಣಗೀತೆ ಜರುಗಿತ್ತು.

ನಾಲ್ಕನೇ ದಿನ ಆಗಸ್ಟ್ 14 ರಂದು ಸಂಸ್ಕøತ ಭಜನಾ ಮಂಡಳಿ ಉಡುಪಿ, ಇದರ ಸದಸ್ಯರಿಂದ ಸಂಸ್ಕøತ ಭಜನೆ, ಕಿಶೋರ ಕೇಂದ್ರದ ಮಕ್ಕಳಿಂದ “ಗುರೋಃ ಮಹತ್ವಂ” ಎನ್ನುವ ಸಂಸ್ಕøತ ಲಘು ನಾಟಕ, ವಾಲ್ಮೀಕಿ ರಾಮಾಯಣದಲ್ಲಿನ ಬಾಲಕಾಂಡದ ವಿಷಯದಲ್ಲಿ ರಸಪ್ರಶ್ನೆ, ಬಾಲಕೇಂದ್ರ ಮಕ್ಕಳಿಂದ ಪ್ರಾಣಿ ಪಕ್ಷಿಗಳ ಕೂಗುವಿಕೆಯ ಜೊತೆ ಅಭಿನಯ ನೃತ್ಯ ನಡೆಯಿತು.

ಕೊನೆಯ ದಿನ ಆಗಸ್ಟ್ 15 ರಂದು ಐದು ದಿನಗಳ ಕಾಲ ನಡೆದ ಸಂಸ್ಕøತೋತ್ಸವ ? 2022'' ಸಮಾರೋಪ ಸಮಾರಂಭ ನಡೆಯಿತು. ಭಾರತ ಮಾತೆಗೆ ದೀಪ ಹಚ್ಚುವ ಮೂಲಕ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿದ್ಯೋದಯ ಗ್ರೂಪ್ ಆಫ್ ಇನ್ಸ್ಟಿಟ್ಯುಶನ್‍ನ ಜಂಟಿ ಕಾರ್ಯದರ್ಶಿಯಾದ ಶ್ರೀಮತಿ ರೂಪಾ ಬಲ್ಲಾಳ್‍ರವರು ಸಭೆಯನ್ನು ಉದ್ದೇಶಿಸಿ, ಸಂಸ್ಕøತ ಪ್ರಾಚೀನವಾದ ಶ್ರೇಷ್ಠ ಭಾಷೆ, ಸಮಾಜದ ಎಲ್ಲರೂ ಸಂಸ್ಕøತವನ್ನು ಕಲಿಯಬೇಕು ಹಾಗೂ ಬೇರೆಯವರಿಗೆ ಕಲಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಭಾಧ್ಯಕ್ಷರಾದ ಸಂಸ್ಕøತ ಭಾರತಿ ಉಡುಪಿಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಮತಿ ಸುಧಾ ಶೆಣೈ ಅವರು, ಸಂಸ್ಕøತವನ್ನು ಕಲಿಯುವವರು ಇಂದು ಹೆಚ್ಚುತ್ತಿದ್ದಾರೆ. ಆದರೆ ಸರಿಯಾಗಿ ಕಲಿಸುವವರ ಕೊರತೆಯಿದೆ. ಆದುದರಿಂದ ಎಲ್ಲರೂ ಸಂಸ್ಕøತವನ್ನು ಕಲಿತು ಬೇರೆಯವರಿಗೆ ಕಲಿಸುವಂತಾಗಬೇಕು.

ಹಾಗೂ ಎಲ್ಲಾ ಶಾಲೆಗಳಲ್ಲಿಯೂ ಸಂಸ್ಕøತವನ್ನು ಪ್ರಾರ್ಥಮಿಕ ಶಿಕ್ಷಣದಲ್ಲಿಯೇ ಕಲಿಸಬೇಕೆಂದು ಕರೆ ನೀಡಿದರು. ಇನ್ನು ಸಂಸ್ಕøತ ಭಾರತೀ ಉಡುಪಿ ಜಿಲ್ಲಾ ಇದರ ಸಂಯೋಜಕರಾದ ಶ್ರೀ ನಟೇಶ್ ಅವರು ಸಂಸ್ಕøತ ಭಾರತೀಯ ಪರಿಚಯ ಮಾಡುತ್ತಾ, ಸರಳವಾಗಿ ಸಂಸ್ಕøತ ಸಂಭಾಷಣಾ ಶಿಬಿರಗಳ ಮುಖಾಂತರ ಸಾಮಾನ್ಯರೂ ಅತೀ ಕಡಿಮೆ ಸಮಯದಲ್ಲಿ ಕಲಿಯಲು ಸಾಧ್ಯ ಎಂಬುದಾಗಿ, ಸ್ವ ಉದಾಹರಣೆಯ ಮೂಲಕ ತಿಳಿಸಿ ಎಲ್ಲರೂ ಸಂಸ್ಕøತ ಕಲಿಯುವಂತೆ ವಿನಂತಿಸಿದರು. ಸಂಸ್ಕøತ ಭಾರತೀಯ ಕಾರ್ಯಕರ್ತರಾದ ಶ್ರೀಮತಿ ವಿದ್ಯಾ ಭಗಿನಿ ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರ ಕಾರ್ಯಕರ್ತರಿಂದಅವನಿತಲಂ” ಗಣಗೀತೆ, ಕಿಶೋರ ಮಕ್ಕಳಿಂದ ಭಾರತ ವೈಭವಮ್'', ಚಿಕ್ಕಮಕ್ಕಳಿಂದ ಅಭಿನಯ ನೃತ್ಯವಾಹನಾನಿ” ನಡೆಯಿತು. ಕೊನೆಯದಾಗಿ ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಸಮಾಪ್ತಗೊಂಡಿತು.

Related Posts

Leave a Reply

Your email address will not be published.